ಬೆಳ್ತಂಗಡಿ: ಬ್ಲಾಕ್ ಫಂಗಸ್’ಗೆ ಅಳಕೆ ವ್ಯಕ್ತಿ ಬಲಿ

ಬೆಳ್ತಂಗಡಿ: ಬ್ಲಾಕ್ ಫಂಗಸ್​ ಗೆ ಬೆಳ್ತಂಗಡಿಯ ನಿವಾಸಿಯೋರ್ವರು ಮೃತಪಟ್ಟಿದ್ದಾರೆ. ಕಪ್ಪು ಶಿಲೀಂಧ್ರ ಕಾಟಕ್ಕೆ ಬಲಿಯಾದ ವ್ಯಕ್ತಿಯನ್ನು ಅಳಕೆ ನಿವಾಸಿ ನೋಣಯ್ಯ ಪೂಜಾರಿ (55)ಎಂದು ಗುರುತಿಸಲಾಗಿದೆ.

ಕಣ್ಣಿನ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನೋಣಯ್ಯ ಪೂಜಾರಿಯವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಲ್ಲಿ ತಪಾಸಣೆ ನಡೆಸಿದಾದ ಕೊರೊನಾ ಪಾಸಿಟಿವ್ ಬಂದಿರುವುದು ಪತ್ತೆಯಾಗಿತ್ತು. ಇದಲ್ಲದೆ ಇವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು ಕಣ್ಣಿನ ಶಸ್ತ್ರಚಿಕಿತ್ಸೆ ಬಳಿಕ ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೇ 27ರಂದು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!