ವೈರಲ್ ಆಯಿತು ಉಡುಪಿಯ ಮಿತ್ರ ಸಮಾಜದ ಕುಂಬಳಕಾಯಿ!
ಉಡುಪಿ ಜೂ.6(ಉಡುಪಿ ಟೈಮ್ಸ್ ವರದಿ): ಲಾಕ್ ಡೌನ್ ಹಿನ್ನೆಲೆ ಮುಚ್ಚಿರುವ ಹೋಟೆಲ್ ಕಟ್ಟಡ ದ ಮೇಲೆ ಕುಂಬಳಕಾಯಿ ಬಳ್ಳಿಯೊಂದು ಯಾರ ಹಂಗು ಇಲ್ಲದೆ ಆರಾಮವಾಗಿ ಬೆಳೆದು ಹರಡಿರುವ ದೃಶ್ಯ ಉಡುಪಿಯಲ್ಲಿ ಕಂಡು ಬಂದಿದೆ ಜಿಲ್ಲೆಯಲ್ಲಿ ಎಲ್ಲೆಡೆ ಲಾಕ್ ಡೌನ್ ನ ಎಫೆಕ್ಟ್ ಜೋರಾಗೇ ಇದೆ.
ಈ ನಡುವೆ ಲಾಕ್ ಡೌನ್ ನಿಂದ ಹೊಟೇಲ್ ಉದ್ಯಮಗಳು ಸ್ಥಬ್ದವಾಗಿದೆ. ಒಂದೆಡೆ ಹೊಟೆಲ್ ಬಾಗಿಲು ಮುಚ್ಚಿದ್ದರೆ ಮತ್ತೊಂದೆಡೆ ಹೊಟೆಲ್ ಎದುರು ಬೆಳೆದ ಕುಂಬಳಕಾಯಿಯ ಬಳ್ಳಿಯೊಂದು ಸಮೃದ್ಧ ವಾಗಿ ಬೆಳೆದು ಫಲ ನೀಡುತ್ತಿದೆ. ಈ ದೃಶ್ಯ ಕಂಡು ಬಂದಿದ್ದು, ಉಡುಪಿಯ ರಥಬೀದಿಯ ಹೋಟೆಲ್ ಮಿತ್ರಸಮಾಜದಲ್ಲಿ. ಕಳೆದ ಕೆಲವು ತಿಂಗಳಿಂದ ಈ ಹೋಟೆಲ್ ಬಂದ್ ಆಗಿದ್ದು ಹೋಟೆಲ್ ನ ಬೋರ್ಡ್ ಮೇಲೆ ಕುಂಬಳಕಾಯಿ ಬಳ್ಳಿ ಬೆಳೆದು ಅದರಲ್ಲಿ ಕುಂಬಳಕಾಯಿ ಬೆಳೆದು ದೊಡ್ಡದಾಗಿದೆ. ಜಿಲ್ಲೆಯಲ್ಲಿ ಕಳೆದ ತಿಂಗಳಿನಿಂದ ಹೋಟೆಲ್ ಉದ್ಯಮ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಹೋಟೆಲ್’ಗಳಲ್ಲಿ ಕೆಲಸ ಮಾಡುತ್ತಿದ್ದ ಅನೇಕ ನೌಕರರು ಕೆಲಸ ಕಳೆದುಕೊಳ್ಳುವಂತಾಗಿದೆ. ಹಾಗಾಗಿ ಯಾವಾಗ ಕೊರೋನಾ ಮುಗಿಯುತ್ತೋ…. ಯಾವಾಗ ಈ ಲಾಕ್ ಡೌನ್ ಮುಗಿಯುತ್ತೋ ಎಂದು ಎಲ್ಲರೂ ಕಾಯುತ್ತಿದ್ದಾರೆ.