ಬ್ರಹ್ಮಾವರ: ಹೊಟೇಲ್‌ ಕಾರ್ಮಿಕ ನಾಪತ್ತೆ

ಬ್ರಹ್ಮಾವರ ಜೂ.4(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಪ್ರಕಾಶ್ ಶೆಟ್ಟಿ (40) ನಾಪತ್ತೆಯಾದವರು. 

ಇವರು ಗೋವಾದಲ್ಲಿ ಹೊಟೇಲ್‌ ವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಲಾಕ್‌ಡೌನ್‌ ಆಗಿರುವುದರಿಂದ ಸುಮಾರು ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಅಲ್ಲದೆ  ಸರಿಯಾಗಿ ಕೆಲಸ ಇಲ್ಲದೇ ಸಾಲವನ್ನು ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಪ್ರಕಾಶ್ ಶೆಟ್ಟಿಯವರು ಜೂ.2 ರಂದು ಬೆಳಿಗ್ಗೆ ಹಾರಾಡಿ ಗ್ರಾಮದ ಪೇಟೆಮನೆ ಎಂಬಲ್ಲಿರುವ ತಮ್ಮ ತಾಯಿ ಮನೆಗೆ ಹೋಗಿದ್ದರು. ರಾತ್ರಿ ಅಲ್ಲಿಯೇ ಉಳಿದು ಕೊಂಡಿದ್ದ ಅವರು ಬೆಳಿಗ್ಗೆ ನೋಡುವಾಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.  ಅವರ ಪತ್ತೆಗಾಗಿ ಎಲ್ಲಾ ಕಡೆ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಬಗ್ಗೆ  ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಬ್ರಹ್ಮಾವರದ ಹೇರಾಡಿ ಗ್ರಾಮದ ಕೂಡ್ಲಿ ಬಾಬಣ್ಣ ನಾಯ್ಕ (75) ಆತ್ಮಹತ್ಯೆ ಮಾಡಿಕೊಂಡವರು. ಹರ್ನಿಯಾ ಖಾಯಿಲೆಯಿಂದ ಬಳಲುತ್ತಿದ್ದ ಇವರು ಯಾವಾಗಲೂ ವಿಪರೀತ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದರು. ತಮ್ಮ ಅನಾರೋಗ್ಯದ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ಜೂ.3 ರಂದು ಮಧ್ಯಾಹ್ನದ ವೇಳೆ ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!