ಮಂಗಳೂರು ಜೂ.4( ಉಡುಪಿ ಟೈಮ್ಸ್ ವರದಿ): ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಣಜೆಯಲ್ಲಿ ನಡೆದಿದೆ. ಇದು ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ವಾಣಿಜ್ಯ ಪ್ರಮಾಣದ ದೊಡ್ಡ ಮೊತ್ತದ ಎಂ.ಡಿ.ಎಂ.ಎ ಯನ್ನು ವಶಪಡಿಸಿಕೊಂಡಿರುವುದಾಗಿದೆ.
ಮಂಜೇಶ್ವರ ಉಪ್ಪಳ ಗೇಟ್ ಬಳಿಯ ವಾಸಿಗಳಾದ ಮಹಮ್ಮದ್ ಮುನಾಫ್, ಮಹಮ್ಮದ್ ಮುಝಾಂಬಿಲ್ ಮತ್ತು ಅಹಮ್ಮದ್ ಮಸೂಕ್ ಬಂಧಿತ ಆರೋಪಿಗಳು.
ಜೂ.3 ರಂದು ಕಣಾಜೆ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕ ಶರಣಪ್ಪ ಭಂಡಾರಿಯವರಿಗೆ ಕೇರಳ ರಾಜ್ಯಕ್ಕೆ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ದೊರೆತ ಹಿನ್ನೆಲೆ ಕೊಣಾಚೆ ವಿಶ್ವವಿಧ್ಯಾನಿಲಯದ ಸಮೀಪ ಪರಿಶೀಲನೆನಡೆಸಿದಾಗ ಆರೋಪಿಗಳು ಅಕ್ರಮ ವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿ ಇದ್ದ, 10,20,000 ರೂ ಮೌಲ್ಯದ 170 ಗ್ರಾಂ ತೂಕದ ಎಂ.ಡಿ.ಎಂ.ಎ ಮಾತ್ರೆಗಳು, ಕೃತ್ಯಕ್ಕೆ ಬಳಸಿದ ಕಾರು, 4 ಮೊ ಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿದ ಸೊತ್ತುಗಳ ಒಟ್ಟು ಮೌಲ 17,37,000 ರೂ ಆಗಿರುತ್ತದೆ. ಪ್ರಕರಣ ದ ಆರೋಪಿಗಳುನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಕುಮಾರ್ ಬಂಡಾರು, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ, ಸಿ.ಸಿ.ಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಮತ್ತು ಪಿ.ಎಸ್.ಐ ರವರಾದ ಶರಣಪ್ಪ ಭಂಡಾರಿ, ಮಲ್ಲಿಕಾರ್ಜುನ್ ಬಿರಾದಾರ ರವರು, ಮಂಗಳೂರು ಸಿ.ಸಿ.ಬಿ ವಿಭಾಗದ ಪಿಎಸ್ ಐ ಪ್ರದೀಪ್ ಮತ್ತು ಎಎಸ್‌ಐ ರವರಾದ ಮೋಹನ್, ರೆಜಿ, ನಾಗರಾಜ ಲಮಾಣಿ, ಪುರುಷೋತ್ತಮ, ಅಭಿಷೇಕ್, ಉಮೇಶ್ ರಾಠೋಡ್, ಮಂಜುನಾಥ್, ಮಂಜಪ್ಪ ಮತ್ತು ಸಿಸಿಬಿ ವಿಭಾಗದ ಸಿಬ್ಬಂದಿಯವರಾದ ಜಬ್ಬಾರ್, ಮೋಹನ್ ಮತ್ತು ಮಣಿ ಯವರೊಂದಿಗೆ ಜಂಟಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
| | |