ಉಡುಪಿ: ಮತ್ತೆ 6, ದ.ಕ.1 ಕೊರೋನಾ ಪಾಸಿಟಿವ್ ದೃಢ, ರಾಜ್ಯದಲ್ಲಿ ಇಂದು 63 ಹೊಸ ಪ್ರಕರಣ
ಉಡುಪಿ: ಮುಂಬೈಯಿಂದ ಬಂದ 6 ಪ್ರಯಾಣಿಕರಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಸೋಂಕಿತರ ಪೈಕಿ ಇಬ್ಬರು ಬಾಲಕಿಯರ ಸಹಿತ ನಾಲ್ವರು ಮಹಿಳೆಯರು ಮತ್ತು ಒಬ್ಬರ ವೃದ್ಧ ಸೇರಿದಂತೆ ಇಬ್ಬರು ಪುರುಷರು ಸೇರಿದ್ದಾರೆ. ಕುಂದಾಪುರ ಕ್ವಾರಂಟೈನ್ ಕೇಂದ್ರದಲ್ಲಿರುವ ನಾಲ್ಕು ಮತ್ತು 15 ವರ್ಷದ ಬಾಲಕಿಯರಿಬ್ಬರಲ್ಲಿ ಸೊಂಕು ಕಾಣಿಸಿಕೊಂಡಿದೆ. ಬೈಂದೂರು ಕ್ವಾರಂಟೈನ್ ಕೇಂದ್ರದಲ್ಲಿರುವ 74 ವರ್ಷದ ವೃದ್ಧ ಮತ್ತು 55ರ ಹರೆಯದ ವ್ಯಕ್ತಿಗೆ ಸೋಂಕು ಅಂಟಿದೆ. ಹೆಬ್ರಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವ 31 ವರ್ಷ ಹಾಗೂ 47 ವರ್ಷ ಪ್ರಾಯದ ಮಹಿಳೆಯರಿಬ್ಬರು ಸೋಂಕಿತರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 22 ಸೋಂಕಿತ ಪ್ರಕರಣ ದೃಢವಾಗಿದೆ.
ಮಂಗಳೂರಿನ ನೀರುಮಾರ್ಗದ 40 ವರ್ಷದ ಮಹಿಳೆಗೆ ಕೊರೋನಾ ಸೋಂಕು. ಮೇ.10 ರಂದು ಕಾರಿನಲ್ಲಿ ತಾಯಿ ಮಗ ಬೆಂಗಳೂರಿನ ರಾಜಾಜಿನಗರದಿಂದ ಬಂದಿದ್ದರು. ಅಸ್ತಮ ಮತ್ತು ಬಿಪಿಯಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು.
ರಾಜ್ಯದಲ್ಲಿ ನಿನ್ನೆ ಒಂದೇ ದಿನ ದಾಖಲೆ 149 ಪ್ರಕರಣ ಪತ್ತೆಯಾಗಿದ್ದು ರಾಜ್ಯವನ್ನೇ ತಲ್ಲಣಿಸಿತ್ತು. ನಿನ್ನೆ ಮಂಡ್ಯಕ್ಕೆ ಕಂಟಕವಾಗಿದ್ದ ಮುಂಬೈ , ಇಂದು ಹಾಸನಕ್ಕೆ ತಟ್ಟಿದೆ.
ಮುಂಬೈನಿಂದ ಆಗಮಿಸಿದವರಲ್ಲಿ ಹಾಸನದ 21 ಮಂದಿಗೆ ಸೋಂಕು ತಗುಲಿದೆ. ಇನ್ನು ಬೀದರ್ 10, ಮಂಡ್ಯ 8, ಕಲಬುರಗಿ 7, ಉಡುಪಿ 6, ಬೆಂಗಳೂರು 4, ತುಮಕೂರು 4, ದಕ್ಷಿಣ ಕನ್ನಡ, ಯಾದಗಿರಿ, ಉತ್ತರ ಕನ್ನಡದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಇಂದು 63 ಹೊಸ ಪ್ರಕರಣಗಳು ಪತ್ತೆಯಾಗಿವೆ.
1458 ಪ್ರಕರಣಗಳ ಪೈಕಿ 553 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 864 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ ರಾಜ್ಯದಲ್ಲಿ ಒಟ್ಟಾರೆ 40 ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಇಂದು ಮಧ್ಯಾಹ್ನದ ವೇಳೆ 63 ಹೊಸ ಪ್ರಕರಣ ದೃಢವಾಗಿದೆ.