ಧರ್ಮಸ್ಥಳ: ಹೊರ ರಾಜ್ಯದವರಿಗೆ ಉದ್ಯೋಗ, ನಮ್ಮ ಸ್ವಾಭಿಮಾನ ಕೆಣಕುವಂತಿದೆ- ಹೋರಾಟ ಎಚ್ಚರಿಕೆ ನೀಡಿದ ಡಿಕೆಶಿ
ಧರ್ಮಸ್ಥಳ ಮೇ.25: ಎಂಆರ್ ಪಿಎಲ್ ಘಟಕ ಸ್ಥಾಪನೆಗೆ ಜಾಗ ನೀಡಿದ ದ.ಕ ಜಿಲ್ಲೆಯವರು ಉದ್ಯೋಗಕ್ಕೆ ಎಲ್ಲಿ ಹೋಗಬೇಕು..? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.
ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಎಂಆರ್ಪಿಎಲ್ ನಲ್ಲಿ ನಡೆಯುತ್ತಿರುವ ಉದ್ಯೋಗ ತಾರತಮ್ಯವನ್ನು ಖಂಡಿಸಿದರು. ಇದೇ ವೇಳೆ ಘಟಕ ಸ್ಥಾಪನೆಗೆ ಜಾಗ ನೀಡಿದ ದಕ್ಷಿಣ ಕನ್ನಡದ ಯುವಕರು ಹಾಗೂ ಕನ್ನಡಿಗರು ಉದ್ಯೋಗಕ್ಕೆ ಎಲ್ಲಿಗೆ ಹೋಗಬೇಕು.
ಸರೋಜಿನಿ ಮಹಿಷಿ ವರದಿ ಬಗ್ಗೆ ಸಂಸದ ನಳಿನ್ ಕುಮಾರ್ ಅವರಿಗೆ ಅರಿವಿಲ್ಲವೇ..? ಯುವಕರು ಉದ್ಯೋಗ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಎಂಆರ್ ಪಿಎಲ್ ನಲ್ಲಿ ಇಲ್ಲಿಯ ಯುವಕರಿಗೆ ಉದ್ಯೋಗ ನೀಡುವ ಬದಲು ಹೊರ ರಾಜ್ಯದವರಿಗೆ ಉದ್ಯೋಗ ನೀಡುವುದು ನಮ್ಮ ಸ್ವಾಭಿಮಾನವನ್ನು ಕೆಣಕುವಂತಿದೆ. ಇದೇ ರೀತಿ ಮುಂದುವರೆದಲ್ಲಿ ಇದರ ವಿರುದ್ಧ ಹೋರಾಟ ಮಾಡಬೇಕಾ ಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಅವರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಡಿಕೆಶಿ ಅವರನ್ನು ಕಾಂಗ್ರೆಸ್ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್, ಮೊದಲಾದವರು ಜೊತೆಗಿದ್ದರು.
ರಾಜಕೀಯ ವ್ಯಕ್ತಿಗಳಿಗೆ ಯಾವ ಲಾಕ್ಡೌನ್ ಕಾನೂನು ಅನ್ವಯಿಸುವುದಿಲ್ಲವೇ…?
ಬೇರೆಯವರಿಗೆ ದೇವಸ್ಥಾನಕ್ಕೆ (ದರ್ಶನಕ್ಕೆ ಅವಕಾಶ) ಇಲ್ಲ, ಇವರು ಹೇಗೆಹೋದರು
ಛಿ ಹೊಲಸು ರಾಜಕೀಯ