ಸುಲಭವಾಗಿ ಕೋವಿಡ್ ಪರೀಕ್ಷೆ ನಡೆಸುವ ‘ಕೋವಿಡ್ ಆ್ಯಂಟಿಜೆನ್ ಕಿಟ್’ ಗಿರಿಜಾ ಹೆಲ್ತ್ ಕೇರ್ ನಲ್ಲಿ ಲಭ್ಯ
ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ಎಲ್ಲಾ ಬಗೆಯ ವೈದ್ಯಕೀಯ ಪರಿಕರಗಳನ್ನು ಪೂರೈಸುವ ಕರಾವಳಿಯ ಪ್ರಸಿದ್ಧ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ನಲ್ಲಿ ‘ಕೋವಿಡ್ ಆ್ಯಂಟಿಜೆನ್ ಕಿಟ್’ ಕೂಡಾ ಲಭ್ಯವಿದೆ. ಈ ಕಿಟ್ ನಲ್ಲಿ ಕೋವಿಡ್-19 ಆ್ಯಂಟಿಜೆನ್ ಟೆಸ್ಟ್ ಕಾರ್ಡ್ಸ್, ಎಕ್ಸ್ ಟ್ರಾಕ್ಷನ್ ಡ್ರಾಪರ್ ಬಾಟಲ್, ಎಕ್ಸ್‌ಟ್ರಾಕ್ಷನ್ ಟ್ಯೂಬ್ ಮತ್ತು ನೋಝಲ್ಸ್ , ಮತ್ತು ಆ್ಯಂಟಿಜೆನ್ ಟೆಸ್ಟ್ ನ್ನು ಯಾವ ರೀತಿ ನಡೆಸಲಾಗುತ್ತದೆ ಎಂಬ ಕುರಿತ ಮಾಹಿತಿಯನ್ನೊಳಗೊಂಡ ಚೀಟಿ ಮತ್ತು ಸ್ಟಿರಾಯ್ಲ್ ನೀಝನ್ ಸ್ವಾಬ್ಸ್.
ಈ ಕಿಟ್ ಮೂಲಕ ಎಕ್ಸ್ ಟ್ರಾಕ್ಷನ್ ಬಫರ್ ನ 10ರಿಂದ 12 ಹನಿಯನ್ನು ಎಕ್ಸ್ ಟ್ರಾಕ್ಷನ್ ಟ್ಯೂಬ್ ಗೆ ಹಾಕಬೇಕು, ಬಳಿಕ ಸ್ವಾಬ್ ಸ್ಪೆಸಿಮೆನ್ ನ್ನು ಸಂಗ್ರಹಿಸಿ ಎಕ್ಸ್ ಟ್ರಾಕ್ಷನ್ ಟ್ಯೂಬ್ ನಲ್ಲಿರುವ ಎಕ್ಸ್ ಟ್ರಾಕ್ಷನ್ ಬಫರ್ ನೊಂದಿಗೆ ಮಿಶ್ರ ಮಾಡಿ 30 ಸೆಕೆಂಡು ಗಳವರೆಗೆ ಅವುಗಳನ್ನು ಸರಿಯಾಗಿ ಮಿಶ್ರವಾಗುವಂತೆ ಮಾಡಬೇಕು. ಬಳಿಕ ನೋಝಲ್ ನ್ನು ಸ್ವಾಬ್ ಮಿಶ್ರಿತ ಎಕ್ಸ ಟ್ರಾಕ್ಷನ್ ಟ್ಯೂಬ್ ಗೆ ಮುಚ್ಚಬೇಕು. ನಂತರ 2 ಹನಿ ಮಿಶ್ರಣವನ್ನು ಆಂಟಿಜನ್ ಟೆಸ್ಟ್ ಕಾರ್ಡ್ ನ ಸ್ಯಾಂಪಲ್ ವೆಲ್ ಗೆ ಹಾಕಬೇಕು. ಹೀಗೆ ಮಾಡಿದ 20 ನಿಮಿಷಗಳ ಬಳಿಕ ಟೆಸ್ಟ್ ನ ರಿಸಲ್ಟ್ ಬರುತ್ತದೆ. ಈ ರೀತಿ ಸುಲಭವಾಗಿ ಕೋವಿಡ್ ಪರೀಕ್ಷೆ ನಡೆಸಬಹುದಾದ ಕೋವಿಡ್ ಆ್ಯಂಟಿಜೆನ್ ಕಿಟ್ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ನಲ್ಲಿ ಲಭ್ಯವಿದೆ.