| ಬೆಂಗಳೂರು: ‘ನನ್ನ ಮೇಲೆ ಹೈಕಮಾಂಡ್ ವಿಶ್ವಾಸ ಇಟ್ಟಿದೆ. ಎಷ್ಟು ದಿನ ಹೈಕಮಾಂಡ್ ವಿಶ್ವಾಸ ಇಟ್ಟು ಮುಂದುವರೆಯಿರಿ ಅಂತಾರೋ ಅಲ್ಲಿಯವರೆಗೂ ಇರುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸುದ್ದಿಗಾರರ ಜೊತೆ ಇಂದು ಬೆಳಿಗ್ಗೆ ಮಾತನಾಡಿದ ಅವರು, ‘ಯಾವಾಗ ರಾಜೀನಾಮೆ ಕೊಡಿ ಎಂದು ಹೈಕಮಾಂಡ್ ಹೇಳುತ್ತಾರೊ ಆಗ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಇದರಲ್ಲು ಯಾವುದೇ ಗೊಂದಲದಲ್ಲಿ ನಾನು ಇಲ್ಲ’ ಎಂದರು. ‘ನನಗೆ ಅವಕಾಶ ಕೊಟ್ಟಿದ್ದಾರೆ. ಅದನ್ನು ಶಕ್ತಿಮೀರಿ ಬಳಸಿಕೊಳ್ಳುತ್ತೇನೆ. ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ಉಳಿದದ್ದು ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದೂ ಹೇಳಿದರು.
ನಾಯಕತ್ವ ಬದಲಾವಣೆಯ ಊಹಾಪೋಹದ ನಡುವೆ ಮುಖ್ಯಮಂತ್ರಿಯ ಈ ಹೇಳಿಕೆ ಕುತೂಹಲ ಮೂಡಿಸಿದೆ. ‘ರಾಜ್ಯದಲ್ಲೂ ಪರ್ಯಾಯ ನಾಯಕರು ಇಲ್ಲ ಎಂದು ಏನಿಲ್ಲ. ಇದನ್ನು ನಾನು ಒಪ್ಪುವುದಿಲ್ಲ’ ಎಂದರು. ‘ಪರ್ಯಾಯ ನಾಯಕತ್ವ ಇಲ್ಲ ಎಂಬುದನ್ನ ನಾನು ಒಪ್ಪುವುದಿಲ್ಲ. ದೇಶದಲ್ಲಿ ಪರ್ಯಾಯ ನಾಯಕರು ಇದ್ದೇ ಇದ್ದಾರೆ. ಆಯಾಯ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ’ ಎಂದರು. | |