ಮೇ 24ರ ಬೆಳಗ್ಗೆ 6 ರಿಂದ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್144(3)ಜಾರಿ: ಜಿಲ್ಲಾಧಿಕಾರಿ
ಉಡುಪಿ ಮೇ.23(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಮೇ 24ರ ಬೆಳಗ್ಗೆ 6 ರಿಂದ ಉಡುಪಿ ಜಿಲ್ಲೆಯಾದ್ಯಂತ ಸಿಆರ್ಪಿಸಿ ಸೆಕ್ಷನ್144(3)ನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿಮುಂದಿನ ಆದೇಶದವರೆಗೆ ಹಲವು ಮಾರ್ಗಸೂಚಿಗಳನ್ನು ಅವರು ಹೊರಡಿಸಿದ್ದಾರೆ. ಈ ಮಾರ್ಗಸೂಚಿಗಳು ಮೇ 24ರ ಬೆಳಗ್ಗೆ 6ರಿಂದ ಜೂ.7ರ ಬೆಳಗ್ಗೆ 6ರವರೆಗೆ ಜಾರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ. ಅದರಂತೆ, ಆಹಾರ, ದಿನಸಿ,ಹಣ್ಣುಗಳು ಹಾಗೂ ತರಕಾರಿ, ಮಾಂಸ ಮತ್ತು ಮೀನು, ಜಾನುವಾರುಗಳಿಗೆ ಮೇವಿನ ಅಂಗಡಿಗಳಿಗೆ ಬೆಳಗ್ಗೆ 6ರಿಂದ 10ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಗೆ ಅವಕಾಶವಿದೆ. ಈ ಅವಧಿಯಲ್ಲಿ ಮದ್ಯದಂಗಡಿಗಳಿಂದ ಪಾರ್ಸೆಲ್ ಕೊಂಡು ಹೋಗಲು ಅವಕಾಶವಿದೆ. ತಳ್ಳುಗಾಡಿಗಳ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾರಾಟ ಮಾಡಬಹುದು. ಅದೇ ಸಮಯದಲ್ಲಿ ಹಾಪ್ಕಾಮ್ಸ್, ಕೆಎಂಎಫ್ ಹಾಲಿನ ಬೂತ್ಗಳು ಕಾರ್ಯನಿರ್ವಹಿಸಬಹುದು. ಬ್ಯಾಂಕುಗಳು ಮತ್ತು ವಿಮಾಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕರ್ತವ್ಯ ನಿರ್ವಹಿಸಲು,ಎಟಿಎಂ ಕಾರ್ಯಾಚರಿಸಲು ಅವಕಾಶವಿದೆ. ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ಹಾಗೂ ಹೋಮ್ ಡೆಲಿವರಿ ಮಾಡಬಹುದು.ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಆಯಾ ಮನೆಗಳಲ್ಲೇ ಸರಳವಾಗಿ ಕುಟುಂಬದ ಸದಸ್ಯರು ಸೇರಿ 40 ನಡೆಸಬಹುದು. ಇದಕ್ಕಾಗಿ ತಹಶೀಲ್ದಾರ್ರಿಂದ ಅನುಮತಿ ಪತ್ರ ಪಡೆದಿರಬೇಕು. ಶವಸಂಸ್ಕಾರ, ಅಂತ್ಯಕ್ರಿಯೆಯನ್ನು ಗರಿಷ್ಠ ಐದು ಜನರೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ನಿರ್ವಹಿಸಲು ಅನುಮತಿ ನೀಡಲಾಗಿದೆ.
ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಲು ಮುಖಗವಸುನ್ನು ಕಡ್ಡಾಯವಾಗಿ ಧರಿಸಬೇಕು. ಕೈಗಳ ನೈರ್ಮಲ್ಯ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಮಾರ್ಗಸೂಚಿ ಳನ್ನು ಎಲ್ಲರೂ ಅನುಸರಿಸಬೇಕು. ಸೋಂಕು ಹರಡುವಿಕೆ ತಡೆಗಟ್ಟಲು ಮಾಸ್ಕ್ ಧರಿಸುವುದು ಅತ್ಯವಶ್ಯಕ ಕ್ರಮವಾಗಿದ್ದು, ಮಾಸ್ಕ್ ಧರಿಸದ ವ್ಯಕ್ತಿಗಳ ವಿರುದ್ಧ ದಂಡ ವಿಧಿಸಲಾಗು ವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ ನಿಗದಿಯಾಗಿರುವ ವಿಮಾನ ಮತ್ತು ರೈಲು ಪ್ರಯಾಣಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಟೋ, ಕ್ಯಾಬ್, ಟ್ಯಾಕ್ಸಿಗಳ ಮೂಲಕ ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಮಾತ್ರ ಸಂಚರಿಸಬೇಕಾಗಿದೆ. ಇದಕ್ಕಾಗಿ ಸೂಕ್ತ ಟಿಕೇಟ್ ದಾಖಲೆಗಳನ್ನು ಹೊಂದಿರಬೇಕು.
ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ,ತರಬೇತಿ ಸಂಸ್ಥೆಗಳು ಮುಚ್ಛಲ್ಪಡುತ್ತವೆ. ಆನ್ಲೈನ್ ಹಾಗೂ ದೂರಶಿಕ್ಷಣಕ್ಕೆ ಮಾತ್ರ ಅನುಮತಿ ಇದೆ. ಪೊಲೀಸ್, ಸರಕಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗಳಿಗೆ, ಕ್ವಾರಂಟೈನ್ ವ್ಯಕ್ತಿಗಳಿಗೆ ಮಾತ್ರ ಹೊಟೇಲ್, ರೆಸ್ಟೋರೆಂಟ್, ಅತಿಥಿಗೃಹಗಳ ಸೇವೆಗಳನ್ನು ಬಳಸಲು ಅವಕಾಶವಿರುತ್ತದೆ. ಹೊಟೇಲ್ಗಳಿಗೆ ಪಾರ್ಸೆಲ್ ಸೇವೆ ಹಾಗೂ ಹೋಮ್ ಡೆಲಿವರಿ ಸೇವೆಗೆ ಮಾತ್ರ ಅವಕಾಶವಿದೆ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಭೆ ಸಮಾರಂಭಗಳಿಗೆ ನಿಷೇಧವಿದೆ. ಎಲ್ಲಾ ಧಾರ್ಮಿಕ, ಪೂಜಾ ಸ್ಥಳಗಳು ಸಾರ್ವಜನಿಕರಿಗೆ ಮುಚ್ಚಿರುತ್ತವೆ. ಸಿನೆಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಕ್ರೀಡಾಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಉದ್ಯಾನವ, ಕ್ಲಬ್, ಚಿತ್ರಮಂದಿರ, ಬಾರ್, ಸಭಾಂಗಣಗಳು ಸಂಪೂರ್ಣ ಮುಚ್ಚಿರುತ್ತವೆ.
ಕಚೇರಿಗಳಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ಬಂದಿಖಾನೆ, ನಾಗರಿಕ ರಕ್ಷಣೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ ಮುಂತಾದ ಕಚೇರಿಗಳು ತೆರೆದಿರುತ್ತವೆ. ವಿದ್ಯುತ್. ನೀರಾವರಿ, ನೈರ್ಮಲ್ಯದಂತ ಅಗತ್ಯ ಸೇವೆ ಗಳನ್ನು ಪೂರೈಸುವ ಹಾಗೂ ನಿರ್ವಹಿಸುವ ಕಚೇರಿಗಳೂ ತೆರೆದಿರುತ್ತವೆ. ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಗಳು, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ ಸೌಲಭ್ಯಗಳು, ಔಷಧಾಲಯ ಗಳು, ಜನ ಔಷಧಿ ಕೇಂದ್ರಗಳು, ರಕ್ತ ಸಂಗ್ರಹ ಕೇಂದ್ರಗಳು ತೆರೆದಿರುತ್ತವೆ.ಅನುಮತಿಸಲಾದ ಸಂಚಾರ ವನ್ನು ಹೊರತು ಪಡಿಸಿ ಉಳಿದಂತೆ ಸಾರ್ವಜನಿಕ ಅಥವಾ ಖಾಸಗಿ ಬಸ್ಸುಗಳ ಹಾಗೂ ಪ್ರಯಾಣಿಕರ ವಾಹನಗಳ ಸಂಚಾರವನ್ನು ನಿರ್ಬಂಧಿ ಸಲಾಗಿದೆ. ತುರ್ತು ಸಂದರ್ಭಗಳಲ್ಲಿ, ಅನುಮತಿ ಹೊಂದಿರುವ ವಾಹನಗಳಿಗೆ ಮಾತ್ರ ಜಿಲ್ಲೆಯೊಳಗೆ ಹಾಗೂ ಹೊರಜಿಲ್ಲೆಗಳಿಗೆ ಪ್ರಯಾಣಿಸಲು ಅನುಮತಿನೀಡಲಾಗಿದೆ. ಕೋವಿಡ್ನ ಸಮರ್ಪಕ ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶಗಳನ್ನು ಪಾಲಿಸದವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ವಿಕೋಪ ನಿರ್ವಹಣೆ ಕಾಯ್ದೆ 2005, ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗ ಕಾಯ್ದೆ 2020 ಹಾಗೂ ಐಪಿಸಿ ಸೆಕ್ಷನ್ 188ರ ಪ್ರಕಾರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅದೇಶದಲ್ಲಿ ತಿಳಿಸಿದ್ದಾರೆ.
ಸಾಧ್ಯ ಆದರೆ ಮಧ್ಯ ಮಾರಾಟ ನಿಲ್ಲಿಸಿ
Super dicition Sir hat’s of you Sir
Madhya beda adu dangerous
ಕಟ್ಟಡ ಕಾರ್ಮಿಕರ ಬಗ್ಗೆ ಏನೂ ಹೇಳಿಲ್ಲ!?
ವಾಹನ ದುರಸ್ತಿ ಗ್ಯಾರೇಜು ಗಳಿಗೆ ಅನುಕೂಲಕರ ಸಮಯವನ್ನು ಒಂದಿಷ್ಟು ನೀಡಬಹುದೇ?
ಎರಡನೆಯ ಲಸಿಕೆ ಬಗ್ಗೆ ನಮಗೆ ತಿಳಿಯುವುದು ಹೇಗೆ.?
ಮೊದಲ ಬಾರಿ ತೆಗೆದುಕೊಂಡಲ್ಲಿಯೆ ತೆಗೆದುಕೊಳ್ಳಬೇಕೆ .
ಮಾಡುದಾದ್ರೆ 1 ವಾರ ಕಂಪ್ಲೀಟ್ ಲಾಕ್ ಡೌನ್ ಮಾಡಿ ಅವಗಾದ್ರು ಕಂಟ್ರೋಲ್ ಬರ್ಬಹುದು ಅದನ್ನ ಬಿಟ್ಟು ಈ ತರ ಮಾಡಿದ್ರೆ ಯಾವುದೇ ಪ್ರಯೋಜನ ಇಲ್ಲಾ
ದಯವಿಟ್ಟು ಕಟ್ಟಡ ಕಾರ್ಮಿಕರ ಹೇಳಿ… ಗೊಂದಲದಲ್ಲಿ ಇದ್ದೀವಿ ನಾವಿಲ್ಲಿ.
