ಉಡುಪಿ ಲಾಕ್ ಡೌನ್ ವಿಸ್ತರಣೆ – ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಇಲ್ಲಾ: ಡಿಸಿ

ಉಡುಪಿ ಮೇ.22 (ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಲಾಕ್ ಡೌನ್ ನಡುವೆ ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಪತ್ತೆಯಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಕೆಲವೊಂದು ಕಡೆಗಳಲ್ಲಿ ಅನಗತ್ಯವಾಗಿ ರಿಕ್ಷಾಗಳು ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಇಂತಹ ಪ್ರಕರಣಗಳು ಇನ್ನು ಮುಂದೆ ಕಂಡು ಬಂದಲ್ಲಿ ರಿಕ್ಷಾಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿರುವ ಅವರು,ರಿಕ್ಷಾಗಳನ್ನು ಕೇವಲ ಸಾರ್ವಜನಿಕರ  ವೈದ್ಯಕೀಯ ಸೇವೆಗಾಗಿ, ಆಸ್ಪತ್ರೆಗೆ ತೆರಳಲು ಮಾತ್ರ ಬಳಕೆ ಮಾಡಬಹುದು ಎಂದು ತಿಳಿಸಿದ್ದಾರೆ. ಇದರೊಂದಿಗೆ ದಿನಸಿ ಖರೀದಿಗೆ ಸದ್ಯ ಇರುವ ಸಮಯ ಸೂಕ್ತ ವಾಗಿದ್ದು, ಜಿಲ್ಲೆಯಲ್ಲಿ ಸುಗಮವಾಗಿ ವ್ಯವಹಾರ ನಡೆಯುತ್ತಾ ಇದೆ.

ಎರಡು ಅಥವಾ ಮೂರು ದಿನ ಮಾತ್ರ ಖರೀದಿಗೆ ಅವಕಾಶ ನೀಡುವುದರಿಂದ ಮತ್ತೆ ಗೊಂದಲ ಉಂಟಾಗುತ್ತದೆ. ಆದ್ದರಿಂದ ಸದ್ಯ ಇರುವ ನಿಯಮಾವಳಿಗಳನ್ನೇ ಮುಂದುವರಿಸುತ್ತೆವೆ. ಹಾಗೂ ದಿನಸಿ ಮತ್ತು ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಮನೆಯ ಹತ್ತಿರದ ಅಂಗಡಿಯನ್ನೇ ಬಳಸಿ. ದಿನಸಿ ಖರೀದಿಯ ನೆಪದಲ್ಲಿ ನಗರಕ್ಕೆ ಬಂದರೆ ವಾಹನಗಳನ್ನು ಸೀಜ್ ಮಾಡಲಾಗುತ್ತದೆ.

ನಗರಸಭಾ ವ್ಯಾಪ್ತಿಯಲ್ಲಿ ಕೂಡ ತಮ್ಮ ವಾರ್ಡ್ ಬಿಟ್ಟು ಮತ್ತೊಂದು ವಾರ್ಡ್ ನ ವ್ಯಾಪ್ತಿಯಲ್ಲಿ ದಿನಸಿ ಖರೀದಿ ನೆಪದಲ್ಲಿ ವಾಹನ ಸಂಚಾರ ಮಾಡಿಸಿದರೆ ಅಂತಹ ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಲಾಗುವುದು ಎಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ ಇದೇ ವೇಳೆ ಮಾತು ಮುಂದುವರೆಸಿದ ಅವರು, ಲಾಕ್‍ಡೌನ್ ಜೂನ್ 7 ರವರೆಗೆ ಮುಂದುವರಿದರೂ ಉಡುಪಿಯಲ್ಲಿ ಈಗಾಗಲೇ ಇರುವ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!