ಕುಂದಾಪುರ: ತಾಲೂಕಿನ ಲಸಿಕಾ ಕೇಂದ್ರಗಳಲ್ಲಿ ಜನರು ಲಸಿಕೆಗಾಗಿ ದಿನವಿಡಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರೆ , ಬಿಜೆಪಿ ಮುಖಂಡರು ಪ್ರತಿದಿನ ಲಸಿಕಾ ಕೇಂದ್ರದ ಒಳಗಿದ್ದು ಸ್ವಜನಪಕ್ಷಪಾತ ಮಾಡಿ ಜನ ಸಾಮಾನ್ಯರಿಗೆ ಅನ್ಯಾಯ ಮಾಡುತ್ತಿದ್ದು ಇದಕ್ಕೆ ಪ್ರತ್ಯಕ್ಷ ಬೆಂಬಲ ನೀಡುತ್ತಿರುವ ತಾಲೂಕಿನ ಆರೋಗ್ಯ ಕೇಂದ್ರದ ಲಸಿಕೆ ಜವಾಬ್ದಾರಿ ಹೊತ್ತಿರುವ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆಗ್ರಹಿಸಿದ್ದಾರೆ.
ಲಸಿಕಾ ಪ್ರಾರಂಭ ದಿನದಿಂದ ವ್ಯದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತರು ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ತಾಲೂಕಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿಗಳು ಭಾರತಿಯ ಜನತಾ ಪಕ್ಷದ ಇಬ್ಬರು ಕಾರ್ಯಕರ್ತರನ್ನು ಲಸಿಕಾ ಕೇಂದ್ರದ ಒಳಗೆ ಸ್ವಯಂ ಸೇವಕರ ನೆಪದಲ್ಲಿ ಕರ್ತವ್ಯಕ್ಕೆ ಬಳಸಿಕೊಳ್ಳುತ್ರಿದ್ದಾರೆ. ಈ ಸ್ವಯಂ ಸೇವಕರು ತಮ್ಮ ಸಂಬಂಧಿಕರಿಗೆ ಕಾರ್ಯ ಕರ್ತರಿಗೆ ಲಸಿಕಾ ಟೋಕನ್ ನೀಡಿ ಲಸಿಕೆ ಹಾಕಿಸುತ್ತಿದ್ದಾರೆ. ಕೆಲವು ಕಡೆ ತಮಗೆ ಬೇಕಾದವರಿಗೆ ಮೊದಲ ದಿನವೆ ಟೋಕನ್ ನೀಡುತ್ತಿದ್ದಾರೆ. ಇದರಿಂದ ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಲ್ಲುವ ಶ್ರೀ ಸಾಮಾನ್ಯರಿಗೆ ಮತ್ತು ಹಳ್ಳಿಯ ಮುಗ್ದ ಜನರಿಗೆ ಅನ್ಯಾಯವಾಗುತ್ತಿದೆ.
ಕೋವಿಡ್ ಪ್ರತಿಬಂಧಕಾಜ್ಞೆ ಜಾರಿಯಲ್ಲಿದ್ದರೂ ಲಸಿಕಾ ಕೇಂದ್ರದ ಬಳಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಗುಂಪಿಗೆ ಅವಕಾಶ ನೀಡುತ್ತಿರುವ ಆರೋಗ್ಯ ಇಲಾಖೆಯ ನಡೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿಯವರು ಮತ್ತು ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿಯವರು ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹ. | | |