ಉಡುಪಿ ಜೂ.5(ಉಡುಪಿ ಟೈಮ್ಸ್ ವರದಿ): ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಪೂರೈಕೆಗೆ ಜಿಲ್ಲಾಡಳಿತವು ಸಹೃದಯಿ ದಾನಿಗಳ ನೆರವುಯಾಚಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಜಿಲ್ಲೆಯ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಬಿಪಿ ಅಪರೇಟಸ್( BP Apparatus), ಕ್ರ್ಯಾಶ ಕಾರ್ಟ್ ಟ್ರೋಲಿ( Crash cart trolley), ಗ್ಲೂಕೋ ಮೀಟ್ (Glucometer), ಥೆತೊಸ್ಕೋಪ್ (Stethoscope), ಕಂಪ್ಯೂಟರ್ಸ್ (Computers) ,ಲ್ಯಾಪ್ ಟಾಪ್( Laptop), ಟ್ಯಾಬ್(Tab), ಬೆಡ್ ಸೈಡ್ ಲಾಕರ್ (bed side locker), ಜನರೇಟರ್( Generator), ವಾಶಿಂಗ್ ಮಶಿನ್( washing machines), ಫಿಸಿಯೋ ಥೆರಪಿ ಉಪಕರಣಗಳು (physiotherapy equipment) ಮುಂತಾದ ವೈದ್ಯಕೀಯ ಹಾಗೂ ಇತರ ಉಪಕರಣಗಳ ಅವಶ್ಯಕತೆಯಿದ್ದು, ಈ ಉಪಕರಣಗಳು ಜಿಲ್ಲೆಯ ವೈದ್ಯಕೀಯ ಧಾರಣಾ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಇವುಗಳನ್ನು ಜಿಲ್ಲೆಗೆ ಕೊಡುಗೆಯಾಗಿ ನೀಡುವ ಮುಖಾಂತರ ಸಹಕರಿಸುವಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗೂ ಈ ಉಪಕರಣ ಗಳನ್ನು ನೀಡಲು ಇಚ್ಛಿಸುವ ಸಾರ್ವಜನಿಕರು/ಸಂಘ-ಸಂಸ್ಥೆಗಳು ಕಛೇರಿಯ ದೂರವಾಣಿ ಸಂಖ್ಯೆ 0820-2574360 ಹಾಗೂ 9880831516 ಗೆ ಕರೆ ಮಾಡಿ ವಿವರವನ್ನು ನೀಡುವಂತೆ ಕೋರಲಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಸಂಕಷ್ಟದ ಸಂದರ್ಭದಲ್ಲಿ ಆಕ್ಸಿಜನ್ ಕನ್ಸನ್ಟ್ರೇಟರ್ಸ್ (Oxygen concentrators) ಹಾಗೂ ಇನ್ನಿತರ ಅತೀ ಅಗತ್ಯ ವೈದ್ಯಕೀಯ ಪರಿಕರಗಳನ್ನು ಪೂರೈಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಿರುವ ಸಹೃದಯಿ ದಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೂ ದಾನಿಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸ್ವೀಕೃತವಾಗಿರುವ ಆಕ್ಸಿಜನ್ ಕನ್ಸನ್ಟ್ರೇಟರ್ ಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
| | |