ಉಡುಪಿ: ಜೂ.14ರ ವರೆಗೆ ನಿಷೇದಾಜ್ಞೆ ವಿಸ್ತರಣೆ- ಜಿಲ್ಲಾಧಿಕಾರಿ ಆದೇಶ

ಉಡುಪಿ ಜೂನ್ 5(ಉಡುಪಿ ಟೈಮ್ಸ್ ವರದಿ): ಕೋವಿಡ್-19ರ ಸಾಂಕ್ರಾಮಿಕ ರೋಗವು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಪಾಸಿಟಿವ್ ಪ್ರಕರಣಗಳು ಹಾಗೂ ಮರಣ ದರವನ್ನು ತಗ್ಗಿಸಲು ಜೂನ್ 7 ಬೆಳಗ್ಗೆ 6 ರಿಂದ ಜೂನ್ 14 ರ ಬೆಳಗ್ಗೆ 6 ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಸೆಕ್ಷನ್ 144(3)ನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ಮಾರ್ಗಸೂಚಿಯನ್ನು ಹೊರಡಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

ನಿಗದಿಯಾಗಿರುವ ವಿಮಾನ ಪ್ರಯಾಣ ಹಾಗೂ ರೈಲು ಪ್ರಯಾಣಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿಬಂಧಿಸಲಾಗಿದೆ. ಆಟೋ, ಕ್ಯಾಬ್ ಗಳು ಟ್ಯಾಕ್ಸಿಗಳ(including cabs by aggregators)ಮೂಲಕ ರೈಲು ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ವಿಮಾನಯಾನ ಟಿಕಟ್ ಗಳು ಹಾಗೂ ರೈಲು ಪ್ರಯಾಣದ ಟಿಕೆಟ್ ಗಳನ್ನೇ ಪಾಸ್ ಗಳಂತೆ ಬಳಸಿಕೊಳ್ಳಬಹುದಾಗಿದೆ. ತುರ್ತು ಸಂದರ್ಭದಲ್ಲಿ ಬಾಡಿಗೆಗೆ ಪಡೆದ ಹಾಗೂ ಈ ಮಾರ್ಗಸೂಚಿಗಳಲ್ಲಿ ಅನುಮತಿಸಿರುವಂತೆ ಸಂಚರಿಸುವ ಟ್ಯಾಕ್ಸಿ (ಆಟೋರಿಕ್ಷಾಗಳೂ ಸೇರಿದಂತೆ) ಹಾಗೂ ಕ್ಯಾಬ್ ಅಗ್ರಿಗೇಟರ್ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲಾ ಟ್ಯಾಕ್ಸಿ ಹಾಗೂ ಕ್ಯಾಬ್ ಅಗ್ರಿಗೇಟರ್ ಸೇವೆಗಳನ್ನು ನಿಬಂಧಿಸಲಾಗಿದೆ. ಶಾಲೆಗಳು,ಕಾಲೇಜುಗಳು,ಶೈಕ್ಷಣಿಕ/ತರಬೇತಿ/ ತರಬೇತಿ ಸಂಸ್ಥೆಗಳು ಇತ್ಯಾದಿಗಳು ಮುಚ್ಚಲ್ಪಡುತ್ತವೆ.ಆನ್‌ಲೈನ್/ದೂರಶಿಕ್ಷಣವನ್ನು ಅನುಮತಿಸುವುದನ್ನು ಮುಂದುವರಿಸಲಾಗುವುದು ಮತ್ತು ಪ್ರೋತ್ಸಾಹಿಸಲಾಗುವುದು.

ಪೊಲೀಸ್/ಸರ್ಕಾರಿ ಅಧಿಕಾರಿಗಳು/ಆರೋಗ್ಯ ಕಾರ್ಯಕರ್ತರು/ಪ್ರವಾಸಿಗರು ಸೇರಿದಂತೆ ಸಿಕ್ಕಿಹಾಕಿಕೊಂಡಿರುವ (Stranded)ವ್ಯಕ್ತಿಗಳಿಗೆ ಕ್ವಾರಂಟೈನ್ ಸೌಲಭ್ಯ ಮತ್ತು step down hospitals ಉದ್ದೇಶಗಳಿಗೆ ಮಾತ್ರ ಹೋಟೆಲ್‌ಗಳು,ರೆಸ್ಟೋರೆಂಟ್‌ಗಳು ಮತ್ತು ಆತಿಥ್ಯ ಗೃಹಗಳ ಸೇವೆಗಳನ್ನು ಬಳಸಲು ಅವಕಾಶ ಇರುತ್ತದೆ. ಹೋಟೆಲ್‌ಗಳು ,ರೆಸ್ಟೋರೆಂಟ್ ಗಳು ಮತ್ತು ಉಪಹಾರ ಗೃಹಗಳಲ್ಲಿ ,ಪಾರ್ಸೆಲ್ ಸೇವೆಗಳನ್ನು ಮತ್ತು ಹೋಮ್ ಡೆಲಿವರಿ ಸೇವೆ ನೀಡಲು ಮಾತ್ರ ಅನುಮತಿಸಿದೆ. ಪಾರ್ಸೆಲ್ ಗಳನ್ನು ತರಲು ವಾಹನಗಳಲ್ಲಿ ತೆರಳಲು ಅವಕಾಶವಿರುವುದಿಲ್ಲ. ಕಾಲುನಡಿಗೆಯಲ್ಲಿ ತೆರಳಿ ಪಾರ್ಸೆಲ್ ಗಳನ್ನು ಪಡೆಯಲು ಅವಕಾಶ ಇರುತ್ತದೆ. ಹೋಮ್ ಡೆಲಿವರಿ ಮಾಡಲು ಹೋಟೆಲ್‌ಗಳು ,ರೆಸ್ಟೋರೆಂಟ್ ಗಳು ಮತ್ತು ಉಪಹಾರ ಗೃಹಗಳು ವಾಹನ ಉಪಯೋಗಿಸಲು ಅವಕಾಶ ವಿರುತ್ತದೆ.