Useless lockdown sir… Adre complete strict lockdown madi sir… Ee thara useless lockdown madidre yava prayojana kuda illa sir,.. citygalalli lockdown rules and regulations follow agutthe… But halligalalli kuda polocenavaru omme sariyagi roundup hodedu nodli sir… As usual vehicle movements ide… Bike, auto, cars, goods vehicle yella odaadutthe sir.. idannella drastiyalli ittu strict lockdown madi sir… Aadastu bega ee mahamaari dura agli… Kalakaliya vinanthi sir…
ಉಡುಪಿಯಲ್ಲಿ ಬೆಳಗ್ಗಿನ 6-10. ಗಂಟೆಯ ಅವಧಿಯಲ್ಲಿ ಉಡುಪಿ ಮಣಿಪಾಲ, ಕಾಪುವಿನಲ್ಲಿ ಅಗತ್ಯವಿಲ್ಲದ , ಅನಧಿಕೃತ ಗೂಡಂಗಡಿಗಳೂ ತೆರೆಯಲ್ಪಡುತ್ತಿವೆ. ಕೆಲಸದ ನೆಪದಲ್ಲಿ , ಪಂಚಾಯತ್ ಪಾಸ್ ನ ಹೆಸರಲ್ಲಿ ಜನರು ವಾಹನಗಳಲ್ಲಿ ತಿರುಗಾಡುತ್ತಿದ್ದಾರೆ. ಸಂಜೆ ಹಳ್ಳಿಗಳ ಒಳಗೆ ಅಕ್ರಮ ಚಿಲ್ಲರೆ ಮದ್ಯ ಮಾರಾಟ, ಅಕ್ರಮ ಮರಳುಗಾರಿಕೆ, ಬೇಟೆ, ಕೋಳಿ ಅಂಕ, ಜುಗಾರಿ ನಡೆಯುತ್ತಿದೆ.. ಈ ಬಗ್ಗೆ ಗಮನಹರಿಸಿ.
ಒಂದು ವಾರ ಕಂಪ್ಲೀಟ್ ಲಾಕ್ಡಡೌನ್ ಮಾಡಿ. ತಿರುಗಾಡುವವರು ತಿರುಗಾಡುತ್ತಾ ಇರುತ್ತಾರೆ.ಇದರಿಂದ ಕೊರೋನಾ ಕಡಿಮೆ ಆಗಲ್ಲ ಹಾಗೂ ನಮಗೂ ಕೆಲಸಕ್ಕೆ ಹೋಗಲು ಆಗುವುದಿಲ್ಲ.
Sir pls do lockdown like Hasana, Rayachur so cases will come down . Any how lockdown imposed till 7th June and if do strict lockdown and it will help for people reduction in covid cases
Function maduvavru function madtare … Police ge inform madidre .. police action thakolludilla …. Hana eddavrige dina evaga …
CSC Digital India and Seva sindhu ಕಚೇರಿಗಳನ್ನು ಓಪನ್ ಮಾಡಬಹುದಾ ಜನ ಸೇವಾಯ ಹಿತದಲ್ಲಿ
CSC Digital India and Seva sindhu ಕಚೇರಿಗಳನ್ನು ಓಪನ್ ಮಾಡಬಹುದಾ ಜನ ಸೇವಾಯ ಹಿತದಲ್ಲಿ. ಕೆಲವೊಂದು ಸೇವಾ ಸಿಂಧು ಕಚೇರಿಗಳು ಅರ್ಧ ಶಟರ್ ತೆರೆದು ಕಾರ್ಯನಿರ್ವಹಿಸುತ್ತಿದೆ ಎಂಬ ವದಂತಿ ಇದೆ. ಒಂದು ವೇಳೆ ಅನುಮತಿ ಇದ್ದರೆ ಹೇಗೆ ಆಫೀಶಿಯಲ್ ಆಗಿ ಅನುಮತಿ ಪಡೆಯಬೇಕು.
ದಯವಿಟ್ಟು ಕಟ್ಟಡ ಕರ್ಮಚಾರಿಗಳಿಗೆ ಅನುಮತಿ ಕೊಡಿ. ಜೂನ್ ೭ ರ ನಂತರ ಕೆಲಸ ಮಾಡಲಿಕ್ಕೆ ಕಷ್ಟ
ಬಟ್ಟೆ ಅಂಗಡಿ ಗೆ 1gante kodi.
Raincoat, ಕೊಡೆ tagolbekagutte. Rainy season shuru agra idea..
Pl.send ur battlion to Ambagilu Manipal road entrance.opp.sujata complex.coconut business is going on without any covid rules.he is doing business without any fear.someething fishy.
Kattada kamagarige,bhavi kelsakke avakasha Kodi,yakandre junege rainy season shuruaggatte.yesto kelsa half work agi nintide