ಉದ್ಯಾವರ: ಅಂದರ್ ಬಾಹರ್ ಆಟ, ಹತ್ತು ಮಂದಿ ಅಂದರ್ -‘ಸೌಂದರ್ಯ’ ಬಾಹರ್…?

ಕಾಪು ಮೇ.29(ಉಡುಪಿ ಟೈಮ್ಸ್ ವರದಿ): ಉದ್ಯಾವರದ ರೆಸಿಡೆನ್ಸಿಯಲ್ ಕಟ್ಟಡದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ಸಂದರ್ಭ ಕಟ್ಟಡ ಕೊಠಡಿಯೊಂದರಲ್ಲಿ ಯುವತಿ ಪೊಲೀಸ್ ದಾಳಿ ಸಂದರ್ಭ ಪತ್ತೆಯಾಗಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

ಅಶೋಕ (48), ರಮೇಶ ನಾರಾಯಣ ಕೋಟ್ಯಾನ್ (30), ರಾಘವೇಂದ್ರ (35), ಅಶೋಕ (34),ಉದಯ ಆಚಾರ್ಯ (38),ರವೀಂದ್ರ (42), ಮಹೇಶ (22),ಯೋಗೀಶ (55), ಪ್ರವೀಣ (32), ರವೀಂದ್ರ (52) ಪೊಲೀಸರು ವಶಕ್ಕೆ ಪಡೆದ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ ಅವರು ಇತರ ಸಿಬ್ಬಂದಿ ಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಇಸ್ಪೀಟ್‌ ಜುಗಾರಿ  ಆಡುತ್ತಿದ್ದವರನ್ನು ವಶಕ್ಕೆ ಪಡೆದುಸ್ಥಳದಲ್ಲಿದ್ದ ಇಸ್ಪೀಟ್ ಜೂಜಾಟಕ್ಕೆ ಬಳಸಿದ 39,210 ರೂ. ನಗದು, ಅಂದರ್ ಬಾಹರ್ ಆಟಕ್ಕೆ ಬಳಸಲಾದ 52 ಇಸ್ಪೀಟ್ ಎಲೆಗಳು, ಬೆಡ್‌ಸೀಟ್ ಮತ್ತು 6 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಟ್ಟಡ ರಾಜಕೀಯ ಮುಖಂಡನಿಗೆ ಸೇರಿದ್ದಾಗಿದೆಂದು ತಿಳಿದು ಬಂದಿದ್ದು. ರಾಜಕೀಯ ಪ್ರಭಾವ ಬಳಸಿ ಯುವತಿಯನ್ನು ರಕ್ಷಿಸಲಾಗಿದೆಂದು ಆರೋಪ ಕೇಳಿಬಂದಿದೆ

ಜಿಲ್ಲೆಯಲ್ಲಿ ಕೋವಿಡ್ ಲಾಕ್ ಡೌನ್ ‌ಜಾರಿಯಲ್ಲಿದ್ದು ಆರೋಪಿಗಳು ಸರಕಾರ ಹಾಗೂ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಇಸ್ಪೀಟ್ ಜುಗಾರಿ ಆಟದಲ್ಲಿ ಭಾಗಿಯಾಗಿರುವುದಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!