ಎಲ್ಲಾ ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು,ಜಿಮ್ ಗಳು,ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಾ, ಈಜುಕೊಳಗಳು,ಉದ್ಯಾನಗಳು,ಮನೋರಂಜನಾ ಉದ್ಯಾನಗಳು, ಕ್ಲಬ್,ಚಿತ್ರಮಂದಿರಗಳು,ಬಾರ್‌ಗಳು ಮತ್ತು ಸಭಾಂಗಣಗಳು,ಅಸೆಂಬ್ಲಿ ಹಾಲ್‌ಗಳು ಮತ್ತು ಅಂತಹುದೇ ಸ್ಥಳಗಳು ಮುಚ್ಚಲ್ಪಡುತ್ತವೆ. ಎಲ್ಲಾ ಸಾಮಾಜಿಕ/ ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಸಭೆ/ಇತರ ಸಭೆಗಳು ಮತ್ತು ದೊಡ್ಡ ಪ್ರಮಾಣದ ಒಟ್ಟುಗೂಡುವಿಕೆಯನ್ನು ನಿಷೇದಿಸಲಾಗಿದೆ. ಎಲ್ಲಾ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಬೇಕು.

ಈ ಕೆಳಕಂಡ ರಾಜ್ಯ ಸರ್ಕಾರದ ಕಛೇರಿಗಳು ಹಾಗೂ ಸ್ವಾಯತ್ತ ಸಂಸ್ದೆಗಳು, ಕಾರ್ಪೋರೇಷೇನ್ ಗಳು ಮತ್ತು ಇತರ ಸಂಸ್ದೆಗಳು(ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗಡೆ)ಕಾರ್ಯನಿರ್ವಹಿಸಲು ಅನುಮತಿಸಲಾಗಿರುತ್ತದೆ.ಆರೋಗ್ಯ, ವೈದ್ಯಕೀಯ ಶಿಕ್ಷಣ,ಪೊಲೀಸ್,ಗೃಹ ರಕ್ಷಕದಳ,ಬಂಧಿಖಾನೆ,ನಾಗರೀಕ ರಕ್ಷಣೆ,ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು,ವಿಪತ್ತು ನಿರ್ವಹಣೆ,ಕಂದಾಯ,ಸಾರಿಗೆ,ಕಾರ್ಮಿಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ವಿದ್ಯುತ್ ,ನೀರಾವರಿ, ನೈರ್ಮಲ್ಯದಂತಹ ಅವಶ್ಯಕ ಸೇವೆಗಳನ್ನು ಪೂರೈಸುವ ಮತ್ತು ನಿರ್ವಹಿಸುವ ಕಛೇರಿಗಳು,ನಗರ ಸ್ದಳೀಯ ಸಂಸ್ದೆಗಳು,ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಅಧೀನ ಕಛೇರಿಗಳು. ನ್ಯಾಯಾಲಯಗಳು ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಕಛೇರಿಗಳು,ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶದನ್ವಯ ಕಾರ್ಯಚರಿ ಸುವುದು.ಕೋವಿಡ್-19ಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಿರುವ ಎಲ್ಲಾ ಕಛೇರಿಗಳು, ಅಧಿಕಾರಿಗಳು, ಸಿಬ್ಬಂಧಿಗಳು. ನಗರ ಸ್ದಳೀಯ ಸಂಸ್ದೆಗಳು ಮತ್ತು ಜಿಲ್ಲಾಧಿಕಾರಿಯವರಿಂದ ಕೋವಿಡ್-19ಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ದೆಗಳ(NGO)ಸ್ವಯಂ ಸೇವಕರು. ಖಜಾನಾಧಿಕಾರಿಗಳ ಕಚೇರಿ ಅರಣ್ಯ ಇಲಾಖೆಯಿಂದ ಘೋಷಿಸಲ್ಪಟ್ಟ ಎಲ್ಲಾ ಅರಣ್ಯ ಸಂಬಂಧಿ ಕೆಲಸ ಕಾರ್ಯಾಚರಣೆಗಳು.

ಇತರ ಎಲ್ಲಾ ಕಛೇರಿಗಳ ಸಿಬ್ಬಂದಿಗಳು ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಪ್ರೋತ್ಸಾಹಿಸುವುದು. ಜಿಲ್ಲಾಧಿಕಾರಿಯವರಿಂದ ಕೋವಿಡ್ -19ಗೆ ಸಂಬಂಧಿಸಿ ನಿಯೋಜಿಸಲ್ಪಟ್ಟ ಎಲ್ಲಾ ಸಿಬ್ಬಂದಿಗಳು ಕೋವಿಡ್-19 ಕರ್ತವ್ಯಕ್ಕೆ ಹಾಜರಾಗುವುದು. ಕೇಂದ್ರ ಸರ್ಕಾರದ ಈ ಕೆಳತಿಳಿಸಿರುವ ಕಛೇರಿಗಳು, ಇದರ ಸ್ವಾಯತ್ತ ಸಂಸ್ದೆಗಳು/ ಅಧೀನ ಕಛೇರಿಗಳು ಹಾಗೂ ಸಾರ್ವಜನಿಕ ನಿಗಮಗಳು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ ಕಾರ್ಯಾಚರಿಸುವುದು. ರಕ್ಷಣೆ, ರಕ್ಷಣಾ ಘಟಕದ ಸಾರ್ವಜನಿಕ ಉದ್ಯಮಗಳು,ಕೇಂದ್ರ ಶಸ್ತ್ರಾಸ್ತ್ರ ಪೋಲಿಸ್ ಪಡೆಗಳು ಮತ್ತು ದೂರ ಸಂಪರ್ಕ ಸೇವೆಗಳು,ರಕ್ಷಣಾ ಘಟಕದಲ್ಲಿ ಶೇಕಡ 50 ಸಿಬ್ಬಂದಿಗಳನ್ನೊಳಗೊಂಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ.

