ತಂದೆ ಅಂತ್ಯಕ್ರಿಯೆಯಲ್ಲಿ ನಿರಂಜನ ಭಟ್ ಭಾಗಿ
ಕಾರ್ಕಳ : ಉದ್ಯಮಿ ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಿರಂಜನ ಭಟ್ ಅವರಿಗೆ ತಾತ್ಕಾಲಿಕ ಜಾಮೀನು ಪಡೆದು ಗುರುವಾರ ತಾಲ್ಲೂಕಿನ ನಂದಳಿಕೆಗೆ ಬಂದಿದ್ದ ಈತ, ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ.
ನಿರಂಜನ ಭಟ್ಟ ಅವರ ತಂದೆ ಶ್ರೀನಿವಾಸ ಭಟ್ಟ ಇದೇ 22 ರಂದು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು.ವಿವಿಧ ವೈದಿಕ ಪ್ರಕ್ರಿಯೆಗಳು ನಂದಳಿಕೆ ಮನೆಯಲ್ಲಿ ನಡೆದವು. ಕಾರ್ಕಳದ ಬ್ರಾಹ್ಮಣ ಸಭಾದ ಸ್ಮಶಾನದಲ್ಲಿ ಶವಸಂಸ್ಕಾರವನ್ನು ನಡೆಸಲಾಗಿತ್ತು.
ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯೂ ಉಪಸ್ಥಿತರಿದ್ದು, ಎಲ್ಲಿಯೂ ಕಾಣಿಸಿಕೊಳ್ಳದೆ ಕಾರಿನಲ್ಲಿದ್ದು ಅಂತ್ಯಕ್ರಿಯೆ ವಿದ್ಯಮಾನ ಅವಲೋಕಿಸಿದರು. ಇಬ್ಬರು ಅಂಗರಕ್ಷಕರು ನಂದಳಿಕೆ ಅವರ ಮನೆಯ ಹೊರ ಭಾಗದ ಬಸ್ ನಿಲ್ದಾಣದಲ್ಲಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಜನ ಸಾಮಾನ್ಯರು ಪಾಲಿಸುತ್ತಿರುವ ಯಾವುದೇ ನಿಬಂಧನೆಗಳು ಇಲ್ಲಿ ಪಾಲನೆ ಮಾಡದೇ ಇರುವುದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿದರು.
ಜನರ ನಡುವೆ ಅಂತರ ಇರದೆ ಇರುವುದರ ಜತೆಗೆ ಬೆಂಗಳೂರಿನಿಂದ ಬಂದ ಮೃತರ ಸಂಬಂಧಿಕರು ಯಾವುದೇ ಕ್ವಾರಂಟೈನ್‌ಗೆ ಒಳಗಾಗಿರಲಿಲ್ಲ. ಈ ಕುರಿತು ಅಧಿಕಾರಿಗಳು ಮೌನ ವಹಿಸಿರುವುದ್ದಕ್ಕೆ ತೀವ್ರವಾದ ಆಕ್ಷೇಪವು ಜನರಿಂದ ವ್ಯಕ್ತವಾಯಿತು.