ಉಡುಪಿ: ಸೋಂಕಿತರಿಂದ ತಪ್ಪು ಮಾಹಿತಿ, ಪ್ರಕರಣ ದಾಖಲು
ಉಡುಪಿ: ಕೊರೊನಾ ಸೋಂಕಿತರಿರ್ವರು ತಮ್ಮ ಸಂಪರ್ಕ ಮಾಹಿತಿ ಮರೆಮಾಚಿದ್ದರಿಂದ ಅವರ ವಿರುದ್ಧ ಆರೋಗ್ಯ ಇಲಾಖೆ ದೂರು ನೀಡಿದೆ.
ಜಿಲ್ಲೆಯ ಕೋವಿಡ್-19 ಸೋಂಕಿತ ರೋಗಿ ಸಂಖ್ಯೆ 10186 ಮತ್ತು 10187 ಅವರು ತಮ್ಮ ಪ್ರಯಾಣದ ಮತ್ತು ಪ್ರಾಥಮಿಕ ಸಂಪರ್ಕದ ಮಾಹಿತಿಯ ಬಗ್ಗೆ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಇವರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೋಂಕಿತರು ತಪ್ಪು ಮಾಹಿತಿ ನೀಡಿದ ಕಾರಣ ಇವರ ಸಂಪರ್ಕಿತರನ್ನು ಶೀಘ್ರವಾಗಿ ಪತ್ತೆಹಚ್ಚಲು ತೊಂದರೆ ಆಗಿದ್ದು, ಈ ರೀತಿ ಮಾಹಿತಿ ಮುಚ್ಚಿಡುವುದು ಅಪರಾಧವಾಗಿದ್ದು ,ಕೋವಿಡ್ 19 ವಿರುದ್ದದ ಹೋರಾಟದಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಇಲಾಖೆ ಕೋರಿಕೊಂಡಿದೆ.