ಅವಶ್ಯಕ ಸೇವೆಗಳು ಪೂರೈಸುವ ಹಾಗೂ ಕಾರ್ಯಚರಿಸುವ ಕಛೇರಿಗಳು(ಸಂಪರ್ಕಕಾರ್ಯಚರಿಸುವುದು. ಕೋವಿಡ್-19 ಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಿರುವ ಎಲ್ಲಾ ಕಛೇರಿಗಳು,ಅಧಿಕಾರಿಗಳು,ಸಿಬ್ಬಂಧಿಗಳು,ನಗರ ಸ್ದಳೀಯ ಸಂಸ್ದೆಗಳು ಮತ್ತು ಜಿಲ್ಲಾಧಿಕಾರಿಯವರಿಂದ ಕೋವಿಡ್-19ಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಹಾಗೂ ಸರ್ಕಾರೇತರ ಸಂಸ್ದೆಗಳ(NGO)ಸ್ವಯಂ ಸೇವಕರು. ಖಜಾನಾಧಿಕಾರಿಗಳ ಕಚೇರಿ ಅರಣ್ಯ ಇಲಾಖೆಯಿಂದ ಘೋಷಿಸಲ್ಪಟ್ಟ ಎಲ್ಲಾ ಅರಣ್ಯ ಸಂಬಂಧಿ ಕೆಲಸ ಕಾರ್ಯಾಚರಣೆಗಳು.ಇತರ ಎಲ್ಲಾ ಕಛೇರಿಗಳ ಸಿಬ್ಬಂದಿಗಳು ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಪ್ರೋತ್ಸಾಹಿಸುವುದು. ಜಿಲ್ಲಾಧಿಕಾರಿಯವರಿಂದ ಕೋವಿಡ್ -19 ಗೆ ಸಂಬಂಧಿಸಿ ನಿಯೋಜಿಸಲ್ಪಟ್ಟ ಎಲ್ಲಾ ಸಿಬ್ಬಂದಿಗಳು ಕೋವಿಡ್-19 ಕರ್ತವ್ಯಕ್ಕೆ ಹಾಜರಾಗುವುದು.

