ಕರಾವಳಿ ಅಭಿವೃದ್ಧಿ ಪ್ರಾ. ಅಧ್ಯಕ್ಷ ಮಟ್ಟಾರ್ ಗೆ ರಾಜ್ಯ ಸಚಿವ ದರ್ಜೆಯ ಸ್ಥಾನ
ಉಡುಪಿ :(ಉಡುಪಿ ಟೈಮ್ಸ್ ವರದಿ) ಕರ್ನಾಟಕ ಸರಕಾರವು ಮಟ್ಟಾರ್ ರತ್ನಕಾರ್ ಹೆಗ್ಡೆ ಯವರಿಗೆ ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲವು ತಿಂಗಳುಗಳ ಹಿಂದೆ ನೇಮಕ ಮಾಡಿದ್ದರು. ಪ್ರಸ್ತುತ ಇವರ ಕಾರ್ಯಚಟುವಟಿಕೆ ಕಂಡು ರಾಜ್ಯ ಸರಕಾರವು ರಾಜ್ಯ ಸಚಿವ ಮಟ್ಟದ ಸ್ಥಾನಮಾನ ನೀಡಿದೆ. ಮಟ್ಟಾರ್ ಸುಮಾರು 4 ವರ್ಷ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎಲ್ಲಾ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾರ್ಯಕರ್ತರನ್ನು ಹುರಿದುಂಬಿಸಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠ ಮಾಡುವಲ್ಲಿ ಶ್ರಮವಹಿಸಿದ್ದರು. ಪಕ್ಷ ಸಂಘಟನೆ ಮತ್ತ್ತು ರಾಷ್ಟ್ರೀಯ ಸ್ವಯಂ ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಇವರು, ಉಡುಪಿ ಜಿಲ್ಲೆಯ ಎಲ್ಲಾ 5 ವಿಧಾನ ಸಭಾ ಕ್ಷೇತ್ರದಲ್ಲಿ ದಾಖಲೆ ರೀತಿಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೆತ್ರದಲ್ಲಿ ಅತ್ಯಧಿಕ ಮತಗಳಲ್ಲಿ ಸಂಸದರು ಗೆಲ್ಲಲು, ಶಾಸಕರುಗಳು ಮತ್ತು ಪಕ್ಷದ ಕಾರ್ಯ ಕರ್ತರ ಒಗ್ಗಟ್ಟಿನ ಕೆಲಸದೊಂದಿಗೆ ಮಾಡುವಲ್ಲಿ ಮಟ್ಟಾರ್ ರತ್ನಾಕರ ಹೆಗ್ಡೆ ಸಫಲರಾಗಿದ್ದರು. ಇವರ ಪಕ್ಷ ಸಂಘಟನೆ, ಎಲ್ಲಾ ನಾಯಕರುಗಳೊಡನೆ ಒಡನಾಟ ಮತ್ತು ಸಂಘದ ನಾಯಕರುಗಳ ಮೆಚ್ಚುಗೆ ಅದರಲ್ಲೂ ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷರ ಪ್ರೋತ್ಸಾಹ ಹಾಗೂ ಬೆಂಬಲ ಕಂಡು ಪಕ್ಷಕ್ಕಾಗಿ ದುಡಿದ ಮಟ್ಟಾರು ರತ್ನಕಾರ ಹೆಗ್ಡೆಯವರ ಶ್ರಮವನ್ನು ಗುರುತಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ಫೋಷಿಸಿದ್ದಾರೆ.
ಉಡುಪಿಯಲ್ಲೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ತೆರೆಯಲು ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.