ಸಹಕಾರಿ ಸಂಘದ ಸಿಬ್ಬಂದಿಗಳು ತಮ್ಮ ಖರ್ಚಿನಲ್ಲಿ ಲಸಿಕೆ ಪಡೆದುಕೊಳ್ಳಿ: ಬೋಳ ಸದಾಶಿವ ಶೆಟ್ಟಿ
ಉಚಿತ ಲಸಿಕಾ ಕೇಂದ್ರಗಳಲ್ಲಿ ಸಾಕಷ್ಟು ಲಸಿಕೆಗಳು ಲಭ್ಯ ಇಲ್ಲದೇ ಇರುವುದರಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ನೂಕುನುಗ್ಗಲು ಇರುವುದರಿಂದ ಸಹಕಾರಿ ಸಂಘಗಳು ತಮ್ಮ ಸಿಬ್ಬಂದಿಗಳಿಗೆ ಮತ್ತು ನಿರ್ದೇಶಕ ಮಂಡಳಿಗೆ ತಮ್ಮ ಖರ್ಚಿನಲ್ಲಿ ಕೋವಿಡ್ ಲಸಿಕೆ ಪಡೆದು ನೀಡುವುದು ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವೆಂದು ಕಂಡುಬಂದಿದೆ.
ಸ್ವಾಯತ್ತ ಹಾಗೂ ಸ್ವಾಭಿಮಾನಿ ಸಹಕಾರಿ ವ್ಯವಸ್ಥೆಗಳು ಇದರಿಂದ ಮತ್ತಷ್ಟು ಬಲಪಡಿಸುವುದು ಹಾಗೂ ಸಮಾಜ ಸೇವೆಗೈದಂತಾ ಗಿದೆ. ಇದರಿಂದ ಸರ್ಕಾರದಿಂದ ನೀಡಲ್ಪಡುವ ಉಚಿತ ಲಸಿಕೆಯು ಕಡು ಬಡವರಿಗೆ ಲಭಿಸಲು ಸಹಾಯವಾಗುತ್ತದೆ. ಇದು ಸಹಕಾರಿ ಸಂಘಗಳು ಮಾಡುವ ಬಹುದೊಡ್ಡ ಸಮಾಜ ಸೇವೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ ಹಾಗೂ ಸಂಘಟನಾ ಪ್ರಮುಖರಾದ ಮಂಜುನಾಥ ಎಸ್.ಕೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.