ಕೇಂದ್ರ ಸರ್ಕಾರದ ಈ ಕೆಳತಿಳಿಸಿರುವ ಕಛೇರಿಗಳು, ಇದರ ಸ್ವಾಯತ್ತ ಸಂಸ್ದೆಗಳು / ಅಧೀನ ಕಛೇರಿಗಳು ಹಾಗೂ ಸಾರ್ವಜನಿಕ ನಿಗಮಗಳು ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ ಕಾರ್ಯಾಚರಿಸುವುದು. ರಕ್ಷಣೆ, ರಕ್ಷಣಾ ಘಟಕದ ಸಾರ್ವಜನಿಕ ಉದ್ಯಮಗಳು, ಕೇಂದ್ರ ಶಸ್ತ್ರಾಸ್ತ್ರ ಪೋಲಿಸ್ ಪಡೆಗಳು ಮತ್ತು ದೂರ ಸಂಪರ್ಕ ಸೇವೆಗಳು . ರಕ್ಷಣಾ ಘಟಕದಲ್ಲಿ (ಆeಜಿeಟಿಛಿe PSUs) ಶೇಕಡ ೫೦ ಸಿಬ್ಬಂದಿಗಳನ್ನೊಳಗೊಂಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. ಅವಶ್ಯಕ ಸೇವೆಗಳು ಪೂರೈಸುವ ಹಾಗೂ ಕಾರ್ಯಚರಿಸುವ ಕಛೇರಿಗಳು( ಸಂಪರ್ಕ ಹಾಗೂ ಕಾರ್ಯಚರಿಸುವ ಕಛೇರಿಗಳು( ಸಂಪರ್ಕ ಸೇವೆಗಳು, ಇತರೆ) ಖಜಾನೆಗಳು ( ಪಾವತಿ & ಹಣಕಾಸು ಕಛೇರಿಗಳನ್ನೊಳಗೊಂಡು , ಆರ್ಥಿಕ ಸಲಹೆಗಾರರು ಮತ್ತು ಕಂಟ್ರೋಲರ್ ಜನರಲ್ ಆಫ್ ಅಂಕೌoಟ್ಸ ನ ಕ್ಷೇತ್ರ ಕಛೇರಿಗಳು ಕನಿಷ್ಟ ಸಿಬ್ಬಂದಿಗಳ ನ್ನೊಳಗೊoಡು ಕಾರ್ಯಾಚರಿಸುವುದು)ಸಾರ್ವಜನಿಕ ಉಪಯೋಗಗಳು(ಪೆಟ್ರೋಲಿಯಂ, ಸಿ.ಎನ್.ಜಿ(ಎಲ್.ಪಿ.ಜಿ. ಪಿ.ಎನ್.ಜಿ) ಒಳಗೊಂಡು ಶಕ್ತಿ ಉತ್ಪಾದನಾ ಮತ್ತು ಸಾಗ ಘಟಕಗಳು, ಅಂಚೆ ಕಛೇರಿಗಳು, ವಿಪತ್ತು ನಿರ್ವಹಣಾ ಮತ್ತು ಪೂರ್ವ ಮುನ್ನೆಎಚ್ಚರಿಕೆ ಏಜೆನ್ಸಿಗಳು. ರಾಷ್ಟ್ರೀಯ ಮಾಹಿತಿ ಕೇಂದ್ರ ವಿಮಾನ ನಿಲ್ದಾಣ ಗಳಲ್ಲಿರುವ ಕಸ್ಟಮ್ ತಪಾಸಣೆ, ಜಿ.ಎಸ್.ಟಿ.ಎನ್. ಮತ್ತು ಎಮ್.ಸಿ.ಎ 21 ರಿಜಿಸ್ಟರಿಗಳು ಕನಿಷ್ಟ ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯಾಚರಿಸುವುದು.ಬ್ಯಾಂಕುಗಳು, ಭಾರತೀಯ ರಿಸರ್ವ್ ಬ್ಯಾಂಕ್ , ಭಾರತೀಯ ರಿಸರ್ವ್ ಬ್ಯಾಂಕ್ ನಿಯಂತ್ರಿತ ಹಣಕಾಸು ಮಾರುಕಟ್ಟೆಗಳು ಮತ್ತು ಸೂಕ್ಷ್ಮಹಣಕಾಸು ಸಂಸ್ದೆಗಳು, ಎನ್.ಪಿ.ಸಿ.ಎಲ್., ಸಿ.ಸಿ.ಐ.ಎಲ್ ನಂತಹ ಸಂಸ್ದೆಗಳು,ಪಾವತಿ ವ್ಯವಸ್ಥೆ ನಿರ್ವಾಹಕರು ಮತ್ತು ಸ್ವತಂತ್ರ ಪ್ರಾಥಮಿಕ ವಿತರಕರು ಕನಿಷ್ಟ ಸಿಬ್ಬಂದಿಗಳನ್ನು ಒಳಗೊಂಡು ಕಾರ್ಯಾಚರಿಸುವುದು. ಬ್ಯಾಂಕ್ ಗಳಲ್ಲಿ ಶೇಕಡ 50 ರಷ್ಟು ಸಿಬ್ಬಂದಿಗಳನ್ನೊಳಗೊAಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. ರೈಲ್ವೆ ಮತ್ತು ಸಂಬ0ಧಿತ ಕಾರ್ಯಾಚರಣೆಗಳು ರಾಜತಾಂತ್ರಿಕ ಮಿಷನ್ ಮತ್ತು ಸಂಬoಧಿತ ಕಚೇರಿಗಳು. ಕೋವಿಡ್ ಸಮುಚಿತ ವರ್ತನೆಯನ್ನು  ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕಛೇರಿಗಳಲ್ಲಿ ಶೇಕಡ 50 ರಷ್ಟು ಸಿಬ್ಬಂದಿಗಳನ್ನೊಳಗೊAಡು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. ಎಲ್ಲಾ ವೈದ್ಯಕೀಯ ಸೇವೆಗಳು(ಆಯುಷ್ ಮತ್ತು ಪಶುವೈದ್ಯಕೀಯ ಆಸ್ಪತ್ರೆಗಳನ್ನು ಒಳಗೊಂಡು) ಕಂಟೈನ್ಮೆOಟ್ ವಲಯದ ಹೊರಗಡೆ ಕಾರ್ಯಾಚರಣೆಯಲ್ಲಿರುತ್ತದೆ.ಎಲ್ಲಾ ಆಸ್ಪತ್ರೆಗಳು,ನರ್ಸಿಂಗ್ ಹೋಂಗಳು,ಕ್ಲಿನಿಕ್ಸ್,ಲ್ಯಾಬ್ಸ್,ಸಂಗ್ರಹಣಾ ಕೇಂದ್ರಗಳು, ಟೆಲಿಮೆಡಿಸಿನ್ ಸೌಲಭ್ಯಗಳು,ಔಷಧಾಲಯಗಳು,ಫಾರ್ಮಾಸಿಸ್,ಔಷಧ ಉತ್ಪನ್ನಗಳು,ಜನ ಔಷಧಿ ಕೇಂದ್ರಗಳು,ರಕ್ತ ಸಂಗ್ರಹ ಕೇಂದ್ರಗಳು,ಮನೆ ಆರೈಕೆ ಪೂರೈಕೆದಾರರು ಮತ್ತು ಎಲ್ಲಾ ರೀತಿಯ ಔಷಧಿಯ (ವೈದ್ಯಕೀಯ ಸಲಕರಣೆಗಳ ಅಂಗಡಿಗಳು ಸೇರಿದಂತೆ) ಅಂಗಡಿಗಳು .ಎಲ್ಲಾ ಔಷಧಾಲಯಗಳು ಮತ್ತು ಸಂಶೋಧನಾ ಪ್ರಯೋಗಾಲಯಗಳು.ಎಲ್ಲಾ ವೈದ್ಯಕೀಯಗಳ (ರಾಜ್ಯದೊಳಗೆ ಮತ್ತು ಅಂತರ ರಾಜ್ಯ, ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲೆ), ಅರೆವೈದ್ಯರು, ದಾದಿಯರು, ವಿಜ್ಞಾನಿಗಳು. ಲ್ಯಾಬ್ ತಂತ್ರಜ್ಞರು.ನರ್ಸ್ಗಳು ಮತ್ತು ಇತರರ ಸಹಾಯಕ ಆಸ್ಪತ್ರೆ ಸೇವೆಗಳು.ಎಲ್ಲಾ ಔಷಧ, ಫಾರ್ಮಾಸ್ಯುಟಿಕಲ್ಸ್, ವೈದ್ಯಕೀಯ ಸಲಕರಣೆಗಳು, ವೈದ್ಯಕೀಯ ಆಮ್ಲಜನಕ, ಅವುಗಳ ಪ್ಯಾಕಿಂಗ್ ವಸ್ತುಗಳು, ಕಚ್ಚಾ ವಸ್ತುಗಳು ಮತ್ತು ಸಂಬAಧಪಟ್ಟ ಮಧ್ಯವರ್ತಿ ವಸ್ತುಗಳ ಉತ್ಪಾದನಾ ಘಟಕಗಳು ವೈದ್ಯಕೀಯ/ಆರೋಗ್ಯಕ್ಕೆ ಸಂಬoಧಿಸಿದ ಎಲ್ಲಾ ನಿರ್ಮಾಣ ಕಾರ್ಯಗಳು.

