ಪ್ರಾಧಿಕಾರದ ಸದಸ್ಯರ ನೇಮಕಾತಿಯಲ್ಲಿ ಕಾಪು ಶಾಸಕರ ನಿರ್ಲಕ್ಷ್ಯ: ಹರೀಶ್ ಕಿಣಿ
ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ನೇಮಕಾತಿಯಲ್ಲಿ ಕಾಪು ಕ್ಷೇತ್ರದ ಉದ್ಯಾವರ, ಕೊರಂಗ್ರಪಾಡಿ, ಅವರು, 80 ಬಡಗಬೆಟ್ಟು ಗ್ರಾಮಗಳ ಯಾವೊಬ್ಬನನ್ನು ಸದಸ್ಯರನ್ನಾಗಿ ನೇಮಿಸದೇ ರಾಜ್ಯ ಬಿ.ಜೆ.ಪಿ ಸರಕಾರ ಆ ಭಾಗದ ಜನರಿಗೆ ಅನ್ಯಾಯವೆಸಗಿದೆ. ಇದು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ರವರ ಈ ಭಾಗದ ಜನರ ಕುರಿತ ಈ ಭಾಗದ ಅಭಿವೃದ್ಧಿ ಕುರಿತು ಅವರ ನಿರ್ಲಕ್ಷ್ಯ ಹಾಗೂ ವೈಫಲ್ಯವನ್ನು ತೋರಿಸುತ್ತದೆ0ದು ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಕಿಣಿ ಆರೋಪಿಸಿದ್ದಾರೆ. ಈ ಭಾಗದಿಂದ ಸಾಕಷ್ಟು ಆದಾಯ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂದಾಯವಾಗುತ್ತಿದೆ. ಈ ಹಿಂದಿನ ಪ್ರಾಯಶಃ ಎಲ್ಲ ನೇಮಕಾತಿಗಳಲ್ಲಿ ಆ ಭಾಗದ ನಾಗರಿಕರನ್ನು ವಿಶ್ವಾಸಕ್ಕೆ ಪಡೆದು ನೇಮಕಗೊಳಿಸುತ್ತಿದರು. ಆದರೆ ಈ ಬಾರಿ ಕಾಪು ಕ್ಷೇತ್ರದ ಯಾವುದೇ ಸದಸ್ಯರನ್ನು ನೇಮಕಗೊಳಿಸಿದೆ ಇದ್ದುದರಿಂದ ಅಭಿವೃದ್ಧಿಗೆ ಹಿನ್ನಡೆ ಆಗುವ ಸಂಭವವಿದೆ. ಆದುದರಿಂದ ಅನ್ಯಾಯವನ್ನು ಸರಿಪಡಿಸಿ ಈ ಪ್ರದೇಶದ ಓರ್ವ ನನ್ನಾದರೂ ಸದಸ್ಯರನ್ನಾಗಿ ನೇಮಕ ಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆಯೆಂದು ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಕಿಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |