ನಮ್ಮನ್ನೂ ಪಾಸ್ ಮಾಡಿ- ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳ ಒತ್ತಾಯ

ಉಡುಪಿ ಜೂ.7(ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಗೊಳಿಸಲಾಗಿದೆ.ಇದರ ಬೆನ್ನಲ್ಲೇ ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಸರಕಾರ ತಿಳಿಸಿದೆ.

ಇದೀಗ ಸರಕಾರದ ಈ ಕ್ರಮದ ಕುರಿತು ಅಸಮಧಾನ ಹೊರ ಹಾಕಿರುವ ವಿದ್ಯಾರ್ಥಿನಿಯೊಬ್ಬರು ದ್ವಿತೀಯ ಪಿಯುಸಿ ಇತರ  ವಿದ್ಯಾರ್ಥಿಗಳಂತೆ 10 ನೇ ತರಗತಿ ಹಾಗೂ ಪಿಯುಸಿ ಅಂಕಗಳ ಆಧಾರದಲ್ಲಿ ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನೂ ಪಾಸ್ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಅವರು, ಕೋವಿಡ್  ಸೋಂಕಿನ ಭಯದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು ಗೊಳಿಸಿದ್ದೀರಾ. ಹೀಗಿರುವಾಗ ನಾವು ಪರೀಕ್ಷೆ ಬರೆಯುವಾಗ ನಮಗೆ ಕೊರೋನಾ ಹರಡುವುದಿಲ್ಲವೇ. ಇದು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬತಾಗಿಲ್ಲವೇ ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ. ಹಾಗೂ ತಮಗೂ ವಾಕ್ಸಿನೇಶನ್ ಆಗಿಲ್ಲದ ಕಾರಣ ಕೋವಿಡ್ ಭಯ ಇದೆ. ಆದ್ದರಿಂದ ಇತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಂತೆ ತಮ್ಮನ್ನೂ ಪಾಸ್ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

9 thoughts on “ನಮ್ಮನ್ನೂ ಪಾಸ್ ಮಾಡಿ- ದ್ವಿತೀಯ ಪಿಯುಸಿ ಪುನರಾವರ್ತಿತ ವಿದ್ಯಾರ್ಥಿಗಳ ಒತ್ತಾಯ

  1. ಸರ್ ನಮ್ಮನ್ನು ಪರಿಗಣಿಸಿ ೧೦ನೇ ತರಗತಿ ಪ್ರ ಥಮ ಪಿ ಯು ಸಿ ಅಂಕಗಳ ಆಧಾರದ ಮೇಲೆ ಪಾಸ್ ಮಾಡಿ

  2. ಇದು ಸರ್ಕಾರದ ಮೊಂಡು ನಿರ್ಧಾರ, ಖಾಯಂ ವಿದ್ಯಾರ್ಥಿಗಳಂತೆ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರಿಗಣಿಸಿ ಇವರನ್ನೂ ಸಹ ಪಾಸ್ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!