ಉಡುಪಿ: ಕೋವಿಡ್ 2ನೇ ಅಲೆ ಬಂದು ಲಾಕ್ ಡೌನ್ ಘೋಷಣೆ ಮಾಡಿರುವ ರಾಜ್ಯ ಬಿಜೆಪಿ ಸರಕಾರ ಪ್ರತಿ ಭಾರಿ ಕರಾವಳಿ ಭಾಗದಲ್ಲಿ ಮೀನುಗಾರರನ್ನು ಚುನಾವಣೆಯಲ್ಲಿ ತನ್ನ ಮತ ಬ್ಯಾಂಕ್ ನಂತೆ ಬಳಸಿ ಇವತ್ತಿನ ಕೋರೋನ ಅತಿ ಸಂಕಷ್ಟದ ಸಮಯದಲ್ಲಿ ಮರೆತುಬಿಟ್ಟಿರುವುದು ಅಕ್ಷಮ್ಯ ಅಪರಾಧವಗಿದೆಂದು ಉಡುಪಿ ನಗರಸಭಾ ಪ್ರತಿಪಕ್ಷದ ನಾಯಕರಾದ ರಮೇಶ್ ಕಾಂಚನ್ ದೂರಿದ್ದಾರೆ.
ರಾಜ್ಯದ ಎಲ್ಲಾ ಜನರ ಹಾಗೆ ಮೀನುಗಾರರೂ ಇವತ್ತು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದು ಈಗಾಗಲೇ ಮತ್ಸ್ಯ ಕ್ಷಾಮದಿಂದ ಬಾಳಳುತ್ತಿರುವ ಮೀನುಗರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳು ಹಾಗೂ ಮತ್ಸ್ಯಯೊಧ್ಯಮಗಳಿಗೆ ಇವತ್ತು ಲಾಕ್ಡೌನ್ ನಿಂದ ಗಾಯದ ಮೇಲೆ ಭರೆ ಎಳೆದಂತೆ ಆಗಿದೆ . ಕರಾವಳಿ ಭಾಗದ ಮೂರೂ ಸಂಸದರು ಬಿಜೆಪಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಅವಳಿ ಜಿಲ್ಲೆಯಲ್ಲಿ 13ರಲ್ಲಿ 12 ಬಿಜೆಪಿ ಶಾಸಕರನ್ನು ಗೆಲ್ಲಿಸುವಲ್ಲಿ ಮೀನುಗರಾರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಆದರೂ ಇಂತಹ ಕಠಿಣ ಸಂದರ್ಭದಲ್ಲಿ ಇವರಿಗೆ ಸಹಾಯ ಮಾಡದೆ ಬಿಜೆಪಿ ಸರಕಾರ ಮಹಾದ್ರೋಹ ಎಸಗಿದೆ .
ಕೇಂದ್ರಕ್ಕೆ 25 ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳಿಸಿದರೂ ರಾಜ್ಯಕ್ಕೆ ನಿರಂತರ ಮಲತಾಯಿ ಧೋರಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರ.ಮೊನ್ನೆ ಕರ್ನಾಟಕದ ಕರಾವಳಿ ಭಾಗದಲ್ಲಿ ಸಾಕಷ್ಟು ನಷ್ಟವನ್ನು ಉಂಟು ಮಾಡಿರುವಚಂಡಮಾರುತವು ಬೇರೆ ರಾಜ್ಯಗಳಲ್ಲೂ ಹಾನಿ ಮಾಡಿರುತ್ತೆ. ಆದರೆ ದೇಶದ ಪ್ರಧಾನಿಯವರು ಕೇವಲ ಗುಜರಾತಿಗೆ ಸಾವಿರ ಕೋಟಿ ಪರಿಹಾರ ಘೋಷಿಸಿರುವುದು ಕೇಧಕಾರವಾಗಿದೆ. ಕರಾವಳಿ ಭಾಗಕ್ಕೆ ಚಂಡಮಾರುತದಿಂದ ಆದ ನಷ್ಟವನ್ನು ವೀಕ್ಷಿಸಲು ಬಂದ ಸಚಿವರಾದ ಅಶೋಕ್ ರವರು ಜನರ ಕಷ್ಟವನ್ನು ಆಲಿಸದೇ ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿರುತ್ತಾರೆ.
ನಮ್ಮ ಜಿಲ್ಲೆಯ ಜನಪ್ರತಿನಿಧಿನಗಳು ಈ ತಾರತಮ್ಯವನ್ನು ಪ್ರಶ್ನಿಸದೆ ವಿಷಯಾoತಾರ ಮಾಡುತ್ತಿದ್ದು ಮುಂದಿನ ಚುನಾವಣೆಯಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ನಗರಸಭಾ ಪ್ರತಿಪಕ್ಷದ ನಾಯಕರಾದ ರಮೇಶ್ ಕಾಂಚನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. | | |