ಕೇಂದ್ರ ಸರಕಾರದ ಕೋವಿಡ್ ಲಸಿಕೆ ನೀತಿ ಅಸಮರ್ಪಕ: ಸುಪ್ರೀಂ ಕೋರ್ಟ್

ನವದೆಹಲಿ ಜೂ.2 : ಕೇಂದ್ರ ಸರಕಾರದ ಕೋವಿಡ್ ಲಸಿಕೆ ನೀತಿಯು ಅಸಮರ್ಪಕ ಕಾರ್ಯ ವೈಖರಿಯಂತಿದೆ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪ್ರಮಾಣಗಳ ಕೊರತೆಯ ವಿಷಯ ಹಾಗೂ ಹಲವಾರು ನ್ಯೂನತೆಗಳನ್ನು ಎತ್ತಿ ತೋರಿಸಿದ ನ್ಯಾಯಾಲಯವು, 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವ ಮತ್ತು 18-44 ವಯೋಮಾನದವರಿಗೆ ಲಸಿಕೆಗಾಗಿ ಪಾವತಿಸಬೇಕಾದ ವ್ಯವಸ್ಥೆಯ ಕೇಂದ್ರದ ಲಸಿಕಾ ನೀತಿಯು “ಮೇಲ್ನೋಟಕ್ಕೆ ಅಸಮರ್ಪಕ ಕಾರ್ಯವೈಖರಿಯಂತಿದೆ’ ಎಂದು ಹೇಳಿದೆ. ಇದೇ ವೇಳೆ ಕೇಂದ್ರ ಸರಕಾರಕ್ಕೆ ತನ್ನ ಲಸಿಕಾ ನೀತಿಯನ್ನು ಪರಿಶೀಲಿಸಲು ಮತ್ತು “ಡಿಸೆಂಬರ್ 31 ರವರೆಗೆ ಲಸಿಕೆಗಳ ಲಭ್ಯತೆಯ ಮಾರ್ಗಸೂಚಿಯನ್ನು ದಾಖಲಿಸುವಂತೆ ಆದೇಶಿಸಿದೆ. ಹಾಗೂ ಲಸಿಕೆಗಳ ಬೆಲೆಯ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಲಯವು, ಭಾರತದಲ್ಲಿ ಲಭ್ಯವಿರುವ ಲಸಿಕೆಗಳ ಬೆಲೆಯನ್ನು ಅಂತಾರಾಷ್ಟ್ರೀಯ ಬೆಲೆಗಳಿಗೆ ಹೋಲಿಸುವಂತೆ ಸೂಚಿಸಿದೆ.

ಹೆಚ್ಚಿನ ರಾಷ್ಟ್ರಗಳಲ್ಲಿ, ಲಸಿಕೆಗಳನ್ನು ಸರ್ಕಾರಗಳು ಸಂಗ್ರಹಿಸಿ ಜನರಿಗೆ ಯಾವುದೇ ವೆಚ್ಚವಿಲ್ಲದೆ ವಿತರಿಸುತ್ತಿವೆ. ಭಾರತದಲ್ಲಿ 18-44 ವರ್ಷ ವಯಸ್ಸಿನವರು ಲಸಿಕೆಗಳಿಗೆ ದುಬಾರಿ ಬೆಲೆಯನ್ನು ಪಾವತಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ವ್ಯಾಕ್ಸಿನೇಷನ್ ಸಮಸ್ಯೆಯನ್ನು “ಸಂಪೂರ್ಣವಾಗಿ ನಿರ್ಣಾಯಕ” ಎಂದು ಕರೆದ ನ್ಯಾಯಾಲಯ, ಪ್ರಸ್ತುತ 18-44 ವರ್ಷ ವಯಸ್ಸಿನ ಜನರು ಕೇವಲ ಸೋಂಕಿಗೆ ಒಳಗಾಗುತ್ತಿರುವುದಲ್ಲ, ಸೋಂಕಿನ ತೀವ್ರ ಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರದ ಲಸಿಕಾ ನೀತಿಯ ಬಗ್ಗೆ ಎಚ್ಚರಿಕೆ ನೀಡಿದೆ.

