ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘಿಸುತ್ತಿರಾ…? ನಿಮಗೆ ಕಾದಿದೆ ಹೊಸ ಶಿಕ್ಷೆ…

ಉಡುಪಿ ಮೇ.23(ಉಡುಪಿ ಟೈಮ್ಸ್ ವರದಿ): ಲಾಕ್ ಡೌನ್ ಅವಧಿಯಲ್ಲಿ ನಿತ್ಯದ ಅಗತ್ಯ ಕಾರ್ಯಗಳಿಗೆ ಸಮಯಾವಕಾಶ ನೀಡಿ, ಆ ಅವಧಿ ಹೊರತು ಪಡಿಸಿ ಅನಗತ್ಯವಾಗಿ ತಿರುಗಾಡದಂತೆ ಮೊದಲಿನಿಂದಲೂ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿದೆ. ಆದರೂ ಕೂಡಾ ಇನ್ನೂ ಅನೇಕರು ಈಗಲೂ ನಿಯಮವನ್ನು ಉಲ್ಲಂಘಿಸುತ್ತಿರುವ ಘಟಕಗಳು ನಡೆಯುತ್ತಲೇ ಇರುತ್ತದೆ.

ಆದ್ದರಿಂದ ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಅದರಂತೆ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನವನ್ನು ತಡೆಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು, ರಾಷ್ಟ್ರೀಯ ಹೆದ್ದಾರಿ 66 ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ ವರೆಗೆ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ಕಸದ ತ್ಯಾಜ್ಯವನ್ನು,‌ ಅದೇ ವಾಹನಕ್ಕೆ ತುಂಬಿಸಿ, ಅಲೆವೂರಿನ ಡಂಪಿಂಗ್ ಯಾರ್ಡ್ ಗೆ ಸಾಗಿಸಿದರು.  

ಈ ವೇಳೆ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರುಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರು ನಿಯಮ ಬಾಹಿರವಾಗಿ ವಾಹನಗಳಲ್ಲಿ ಸಂಚರಿಸದಂತೆ ಈ ಮೊದಲೇ ಸೂಚನೆ ನೀಡಲಾಗಿದ್ದು, ಇದನ್ನು ಉಲ್ಲಂಘಿಸಿದಲ್ಲಿ ಅಂತಹ ವಾಹನವನ್ನು ಲಾಕ್ಡೌನ್ ಮುಗಿಯುವವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!