ಅಲ್ ಕಿದ್ಮಾ ಗ್ರೂಪ್ ಉದ್ಯಾವರ: ಅಂಬ್ಯುಲೆನ್ಸ್ ಲೋಕಾರ್ಪಣೆ
ಉದ್ಯಾವರ(ಉಡುಪಿ ಟೈಮ್ಸ್ ವರದಿ): ಉದ್ಯಾವರ ಗ್ರಾಮ ಮತ್ತು ಆಸುಪಾಸಿನ ಸಾರ್ವಜನಿಕರಿಗೆ ತುರ್ತು ಸಂದರ್ಭಗಳಲ್ಲಿ ಸಹಕಾರಿಯಾಗುವಂತೆ ಅತ್ಯಂತ ವ್ಯವಸ್ಥಿತವಾದ ಆಂಬ್ಯುಲೆನ್ಸ್ ಒಂದನ್ನು ಸಮಾನ ಮನಸ್ಕ ಯುವಕರ ತಂಡವೊಂದು ಲೋಕಾರ್ಪಣೆಗೊಳಿಸಿದೆ.
ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ರಿಯಾಝ್ ಪಳ್ಳಿ ನೇತತ್ವದಲ್ಲಿ ಸಮಾನ ಮನಸ್ಕ 7 ಯುವಕರು, ಉದ್ಯಾವರ ಮತ್ತು ಆಸುಪಾಸಿನ ಜನತೆಗೆ ತುರ್ತು ಸಂದರ್ಭಗಳಲ್ಲಿ ಸರಿಯಾದ ವ್ಯವಸ್ಥಿತ ಅಂಬ್ಯುಲೆನ್ಸ್ ಇಲ್ಲದ್ದನ್ನು ಮನಗಂಡು, ದಾನಿಗಳ ಸಹಕಾರದಿಂದ ಅತ್ಯಂತ ಸುಸಜ್ಜಿತವಾದ ಆಂಬ್ಯುಲೆನ್ಸ್ ಒಂದನ್ನು ಜನತೆಗೆ ಒದಗಿಸಿದ್ದಾರೆ.
ಪ್ರಮುಖ ದಾನಿ ಶೇಖ್ ವಾಹಿದ್ ಅಂಬ್ಯುಲೆನ್ಸ್ ಕೀ ಯುವಕರ ತಂಡಕ್ಕೆ ಹಸ್ತಾಂತರಿಸಿ ಮಾತನಾಡಿ, ಪ್ರಸ್ತುತ ಕಾಲದ ಯುವಕರು ಕೆಲಸ ಮಾಡುತ್ತೇವೆ ಎಂದು ಹೇಳುವ ಬದಲು, ಮಾಡಿ ತೋರಿಸಬೇಕು. ಅಂತಹ ಕೆಲಸವನ್ನು ಖಿದ್ಮಾ ಗ್ರೂಪ್ ನಡೆಸಿದೆ. ಇಂತಹ ಯುವಕರಿಂದ ಸಮಾಜಕ್ಕೆ ಉತ್ತಮ ಸೇವೆ ದೊರಕಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್ ಮಾತನಾಡಿ, ನಾವೆಲ್ಲರೂ ಮಂಜುನಾಥ ಉದ್ಯಾವರ ರವರ ಗರಡಿಯಲ್ಲಿ ಬೆಳೆದವರು. ಈ ಯುವಕರು ಕೊರೋನಾ ಸಂಕಷ್ಟದ ಸಮಯದಲ್ಲಿ ಯಾವುದೇ ಪ್ರಚಾರ ಮತ್ತು ಲಾಭದ ಆಸೆಯಿಲ್ಲದೆ ಗ್ರಾಮಕ್ಕೆ ವಿಶೇಷವಾದ ಸೇವೆ ನೀಡಿದ್ದಾರೆ, ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮೂಡಬೆಟ್ಟು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ರವರ ಕಾರ್ಯದರ್ಶಿ ನಾಗೇಶ್ ಕುಮಾರ್ ಉದ್ಯಾವರ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಗಿರೀಶ್ ಕುಮಾರ್, ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಸತ್ತಾರ್, ಪ್ರಮುಖರಾದ ರೋಯ್ಸ್ ಫೆರ್ನಾಂಡಿಸ್, ಅಬ್ದುಲ್ ಅಜೀಜ್, ಆಬಿದ್ ಅಲಿ, ಸಾದಿಕ್ ಹಮ್ಜಾ, ಇಮ್ತಿಯಾಝ್ ಭಾಷಾ, ಇಸ್ತಿಯಾಕ್, ಮಹಮ್ಮದ್ ಆದಿಲ್, ಅನ್ಸಾರ್ ಸತ್ತಾರ್, ನಯಾಜ್ ಸಾಬ್ಜು ಮತ್ತಿತರರು ಉಪಸ್ಥಿತರಿದ್ದರು.
ಖಿದ್ಮಾ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಉದ್ಯಾವರ ಮತ್ತು ಆಸುಪಾಸಿನ ಜನತೆಯ ತುರ್ತು ಅವಶ್ಯಕತೆಗಳಿಗಾಗಿ 24X7 ಮಾದರಿಯಲ್ಲಿ ಸೇವೆ ನೀಡಲಿದೆ.
ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ನಮ್ಮ ದೂರವಾಣಿ ಸಂಖ್ಯೆಗಳು :9449322918 / 9591635408 / 9880922616 / 9880204985 9901176819/ 9964667144 / 9449588406