ಕೆಎಂಸಿ ಆಸ್ಪತ್ರೆ: ಹೆಚ್ಚುವರಿಯಾಗಿ ಮತ್ತೊಂದು ಆನ್-ಸೈಟ್ ಆಕ್ಸಿಜನ್ ಜನರೇಟರ್ ಅಳವಡಿಕೆ
ಮಣಿಪಾಲ ಮೇ22: ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ಮತ್ತು ಸಂಭವನೀಯ 3ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ 1500 ಎಲ್ಪಿಎಂ ಪ್ಲಾಂಟ್ ಆನ್-ಸೈಟ್ ಆಕ್ಸಿಜನ್ ಜನರೇಟರ್ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ, ಮಣಿಪಾಲದಲ್ಲಿ 500 ಎಲ್ಪಿಎಂ ಪ್ಲಾಂಟ್ ಆನ್-ಸೈಟ್ ಆಕ್ಸಿಜನ್ ಜನರೇಟರ್ ಸ್ಥಾಪಿಸುತ್ತಿದ್ದೇವೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ವೈದ್ಯಕೀಯ ಆಕ್ಸಿಜನ್ ಪೂರೈಸಲು ಸಾಧ್ಯವಾಗಲಿದೆ.
ಪ್ರಸುತ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಭಾರತದಾದ್ಯಂತ ಅನುಭವಿಸಲಾಗುತ್ತಿದೆ. ಇದನ್ನು ಪರಿಗಣಿಸಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ಪ್ರಸ್ತುತ ಸೌಲಭ್ಯವನ್ನು ಮರುಪೂರಣದ ಲಾಜಿಸ್ಟಿಕ್ ವ್ಯವಸ್ಥೆಯನ್ನು ಪರೀಕ್ಷಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಕೆಎಂಸಿ ಆಸ್ಪತ್ರೆ ಅತ್ತಾವರ, ಮಂಗಳೂರು ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರಿಂದ, ಬೇಡಿಕೆಯನ್ನು ಆದ್ಯತೆಯ ಮೇಲೆ ನೋಡಿ ಕೊಳ್ಳುವ ಅವಶ್ಯಕತೆ ಇತ್ತು ಎಂದು ಬೋಧನಾ ಆಸ್ಪತ್ರೆಗಳ ಪ್ರಾದೇಶಿಕ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತನ ಅವರು ತಿಳಿಸಿದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯು 2032 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಸಣ್ಣ ಶಸ್ತ್ರ ಚಿಕಿತ್ಸಾ ಕೊಠಡಿಗಳು ಸೇರಿದಂತೆ 26 ಶಸ್ತ್ರಚಿಕಿತ್ಸಾ ಕೊಠಡಿಗಳು, 250 ಐಸಿಯು ಹಾಸಿಗೆಗಳು , 900 ಇತರ ಹಾಸಿಗೆಗಳಿಗೆ ಮತ್ತು ಎರಡು ಅಂಗ ಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಸುತ್ತಿದೆ. ಕೋವಿಡ್ ಪ್ರಕರಣಗಳಲ್ಲಿ ಪ್ರಸ್ತುತ ಹಠಾತ್ ಹೆಚ್ಚಳದಿಂದಾಗಿ, ಆಮ್ಲಜನಕದ ದೈನಂದಿನ ಬಳಕೆ 2200 ಲೀಟರ್ ಗೆ ಏರಿಕೆಯಾಗಿದೆ . ಇಲ್ಲದಿದ್ದರೆ ಸಾಮಾನ್ಯ ದಿನಗಳಲ್ಲಿ ದೈನಂದಿನ ಬಳಕೆ 1600 ಲೀಟರ್ ಆಗಿರುತ್ತದೆ. ಆಸ್ಪತ್ರೆಯು 20,000 ಲೀಟರ್ ಗಳಷ್ಟು ವೈದ್ಯಕೀಯ ಆಮ್ಲಜನಕದ ಶೇಖರಣಾ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ವಾರಕ್ಕೆ ಎರಡು ಬಾರಿ ಬಳ್ಳಾರಿಯ ಕ್ರಯೋಜೆನಿಕ್ ಟ್ಯಾಂಕರ್ (ಸುಮಾರು 380 ಕಿ.ಮೀ.) ನಿಂದ ತರಿಸಲಾಗುತ್ತದೆ. ಎಲ್ಎಂಒ ಟ್ಯಾಂಕ್ ನ ಒತ್ತಡದ ಕುಸಿತದಿಂದಾಗಿ ಕೇವಲ 15,400 ಲೀಟರ್ ಗಳನ್ನು ಮಾತ್ರ ಬಳಸಬಹುದಾಗಿದೆ. ಇದು ಏಳು ದಿನಗಳ ಅವಶ್ಯಕತೆಗಳನ್ನು ಪೂರೈಸುತ್ತದೆ. ಅಲ್ಲದೇ ಮೀಸಲು ಆಗಿ 7Cu Mtr ಸಾಮರ್ಥ್ಯದ 121 ಜಂಬೊ ಸಿಲಿಂಡರ್ ಗಳಿವೆ. ಇವುಗಳನ್ನು ಆಸ್ಪತ್ರೆಯಲ್ಲಿ ಎರಡು ಸ್ಥಳಗಳಲ್ಲಿ ಸಂಗ್ರಹಿಸಲಾಗಿದೆ. ಇವುಗಳನ್ನು ಹತ್ತಿರದ ಸ್ಥಳಗಳಿಂದ (ಮುಲ್ಕಿ ಮತ್ತು ಕಾಪು ) ಪುನಃ ತುಂಬಿಸಲಾಗುತ್ತಿದೆ ಎಂದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ತಿಳಿಸಿದರು.
