ಹಡಿಲು ಭೂಮಿ ಕೃಷಿ- ಕೇದಾರೋತ್ಥಾನ ಟ್ರಸ್ಟ್ ಗೆ 1.10 ಲಕ್ಷ ರೂ.ದೇಣಿಗೆ ನೀಡಿದ ಪೇಜಾವರಶ್ರೀ

ಉಡುಪಿ: ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ಶಾಸಕರ ನೇತೃತ್ವದಲ್ಲಿ ಉಡುಪಿ ವಿಧಾನಸಭಾ ವ್ಯಾಪ್ತಿಯ 2000 ಎಕರೆ ಹಡಿಲು ಭೂಮಿ ಬೇಸಾಯ ಅಭಿಯಾನ ನಿಜವಾಗಲೂ ದೇವರು ಮೆಚ್ಚುವ ಕೃಷಿ ಯಜ್ಞ.

ವೈಯಕ್ತಿಕವಾಗಿ ತಮಗೆ ಕೃಷಿಯ ಬಗ್ಗೆ ಆಸಕ್ತಿ ಇದ್ದು, ಈ ಯೋಜನೆ ಎಲ್ಲರಿಗೂ ಅನುಕರಣೀಯವಾದುದಾಗಿದೆ. ದೇಶಕ್ಕೆ ಮಾದರಿಯಾದ ಈ ಯೋಜನೆ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಶ್ರೀಮಠದ ವತಿಯಿಂದ ಅನುಗ್ರಹ ಪೂರ್ವಕ ದೇಣಿಗೆಯಾಗಿ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ನೀಡಿ ಹರಸಿದರು.

ಇದೇ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್ ನ ಮನವಿ ಪತ್ರವನ್ನು ಶ್ರೀಗಳು ಅನಾವರಣಗೊಳಿಸಿದರು. ಶಾಸಕರಾದ ಕೆ. ರಘುಪತಿ ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಕೆ.ರಾಘವೇಂದ್ರ ಕಿಣಿ, ಟ್ರಸ್ಟೀ ದಿನೇಶ್ ಪೂಜಾರಿ, ಶ್ರೀಪೇಜಾವರ ಮಠದ ಕಾರ್ಯನಿರ್ವಹಣಾಧಿಕಾರಿಗಳಾದ ಸಗ್ರಿ ಸುಬ್ರಹ್ಮಣ್ಯ ಭಟ್ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪೆರಂಪಳ್ಳಿ ವಾಸುದೇವ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!