ಕೃಷಿ ಮತ್ತು ಸಂಬoಧಿಸಿದ ಕೆಲಸಗಳು(ಕಂಟೈನ್ಮೆoಟ್ ವ್ಯಾಪ್ತಿಯ ಹೊರಗೆ): ಬೆಳಿಗ್ಗೆ 6 ಗಂಟೆಯಿoದ ಬೆಳಿಗ್ಗೆ 10
ಗಂಟೆಯವರೆಗೆ ಕಂಟೈನ್ ಮೆಂಟ್ ವಲಯದ ಹೊರಗಿನ ಕೃಷಿ ಉಪಕರಣ ಬಾಡಿಗೆ ಕೇಂದ್ರಗಳಿಗೆ,ಯಂತ್ರೋಪಕರಣ ಗಳಿಗೆ ಸಂಬಧಿಸಿದ ಅಂಗಡಿಗಳು ಮತ್ತು ಗೋದಾಮುಗಳು ಸೇರಿದಂತೆ ಎಲ್ಲಾ ಕೃಷಿ ಮತ್ತು ತತ್ಸಂಬOಧಿತ ಕಾರ್ಯಚಟುವಟಿಕೆಗಳಿಗೆ ಅನುಮತಿಸಿದೆ. ತತ್ಸಂಬOಧಿತ ಕಾರ್ಯಚಟುವಟಿಕೆಗಳಲ್ಲಿ ಮೀನುಗಾರಿಕೆ ಕೋಳಿ ಸಾಕಾಣಿಕೆ, ಮಾಂಸ, ಹೈನುಗಾರಿಕೆಯೂ ಸೇರಿರುತ್ತದೆ.ರಸಗೊಬ್ಬರಗಳನ್ನು ಇಳಿಸುವರೇ ಬೆಳಿಗ್ಗೆ 6:00 ರಿಂದ ಸಂಜೆ 6:00 ರವರೆಗೆ
ಅನುಮತಿಸಲಾಗಿದೆ.ಸಾಮಾಜಿಕ ವಲಯ (ಕೆಳಕಂಡ ಚಟುವಟಿಕೆಗಳು ಕಂಟೈನ್ಮೆAಟ್ ವಲಯದ ಹೊರಗಡೆ ಅನುಮತಿಸಲಾಗಿದೆ) ಮಕ್ಕಳಿಗಾಗಿ ಮನೆಗಳು (home ಜಿoಡಿ ಛಿhiಟಜಡಿeಟಿ) / ಅಂಗವಿಕಲರು / ಮಾನಸಿಕ ವಿಕಲಚೇತನರು / ಹಿರಿಯ ನಾಗರಿಕರು / ನಿರ್ಗತಿಕರು / ಮಹಿಳೆಯರು / ವಿಧವೆಯರು ಮುಂತಾದವರಿಗೆ ನಡೆಸಲ್ಪಡುವ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅನುಮತಿಸಿದೆ. ಬಾಲಾಪರಾಧಿಗಳ ವೀಕ್ಷಣಾ ಮನೆಗಳು, ಆರೈಕೆ ಮನೆಗಳು ಮತ್ತು ಬಾಲಾಪರಾಧಿಗಳ ಸುರಕ್ಷತೆಯ ಸ್ಥಳಗಳ ಕಾರ್ಯನಿರ್ವಹಣೆಗೆ ಅನುಮತಿಸಿದೆ. ಕೋವಿಡ್ ಸಮುಚಿತ ವರ್ತನೆಯನ್ನು  ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಯಾವುದೇ ಸ್ಥಳದಲ್ಲಿ 40 ಕ್ಕಿಂತ ಹೆಚ್ಚು ಕಾರ್ಮಿಕರನ್ನು ನಿಯೋಜನೆ ಮಾಡದೆ ಕೆಲಸಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.

ಕಂಟೈನ್ ಮೆಂಟ್ ವಲಯದ ಹೊರಗೆ ಎಲ್ಲಾ ರೀತಿಯ ಸರಕುಗಳ ಅನಿಯಂತ್ರಿತ ಚಲನೆ:ಕೋವಿಡ್-19ನಿರ್ವಹಣೆಯ
ಸಂಬoಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಷರತ್ತಿಗೊಳಪಟ್ಟು ಮಳಿಗೆ ಮತ್ತು ಇ-ಕಾಮರ್ಸ್ ಕಂಪನಿಗಳ ಮುಖಾಂತರ ಅವಶ್ಯಕ ಸರಕುಗಳ ಉತ್ಪಾದನೆಯಲ್ಲಿ ಸಗಟು ಮಾರಾಟ ಅಥವಾ ಚಿಲ್ಲರೆ ವ್ಯಾಪರದಲ್ಲಿ ತೊಡಗಿಸಿಕೊಂಡಿರುವAತಹ ಅವಶ್ಯಕ ಸರಕುಗಳ ಪೂರೈಕೆ ಸರಪಳಿಯಲ್ಲಿನ ಎಲ್ಲಾ ಸೌಲಭ್ಯಗಳ ಕಾರ್ಯನಿರ್ವಹಣೆಗೆ ಅನುಮತಿಸತಕ್ಕದ್ದು.ಖಾಲಿ ಸರಕು ಸಾಗಾಣಿಕಾ ವಾಹನಗಳೂ ಸೇರಿದಂತೆ ಎಲ್ಲಾ ರೀತಿಯ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ಅನುಮತಿಸಲಾಗಿದೆ.

