ಮಲ್ಪೆ: ಇಸ್ಪಿಟ್ ಜುಗಾರಿ ಅಡ್ಡೆಗೆ ದಾಳಿ 11 ಮಂದಿ ವಶಕ್ಕೆ
ಮಲ್ಪೆ, ಜೂ.5(ಉಡುಪಿ ಟೈಮ್ಸ್ ವರದಿ): ಇಸ್ಪಿಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 11 ಮಂದಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಮಲ್ಪೆಯಲ್ಲಿ ನಡೆದಿದೆ.
ಪೊಲೀಸರು ವಶಕ್ಕೆ ಪಡೆದ ಆರೋಪಿಗಳನ್ನು ಗೋವರ್ಧನ, ಪ್ರವೀಣ್ ಕುಮಾರ್, ಅವಿರಾಜ್, ಪ್ರವೀಣ್, ಪ್ರವೀಣ್, ಸಂಪತ್, ಹರೀಶ್, ದೀಪಕ್, ಅನಿಲ್, ರವಿ, ಭರತ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಅವರು ಇತರ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ ಕೊಡವೂರು ಗ್ರಾಮದ ಲಕ್ಷ್ಮೀ ನಗರ ಗರಡೆ ಸಮೀಪದ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಇಸ್ಟೀಟ್ ಜುಗಾರಿ ನಡೆಯುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಇಸ್ಪಿಟ್ ಜುಗಾರಿಯಲ್ಲಿ ನಿರತರಾಗಿದ್ದ 11 ಮಂದಿಯನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಇದ್ದ 2880 ರೂ ನಗದು, 52 ಇಸ್ಟೀಟ್ ಎಲೆಗಳು ಹಾಗೂ ಹಳೆಯ ಪೇಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.