ಉಡುಪಿ: ಜೂ.6 ಲಸಿಕೆ ಶಿಬಿರ ಇಲ್ಲ- ಕಟ್ಟಡ ಕಾರ್ಮಿಕರು ಲಸಿಕೆ ಪಡೆಯುವ ಬಗ್ಗೆ ಮಾಹಿತಿ
ಉಡುಪಿ ಜೂನ್ 5 (ಉಡುಪಿ ಟೈಮ್ಸ್ ವರದಿ): ಜೂನ್ 6 ರಂದು ಜಿಲ್ಲೆಯಲ್ಲಿ ಯಾವುದೇ ಕೋವಿಡ್ 19 ಲಸಿಕೆ ಶಿಬಿರ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ ಜಿಲ್ಲೆಯ ಆಧ್ಯತಾ ಗುಂಪಿನ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ನಿರ್ದೇಶನದಂತೆ ಜೂನ್ 5 ರಿಂದ ಪ್ರಾಥಮಿಕ ಆರೋಗ್ಯ ಘಟಕದ ವ್ಯಾಪ್ತಿಯಲ್ಲಿ ಲಸಿಕೆ ಅಭ್ಯತಾ ಆಧಾರದ ಮೇಲೆ ಲಸಿಕೆ ನೀಡುವ ಕಾರ್ಯ ಪ್ರಾರಂಭವಾಗಿರುತ್ತದೆ. ಆದ್ದರಿಂದ ನೋಂದಾಯಿತ ಕಟ್ಟಡ ಕಾರ್ಮಿಕರು , ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿoದ ಪಡೆದಿರುವ ಮೂಲ ಗುರುತಿನಚೀಟಿ ಮತು ್ತಆಧಾರ್‌ಕಾರ್ಡ್ ಅನ್ನು ತಮ್ಮ ಹತ್ತಿರದ ಪಿ.ಹೆಚ್.ಸಿ ಅಥವಾ ಕೊವೀಡ್ ವ್ಯಾಕ್ಸಿನ್
ಸೆಂಟರ್ ನಲ್ಲಿ ಹಾಜರು ಪಡಿಸಿ , ಲಸಿಕೆ ಲಭ್ಯತೆಯ ಆಧಾರದ ಮೇಲೆ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ನೋಂದಣಿಯಾಗದ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಿಂದ ಈಗಾಗಲೇ ಪಡೆದಿರುವ ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಿ ಲಸಿಕೆ ಲಭ್ಯತೆ ಆಧಾರದ ಮೇಲೆ ಪಡೆದುಕೊಳ್ಳುವಂತೆ ಮತ್ತು ಇದುವರೆವಿಗೂ ಪಡೆಯದ ಕಟ್ಟಡ ಕಾರ್ಮಿಕರು ತಮ್ಮ ತಾಲೂಕು ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಿ ಪಡೆದುಕೊಂಡು ಲಸಿಕೆ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.