ಈ ಕೆಳಕಂಡ ಚಟುವಟಿಕೆಗಳನ್ನು ಹೊರತುಪಡಿಸಿ, ಉಳಿದಂತೆ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.ಈ ಮಾರ್ಗಸೂಚಿಗಳಡಿಯಲ್ಲಿ ಅನುಮತಿಸಲಾದ ಸಂಚಾರವನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬಸ್ಸುಗಳು ಅಥವಾ ಪ್ರಯಾಣಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಅಥವಾ ಈ ಮಾರ್ಗಸೂಚಿಗಳಡಿಯಲ್ಲಿ ಅನುಮತಿಸಿದಂತೆ ಮಾತ್ರ ರಾಜ್ಯದೊಳಗಿನ ಮತ್ತು ರಾಜ್ಯದ ಹೊರಗಿನ ಪ್ರಯಾಣಿಕರ ವಾಹನಗಳ ಸಂಚಾರ ಅನುಮತಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ರಯಾಣಿಕರ ವಾಹನಗಳು ಮತ್ತು ಬಸ್‌ಗಳ ಜಿಲ್ಲೆಯೊಳಗಿನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸಂಬAಧಿಸಿದ ಸಂಸ್ಥೆ/ ಇಲಾಖೆಗಳು ನೀಡಿದ ಗುರುತಿನ ಚೀಟಿಯೊಂದಿಗೆ ಕರ್ತವ್ಯದ ಸ್ಥಳಕ್ಕೆ ಹಾಗೂ ಕರ್ತವ್ಯದ ಸ್ಥಳದಿಂದ ಪ್ರಯಾಣಿಸುವ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ಜಿಲ್ಲಾ ನ್ಯಾಯಾಂಗದ ಅಧಿಕಾರಿಗಳು/ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಹಾಗೂ ತೆರಳಲ ಮತ್ತು ಕಚೇರಿ ಸಮಯವನ್ನು ಮೀರಿ ಕೆಲಸ ನಿರ್ವಹಿಸಲು ತಮ್ಮ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.ಪ್ರಯಾಣ ದಾಖಲೆಗಳು/ಟಿಕೆಟ್‌ಗಳನ್ನು ತೋರಿಸಿ ವಿಮಾನ ನಿಲ್ದಾಣದ ಬಸ್ಸುಗಳು/ಟ್ಯಾಕ್ಸಿಗಳಲ್ಲಿ ಸಂಚಾರವನ್ನು ಅನುಮತಿ ಸಲಾಗಿದೆ.ತುರ್ತು ಉದ್ದೇಶಕ್ಕೆ ಸಂಬAಧಿಸಿದ ಪ್ರಯಾಣಕ್ಕಾಗಿ ಆಟೋಗಳು ಮತ್ತು ಟ್ಯಾಕ್ಸಿಗಳನ್ನು(ಕ್ಯಾಬ್ ಅಗ್ರಿಗೇಟರ್ಗಳು ಸೇರಿದಂತೆ) ಅನುಮತಿಸಲಾಗಿದೆ.ರೋಗಿಗಳು ಮತ್ತು ಅವರ ಪರಿಚಾರಕರಿಗೆ ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಅಔಗಿIಆ 19 ವ್ಯಾಕ್ಸಿನೇಷನ್ ಗೆ ಸಂಬAಧಿಸಿದ ಸಂಚಾರವನ್ನು,ವ್ಯಾಕ್ಸಿನೇಷನ್ ಗಾಗಿ ಮುಂಗಡವಾಗಿ ಕಾಯ್ದಿರಿಸಿದ ಹಾಗೂ ಈ ಬಗ್ಗೆ SಒS ನೊಂದಿಗೆ ಖಚಿತತೆ ಹೊಂದಿರುವವರಿಗೆ ಮಾತ್ರ ಅನುಮತಿಸಿದೆ.ಪರೀಕ್ಷೆಯ ಉದ್ದೇಶಕ್ಕಾಗಿ ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ. ನ್ಯಾಯಾಲಯದ ಕೆಲಸದ ದಿನಗಳಲ್ಲಿ ಮಾತ್ರ ವಕೀಲರು, ಅವರ ಕಾನೂನು ಸಿಬ್ಬಂದಿ/ಗುಮಾಸ್ತರು ಮತ್ತು ಇತರ ಸಹಾಯಕ ಸಿಬ್ಬಂದಿಯವರು ಆಯಾ ಕಚೇರಿಗಳಲ್ಲಿ ನೀಡುವ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದೆ.

