ವಿದೇಶಕ್ಕೆ ಹೋಗುವ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ದೃಡೀಕರಣ ಪತ್ರ ಅಗತ್ಯವಿಲ್ಲ

ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ವ್ಯಾಸಾಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗ ನಿಮಿತ್ತ ವಿದೇಶಕ್ಕೆ
ತೆರಳುವವರಿಗೆ ಲಸಿಕೆ ಪಡೆಯುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರ ಕಚೇರಿಯಿಂದ ಅನೆಕ್ಟರ್-3 ನೀಡಲಾಗುತ್ತಿದೆ. ಆದರೆ ಹೊರದೇಶಕ್ಕೆ ಉದ್ಯೋಗ ನಿಮಿತ್ತ ಹೋಗುವವರಲ್ಲಿ 45 ವರ್ಷ ಮೇಲ್ಪಟ್ಟವರು ಜಿಲ್ಲಾಧಿಕಾರಿ ಕಚೇರಿಗೆ ಅನಕ್ಸರ್ ಗಾಗಿ
ಬರುತ್ತಿದ್ದು, ಈ ವಯೋಮಾನದವರು ಅನಕ್ಟರ್-3 ಗಾಗಿ ಈ ಕಚೇರಿಗೆ ಬಾರದೆ, ನೇರವಾಗಿ ತಮ್ಮ ಸಮೀಪದ ಸರಕಾರಿ ಆಸ್ಪತ್ರೆ
/ಪ್ರಾಥಮಿಕ ಆರೋಗ್ಯದ ಲಸಿಕಾ ಕೇಂದ್ರಗಳಲ್ಲಿ ತಮ್ಮ ಪಾಸ್ ಪೋರ್ಟ್ ನ್ನು ಗುರುತಿನ ಚೀಟಿ (Identity Card)) ಆಗಿ ಬಳಸಿ ಲಸಿಕೆ ಪಡೆಯಲು ಪಡೆಯಬಹುದಾಗಿದೆ.

ಲಸಿಕೆ ಪಡೆಯುವ ಸಂದರ್ಭದಲ್ಲಿ Cowin ವೋರ್ಟ್ ನಲ್ಲಿ ಪಾಸ್‌ಪೋರ್ಟ್ ನ್ನು ಗುರುತಿನ ಚೀಟಿಯಾಗಿ (IdentityCard)) ದಾಖಲು ಮಾಡಿಸುವಂತೆ ಹಾಗೂ ಲಸಿಕೆ ಪಡೆಯುವಲ್ಲಿ ಗೊಂದಲಗಳಿದ್ದರೆ ದೂ.ಸಂ.0820-2574802 ಅಥವಾ 1077ನ್ನು ಸಂಪರ್ಕಿಸುವOತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!