ಮಣಿಪಾಲ: ಖುದ್ದು ವಾಹನ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ- 35 ವಾಹನ ವಶಕ್ಕೆ

ಉಡುಪಿ ಮೇ.28(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ‌ಕ್ಕೆ ಕೈಗೊಂಡಿರುವ ಕಟ್ಟು ನಿಟ್ಟಿನ ಕ್ರಮದ ಹೊರತಾಗಿಯೂ ಅನೇಕರು ಅನಗತ್ಯವಾಗಿ ತಿರುಗಾಡುತ್ತಿದ್ದು, ಅಂತಹವರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಇಂದು ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಖುದ್ದು ವಾಹನಗಳ ತಪಾಸಣೆ ನಡೆಸಿ 35 ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ. 

ಇದರೊಂದಿಗೆ ಇಂದ್ರಾಳಿ ರೈಲ್ವೆ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ಕರೆತರಲು ಕಾರುಗಳಲ್ಲಿ ಚಾಲಕ ಹೊರತುಪಡಿಸಿ ಇತರರು ಪ್ರಯಾಣಿಸಿದ್ದು ಕಂಡು ಬಂದಿದ್ದು, ಅಂತಹ ವಾಹನಗಳನ್ನು ತಪಾಸಣೆ ನಡೆಸಿ ಸೀಝ್ ಮಾಡಲಾಯಿತು.

ಮಣಿಪಾಲ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಗೌಡ ಮತ್ತು ಸಬ್ ಇನ್ಸ್‌ಪೆಕ್ಟರ್ ರಾಜ್ ಶೇಖರ್ ವಂದಲಿ ಅವರು ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ 25 ರಿಂದ 35 ವಾಹನಗಳನ್ನು ಸೀಝ್ ಮಾಡಿದ್ದಾರೆ.ಹಾಗೂ 7 ರಿಂದ 9 ವಾಹನಗಳ ಮೇಲೆ ಕೇಸು ದಾಖಲಿಸಿ 20 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಈ ಮೊದಲೇ ಜಿಲ್ಲಾಧಿಕಾರಿಯವರು ಜೂ.7ರವರೆಗೆ ಯಾರೂ ಕೂಡಾ ಅನಗತ್ಯವಾಗಿ ತಿರುಗಾಡದಂತೆ ಎಚ್ಚರಿಕೆ ನೀಡಿದ್ದರು ಆದರೂ ಅನೇಕರು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂದಿದೆ.

Leave a Reply

Your email address will not be published. Required fields are marked *

error: Content is protected !!