ಈ ಕೆಳಗಿನ ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಅನುಮತಿಸಲಾಗಿದೆ.: ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದಬೆಳಿಗ್ಗೆ 10 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಗೆ ಅವಕಾಶವಿದೆ.ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಲ್ಲಿ ಬೆಳಿಗ್ಗೆ 6ರಿಂದ ಬೆಳಿಗ್ಗೆ 10 ರವರೆಗೆ ಪಾರ್ಸೆಲ್ ಕೊಂಡುಹೋಗಲು ಮಾತ್ರ ಅನುಮತಿಸಲಾಗಿದೆ. ತಳ್ಳು ಗಾಡಿಗಳ ಮುಖಾಂತರ ಹಣ್ಣು ಮತ್ತು ತರಕಾರಿಗಳನ್ನು ಬೆಳಿಗ್ಗೆ 6 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಮಾರಾಟ ಮಾಡುವರೆ ಅನುಮತಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿoದ ಸಂಜೆ 6 ಗಂಟೆಯವರೆಗೂ ಹಾಪ್ ಕಾಮ್ಸ್ ಮತ್ತು ಹಾಲಿನ ಬೂತು ಕಾರ್ಯನಿರ್ವಹಿಸಲು ಅನುಮತಿ ಸಲಾಗಿದೆ. ಜನರು ಮನೆಯಿಂದ ಹೊರಕ್ಕೆ ಸಂಚರಿಸುವುದನ್ನು ಕಡಿಮೆ ಮಾಡಲು ನಿರ್ವಹಣೆ ಗಾಗಿರುವ ರಾಷ್ಟ್ರೀಯ ನಿರ್ದೇಶನಗಳಿಗೆ ಬದ್ಧರಾಗಿ24x7ಹೋಮ್ ಡೆಲಿವರಿ ಸೇವೆಗಳನ್ನು ನೀಡಲು ಪ್ರೋತ್ಸಾಹಿಸುವುದು. ಆಹಾರ ಸಂಸ್ಕರಣೆ ಮತ್ತು ಸಂಬAಧಿತ ಕೈಗಾರಿಕೆಗಳು. ಬ್ಯಾಂಕುಗಳು ಮತ್ತು ವಿಮಾ ಕಚೇರಿಗಳಲ್ಲಿ ಶೇಕಡ 50 ರಷ್ಟು ಸಿಬ್ಬಂದಿಗಳ ನ್ನೊಳಗೊOಡು ಕರ್ತವ್ಯ ನಿರ್ವಹಿಸಲು ಮತ್ತು ಎಟಿಎಂ ಗಳನ್ನು ಕಾರ್ಯಾಚರಿಸಲು ಅನುಮತಿಸಿದೆ.ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ. ದೂರಸಂಪರ್ಕ, ಇಂಟರ್ನೆಟ್ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು. ಗುರುತಿನ ಚೀಟಿಯನ್ನುಟೆಲಿಕಾಂ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಅನಿಯಂತ್ರಿತ ಸಂಚಾರವನ್ನು ಅನುಮತಿಸಲಾಗಿದೆ.

IT ಕಂಪನಿಗಳ ಅವಶ್ಯ ಸಿಬ್ಬಂದಿಗಳು ಮಾತ್ರವೇ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವುದು ಉಳಿದ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವುದು. ಎಲ್ಲಾ ರೀತಿಯ ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್ ಸೇವೆಗಳನ್ನು ಅನುಮತಿಸಲಾಗಿದೆ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು.ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳನ್ನು ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಿAದ ಅಧಿಸೂಚಿಸಲ್ಪಟ್ಟ ಸೇವೆಗಳನ್ನು ಅನುಮತಿಸಲಾಗಿದೆ.ಶೀತಲ ಸಂಗ್ರಹಣೆ ಮತ್ತು ವೇರ್ ಹೌಸಿಂಗ ಸೇವೆಗಳನ್ನು ಅನುಮತಿಸಲಾಗಿದೆ. ಖಾಸಗಿ ಭದ್ರತಾ ಸೇವೆಗಳನ್ನು ಅನುಮತಿಸಲಾಗಿದೆ.ವಿಮಾನಯಾನ ಮತ್ತು ಸಂಬOಧಿತ ಸೇವೆಗಳನ್ನು (ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ನಿರ್ವಹಣೆ, ಸರಕು, ಸೇವೆಗಳು, ಅಡುಗೆ, ಇಂಧನ, ಭದ್ರತೆ, ಇತ್ಯಾದಿ) ಅನುಮತಿಸಲಾಗಿದೆ.ವಕೀಲರ ಕಛೇರಿಗಳಲ್ಲಿ/ಕಾನೂನು ಸಂಸ್ಥೆಗಳಲ್ಲಿ ಶೇಕಡ 50 ರಷ್ಟು ಸಿಬ್ಬಂದಿಗಳನ್ನೊಳಗೊOಡು ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ.