“18-44 ವಯೋಮಾನದ ವ್ಯಕ್ತಿಗಳಿಗೆ ಲಸಿಕೆ ನೀಡುವ ಪ್ರಾಮುಖ್ಯತೆಯಿಂದಾಗಿ, ಮೊದಲ 2 ಹಂತಗಳ ಅಡಿಯಲ್ಲಿ ಈ ವಯೋ ಮಾನದವರಿಗೆ ಉಚಿತ ಲಸಿಕೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ನಂತರ ನೀತಿ ಮತ್ತು ಅದನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳು ಪಾವತಿ ಮೂಲಕ 18-44 ವಯೋಮಾನದವರಿಗೆ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಕೇಂದ್ರ ಸರ್ಕಾರದ ಲಸಿಕಾ ನೀತಿ ಅಸಮರ್ಪಕ ಎಂದಿದೆ.

45 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡಲಾಗುತ್ತದೆ ಎಂದು ಮೇ 1 ರಂದು ಪ್ರಕಟಿಸಿತ್ತು. ಆ ವಯೋಮಾನಕ್ಕಿಂತ ಕೇಳಗಿನವರು ಉತ್ಪಾದಕರಿಂದ ಶೇಕಡಾ 50 ರಷ್ಟು ಕಡಿಮೆ ದರದಲ್ಲಿ ಖರೀದಿಸಬಹುದೆಂದಿತ್ತು, ಆದರೇ, ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಲಸಿಕೆಗಳು ಮಾರಾಟವಾಗುತ್ತಿವೆ. ಖಾಸಗಿ ಆಸ್ಪತ್ರೆಗಳು ದುಬಾರಿ ಬೆಲೆಗೆ ಲಸಿಕೆನ್ನು ನೀಡುತ್ತಿವೆ.

ಲಸಿಕೆ ಸಂಗ್ರಹಕ್ಕಾಗಿ, 35,000 ಕೋಟಿ ಬಜೆಟ್ ನನ್ನು ಹೇಗೆ ಖರ್ಚು ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲು ಕೇಂದ್ರವನ್ನು ಕೋರ್ಟ್ ಕೇಳಿದೆ. “ಲಸಿಕೆಗಾಗಿ 35,000 ಕೋಟಿ ನಿಗದಿಪಡಿಸಿದ್ದರೆ, ಅದನ್ನು 18-44 ವಯಸ್ಸಿನವರಿಗೆ ಲಸಿಕೆ ಹಾಕಲು ಏಕೆ ಬಳಸ ಲಾಗುವುದಿಲ್ಲ” . ಕೇಂದ್ರವು ತನ್ನ ಲಸಿಕೆ ಖರೀದಿ ಇತಿಹಾಸದ ಸಂಪೂರ್ಣ ಡೇಟಾವನ್ನು ಇಲ್ಲಿಯವರೆಗೆ ನೀಡುವಂತೆ ಕೇಳಿಕೊಂಡಿ ದ್ದಲ್ಲದೇ, ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಲಸಿಕೆಗಳ ಡೋಸ್‌ ಗಳ ಸಂಖ್ಯೆ ಮತ್ತು ಪೂರೈಕೆಯ ದಿನಾಂಕದ ಎಲ್ಲಾ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದೆ. ಇನ್ನು ಕೇಂದ್ರ ಸರ್ಕಾರದ ಈ ಲಸಿಕಾ ನೀತಿಯನ್ನು ವಿರೋಧ ಪಕ್ಷ ಕಾಂಗ್ರೆಸ್ ಕೂಡ ಪ್ರಶ್ನಿಸಿದ್ದು, “ಒಂದು ದೇಶ, ಒಂದು ಬೆಲೆ” ಗಾಗಿ ಕೇಂದ್ರವನ್ನು ಒತ್ತಾಯಿಸಿದ್ದಲ್ಲದೇ, ಲಸಿಕೆಯನ್ನು ಕೇಂದ್ರ ಸರ್ಕಾರ ಲಾಭದ ಅಸ್ತ್ರವನ್ನಾಗಿ ಮಾಡುವುದಕ್ಕೆ ಹೊರಟಿದೆ ಎಂದು ಆರೋಪಿಸಿದೆ.

Leave a Reply

Your email address will not be published. Required fields are marked *

error: Content is protected !!