ಅನರ್ಹ ಪಡಿತರ ಚೀಟಿ ಹಿಂತಿರುಗಿಸಲು ಜೂ.30 ಕೊನೆಯ ಅವಕಾಶ- ಜಿಲ್ಲಾಧಿಕಾರಿ

ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ):ಜಿಲ್ಲೆಯಲ್ಲಿ 2011 ರ ಜನಗಣತಿಯಲ್ಲಿ 2,95,984 ಕುಟುಂಬಗಳು ದಾಖಲಾಗಿದ್ದು,
ಪ್ರಸ್ತುತ ಮೇ ಅಂತ್ಯದವರೆಗೆ 28,264 ಅಂತ್ಯೋದಯಅನ್ನ ಮತ್ತು 1,61,987 ಆದ್ಯತಾ ಸೇರಿಒಟ್ಟು 1,90,251 ಕುಟುಂಬಗಳಿಗೆ

ಆದ್ಯತಾ (ಬಿ.ಪಿ.ಎಲ್) ಪಡಿತರಚೀಟಿ ಹಾಗೂ 1,05,733 ಕುಟುಂಬಗಳಿಗೆ ಆದ್ಯತೇತರ (ಎಪಿಎಲ್) ಪಡಿತರ ಚೀಟಿ ನೀಡಲಾಗಿರುತ್ತದೆ. ತೆಗೆದುಕೊಳ್ಳದ ಸರ್ಕಾರದಅಥವಾ ಸರ್ಕಾರದಿಂದಅನುದಾನ ಪಡೆಯುತ್ತಿರುವ ಸಂಸ್ಥೆಗಳು ಹಾಗೂ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡ0ತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ಹಾಗೂ ವೃತ್ತಿತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಭಾಗದಲ್ಲಿಮೂರು ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ ಸಾವಿರಚದರಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವಂತ ಓಡಿಸುವ ಒOದು ವಾಣಿಜ್ಯ ವಾಹನವಾದ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದಕುಟುOಬವನ್ನು ಹೊರತುಪಡಿಸಿನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕಆದಾಯ 1.20 ಲಕ್ಷರೂ. ಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು ಅಂತ್ಯೋದಯ ಅನ್ನ ಮತ್ತು ಆದ್ಯತಾ ಪಡಿತರ (ಬಿಪಿಎಲ್) ಪಡೆಯಲು ಅರ್ಹರಿರುವುದಿಲ್ಲ.

ಆರ್ಥಿಕವಾಗಿ ಸಬಲರು ಮತ್ತುಇತರ ಅನರ್ಹರು ಹೊಂದಿರುವ ಅOತ್ಯೋದಯಅನ್ನ ಮತ್ತುಆದ್ಯತಾ (ಬಿಪಿಎಲ್) ಪಡಿತರ ಚೀಟಿ ಗಳನ್ನು ಹಿಂದಿರುಗಿಸಿ, ಆದ್ಯತೇತರ ಪಡಿತರ ಚೀಟಿಯನ್ನು ಪಡೆದಿರುತ್ತಾರೆ.ಸರ್ಕಾರ ನಿಗಧಿ ಪಡಿಸಿರುವ ಮಾನದಂಡಗಳಿಗೆ ವಿರುದ್ಧ ವಾಗಿ ಆದ್ಯತಾ (ಬಿಪಿಎಲ್) ಪಡಿತರಚೀಟಿ ಹೊಂದಿರುವವರು ಜೂನ್ 30ರ ಒಳಗೆ ಆಯಾತಾಲೂಕಿನ ತಹಶೀಲ್ದಾರರಿಗೆ ಒಪ್ಪಿಸಿ ಆದ್ಯತೇತರ(ಎಪಿಎಲ್) ಪಡಿತರಚೀಟಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ಅಕ್ರಮ ಪಡಿತರಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955, ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ 1977 ಹಾಗೂ ಐಪಿಸಿ ಕಲಂಗಳಡಿ ಕ್ರಮ ಜರುಗಿಸಿ,ಹಂಚಿಕೆ ಪಡೆದ ಆಹಾರಧಾನ್ಯಗಳ ಮಾರುಕಟ್ಟೆ ಮೌಲ್ಯವನ್ನು ವಸೂಲಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!