ಕೋವಿಡ್ -19 ನಿರ್ವಹಣೆಯ ಸಂಬAಧ ಹೊರಡಿಸಲಾದ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ
ಷರತ್ತಿಗೊಳಪಟ್ಟು ಈ ಕೆಳಕಂಡ ಕೈಗಾರಿಕೆಗಳು ಮತ್ತು ಕೈಗಾರಿಕ ಸಂಸ್ಥೆಗಳು /ಉತ್ಪಾದನಾ ಘಟಕಗಳು (ಸರ್ಕಾರಿ ಮತ್ತು ಖಾಸಗಿ) ಕಂಟೈನ್ ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಕಾರ್ಯಚರಿಸಲು ಅನುಮತಿಸಿದೆ
ಅಗತ್ಯ ವಸ್ತುಗಳ ತಯಾರಿಕಾ ಘಟಕಗಳು. ನಿರಂತರ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಉತ್ಪಾದನಾ ಘಟಕಗಳು ಕೈಗಾರಿಕೆಗಳು ಮತ್ತು ಕೈಗಾರಿಕ ಸಂಸ್ಥೆಗಳು /ಉತ್ಪಾದನಾ ಘಟಕಗಳು (ಸರ್ಕಾರಿ ಮತ್ತು ಖಾಸಗಿ) ಸ್ಥಳಿಯ ಕಾರ್ಮಿಕರನ್ನು ಬಳಸಿಕೊಂಡು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕೆಲಸ ನಿರ್ವಹಿಸಲು ಅನುಮತಿಸಲಾಗಿದೆ. ಉಕ್ಕಿನ ಉದ್ಯಮಕ್ಕೆ ಮಾರಾಟ ಮಾಡುವ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಅನುಮತಿಸಲಾಗಿದೆ. ಸಿಮೆಂಟ್ ಉದ್ಯಮದಲ್ಲಿ ಬಳಸಲು ಸುಣ್ಣದ ಕಲ್ಲು ಗಣಿಗಾರಿಕೆಯನ್ನು ಅನುಮತಿಸಲಾಗಿದೆ. ಉಕ್ಕಿನ ಉದ್ಯಮದ ನಿರಂತರ ಕಾರ್ಯಾಚರಣೆಗೆ ಅಗತ್ಯವಾದ ಡೊಲೊಮೈಟ್, ಸ್ಫಟಿಕ ಶಿಲೆ ಮತ್ತು ಕಚ್ಚಾ ವಸ್ತುಗಳ ಗಣಿಗಾರಿಕೆ ಮತ್ತು ಸಾಗಣೆಗೆ ಅನುಮತಿಸಲಾಗಿದೆ.” “ರಸ್ತೆ ಕಾಮಗಾರಿ , ಮಾನ್ಸೂನ್ ಪೂರ್ವದ ಕೆಲಸಗಳು ಮತ್ತು ಕೊರೆತದಿಂದ ಉಂಟಾದ ಹಾನಿಯ ಮರುನಿರ್ಮಾಣ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳಿಗೆ ಸಂಬAಧಿಸಿದ ಕ್ವಾರಿಗಳ ಗಣಿಗಾರಿಕೆ ಅನುಮತಿಸಲಾಗಿದೆ” ಕಂಟೈನ್ ಮೆಂಟ್ ವಲಯದ ಹೊರಗೆ ನಿರ್ಮಾಣ ಕಾಮಗಾರಿಗಳನ್ನು ಸ್ಥಳೀಯ ಕಾರ್ಮಿಕರು ಮತ್ತು ಕೆಲಸಗಾರರನ್ನು ಮಾತ್ರ ಬಳಸಿಕೊಂಡು ಕೋವಿಡ್ ಮಾರ್ಗಸೂಚಿ ಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕೆಲಸ ನಿರ್ವಹಿಸಲು ಅನುಮತಿಸಲಾಗಿದೆ. ಹೊರಗಿನಿಂದ ಕಾರ್ಮಿಕರನ್ನು ಕರೆತರಲು ಅವಕಾಶವಿರುವುದಿಲ್ಲ. ಮುಂಗಾರು ಪೂರ್ವ ತಯಾರಿಕೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಅವಕಾಶವಿರುತ್ತದೆ. ಉಡುಪಿ ಜಿಲ್ಲೆಯಲ್ಲಿ ಚಂಡಮಾರುತದಿAದ ಹಾನಿಗೊಳಗಾದ ಪ್ರವಾಹ ಸಂರಕ್ಷಣಾ ರಚನೆಗಳು,ಸಮುದ್ರ ಕೊರೆತದಿಂದ ಉಂಟಾದ ಹಾನಿಯ ಪುನಃಸ್ಥಾಪನೆ ಮತ್ತು ಇತರ ಮೂಲ ಸೌಕರ್ಯ ಗಳ ದುರಸ್ತಿ ಮತ್ತು ಪುನಃರ್ನಿರ್ಮಾಣ ಕಾಮಗಾರಿಗಳಿಗೆ ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಡೆಸಲು ಅನುಮತಿ ನೀಡಲಾಗಿದೆ.

ಮದುವೆಗಳು: ಎಲ್ಲಾ ಮದುವೆ/ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ. ಶವಸಂಸ್ಕಾರ/ಅಂತ್ಯಕ್ರಿಯೆ: ಶವಸಂಸ್ಕಾರ/ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಿರ್ವಹಿಸಲು ಅನುಮತಿಸಿದೆ. ಈ ಕೆಳಕಂಡ ಹೆಚ್ಚುವರ ಚಟುವಟಿಕೆಗಳನ್ನು ಕಂಟೈನ್ ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಕಾರ್ಯಚರಿಸಲು ಅನುಮತಿಸಿದೆ: ರಫ್ತುಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಎಲ್ಲಾ ಘಟಕಗಳು/ಸಂಸ್ಥೆಗಳು ಅದರ ಶೇಕಡ 30 ರಷ್ಟು ಸಿಬ್ಬಂದಿಗಳನ್ನೊಳಗೊoಡು ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕರ್ತವ್ಯ ನಿರ್ವಹಿಸಲು ಅನುಮತಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಅನುಮತಿಸಲಾದ ಘಟಕಗಳು/ಸಂಸ್ಥೆಗಳ ಪಟ್ಟಿಯನ್ನು ಹೊರಡಿಸುತ್ತದೆ.1000 ಕ್ಕಿಂತ ಹೆಚ್ಚು ಜನರನ್ನು ನೇಮಿಸಿಕೊಂಡಿರುವ ಎಲ್ಲಾ ಘಟಕಗಳು ವಾರಕ್ಕೆ ಎರಡು ಬಾರಿ ಕನಿಷ್ಠ 10% ಉದ್ಯೋಗಿಗಳಿಗೆ  ಪರೀಕ್ಷೆಯನ್ನು ಮಾಡುವುದು.

ಕೋವಿಡ್ ಸಮುಚಿತ ವರ್ತನೆ: ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಲು ಮುಖಗವಸುಗಳನ್ನು ಧರಿಸುವುದು, ಕೈಗಳ ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಮಾರ್ಗಸೂಚಿ ಗಳನ್ನು ಜಿಲ್ಲಾ/ಸ್ಥಳಿಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸುವುದು. ಮಾಸ್ಕ್ ಧರಿಸುವುದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಅತ್ಯವಶ್ಯಕ ಕ್ರಮವಾಗಿದ್ದು, ಮುಖಗವಸುಗಳನ್ನು ಧರಿಸದ ವ್ಯಕ್ತಿಗಳ ವಿರುದ್ಧ ಮಹಾ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ. 250/- ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100/- ದಂಡ ವಿಧಿಸಲಾಗುವುದು. ಕೋವಿಡ್ ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪಾಲಿಸುವುದು. ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ,ಸಭೆಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!