ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ನೀಡುವಂತಿಲ್ಲ!

ಲಖನೌ: ಕೋವಿಡ್‌ ಲಸಿಕೆ ಅಭಿಯಾನವನ್ನು ಉತ್ತೇಜಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಇಟಾವ ಜಿಲ್ಲೆಯ ಅಧಿಕಾರಿಗಳು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಮದ್ಯ ಮಾರಾಟ ಮಾಡದಂತೆ ಅಧಿಕಾರಿಗಳು ಮದ್ಯದಂಗಡಿಯ ಮಾಲೀಕರಿಗೆ ನಿರ್ದೇಶನ ನೀಡಿದ್ದಾರೆ.

45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮದ್ಯ ಮಾರಾಟ ಮಾಡುವುದಕ್ಕೂ ಮೊದಲು ಅವರ ವ್ಯಾಕ್ಸಿನೇಷನ್ ಕಾರ್ಡ್ ಕೇಳುವಂತೆ ಮದ್ಯದಂಗಡಿ ಮಾಲೀಕರಿಗೆ ಇಟವಾ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಹೆಮ್ ಸಿಂಗ್ ಹೇಳಿದ್ದಾರೆ.

ಇಟಾವಾ ಪಟ್ಟಣದಲ್ಲಿ ಮದ್ಯದಂಗಡಿಗಳ ತಪಾಸಣೆ ನಡೆಸಿದ ಸಿಂಗ್, ಸರದಿಯಲ್ಲಿ ನಿಂತಿದ್ದವರನ್ನು ಲಸಿಕೆ ಪಡೆದಿರುವ ಬಗ್ಗೆ ಪ್ರಶ್ನೆ ಮಾಡಿದರು. ಲಸಿಕೆ ಪಡೆಯದವರನ್ನು ಅಲ್ಲಿಂದ ಕಳುಹಿಸಿದರು ಎಂದು ವರದಿಯಾಗಿದೆ. ಮದ್ಯದಂಗಡಿಯ ಮಾಲೀಕರು ನಿಯಮ ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ನಾನು ಆಗಾಗ ಪರಿಶೀಲಿಸುತ್ತಿರುತ್ತೇನೆOದು ಸಿಂಗ್‌ ತಿಳಿಸಿದ್ದಾರೆ.

ಇನ್ನೊಂದೆಡೆ, ಲಸಿಕೆ ಪಡೆದ ನಂತರವೇ ಫಿರೋಜಾಬಾದ್‌ ಜಿಲ್ಲಾ ವ್ಯಾಪ್ತಿಯ ಸರ್ಕಾರಿ ನೌಕರರಿಗೆ ಸಂಬಳ ನೀಡಲಾಗುವುದು ಎಂದು ತಿಳಿಸಲಾಗಿದೆ. ಆದರೆ, 45 ವರ್ಷ ಮೇಲ್ಪಟ್ಟವರಿಗೆಲ್ಲ ಲಸಿಕೆ ನೀಡಲು ಜಿಲ್ಲಾಡಳಿತದ ಬಳಿ ಸಾಕಷ್ಟು ಲಸಿಕೆ ಇದೆಯೇ ಎಂಬುದು ಖಚಿತವಾಗಿಲ್ಲ. 

Leave a Reply

Your email address will not be published. Required fields are marked *

error: Content is protected !!