ಮಂಗಳೂರಿನ ಕೆಎಂಸಿ ಆಸ್ಪತ್ರೆ, ಅತ್ತಾವರ 610 ಹಾಸಿಗೆಗಳ ಆಸ್ಪತ್ರೆ ಯಾಗಿದ್ದು, ಸಣ್ಣ ಶಸ್ತ್ರ ಚಿಕಿತ್ಸಾ ಕೊಠಡಿಗಳು ಸೇರಿದಂತೆ 10 ಶಸ್ತ್ರ ಚಿಕಿತ್ಸಾ ಕೊಠಡಿಗಳು , 44 ಐಸಿಯು ಹಾಸಿಗೆಗಳು, 113 ಇತರ ಹಾಸಿಗೆಗಳಿಗೆ ಮತ್ತು ಎರಡು ಅಂಗ ಸಂಸ್ಥೆಗಳಿಗೆ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ. ಪ್ರಸ್ತುತ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ, ದಿನನಿತ್ಯದ ಆಮ್ಲಜನಕದ ಬಳಕೆ 600 ಲೀಟರ್ ಅವಶ್ಯವಿದೆ. , ಇಲ್ಲದಿದ್ದರೆ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 300 ಲೀಟರ್ ಆಮ್ಲಜನಕ ಸಾಕಾಗುತ್ತದೆ. . ಆಸ್ಪತ್ರೆಯು 6000 ಲೀಟರ್ ಗಳ ಎಲ್ಎಂಒ ಶೇಖರಣಾ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ, ಇದನ್ನು ವಾರಕ್ಕೆ ಎರಡು ಬಾರಿ ಕ್ರಯೋಜೆನಿಕ್ ಟ್ಯಾಂಕರ್ ಮರುಪೂರಣಗೊಳಿಸುತ್ತಿವೆ . ಅಲ್ಲದೇ 42 ಜಂಬೋ ಸಿಲಿಂಡರ್ ಗಳ ಮೀಸಲು ವ್ಯವಸ್ಥೆ ಇದೆ ಎಂದು ಕೆ ಎಂ ಸಿ ಅತ್ತಾವರದ ವೈದ್ಯಕೀಯ ಅಧೀಕ್ಷಕರಾದ ಡಾ. ಜಾನ್ ಟಿ ರಾಮ್ ಪುರೆ ತಿಳಿಸಿದರು.
1500 ಎಲ್ ಪಿ ಎಂ ಸ್ಥಾವರ ಸ್ಥಾಪನೆಗೆ 400 ಚದರ ಅಡಿ ಜಾಗದ ಅಗತ್ಯವಿರುತ್ತದೆ ಮತ್ತು ಇದಕ್ಕಾಗಿ ಅಸ್ತಿತ್ವದಲ್ಲಿರುವ ಸಿಲಿಂಡರ್ ಶೇಖರಣಾ ಪ್ರದೇಶದ ಪಕ್ಕದಲ್ಲಿರುವ ಸೂಕ್ತ ಪ್ರದೇಶವನ್ನು ಗುರುತಿಸಲಾಗಿದೆ. ಪ್ಲಾಂಟ್ ವೆಚ್ಚ ಮತ್ತು ಸಂಬಂಧಿತ ಸಿವಿಲ್ ವರ್ಕ್ಸ್, ಎಲೆಕ್ಟ್ರಿಕಲ್ ಪ್ಯಾನಲ್ / ವರ್ಕ್ಸ್, ಇತರೆ ವೆಚ್ಚಗಳು ಸೇರಿದಂತೆ ಒಟ್ಟು ವೆಚ್ಚ 2.5 ಕೋಟಿ ರೂಪಾಯಿ ಆಗಲಿದೆ. 500 ಎಲ್ ಪಿ ಎಂ ಸ್ಥಾವರ ಸ್ಥಾಪನೆಗೆ 100 ಚದರ ಅಡಿ ವಿಸ್ತೀರ್ಣ ಬೇಕಾಗುತ್ತದೆ. ಪ್ಲಾಂಟ್ ವೆಚ್ಚ ಮತ್ತು ಸಂಬಂಧಿತ ಸಿವಿಲ್ ವರ್ಕ್ಸ್, ಎಲೆಕ್ಟ್ರಿಕಲ್ ಪ್ಯಾನಲ್ / ವರ್ಕ್ಸ್, ಇತರೆ ವೆಚ್ಚಗಳು ಸೇರಿದಂತೆ ಒಟ್ಟು ವೆಚ್ಚಒಟ್ಟು ವೆಚ್ಚ 1.10 ಕೋಟಿ ರೂ. ಆಗಲಿದೆ. ಈ ಪ್ರಕ್ರಿಯೆಯು 4-5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಮಾಹೆ , ಮಣಿಪಾಲವು ಯಾವಾಗಲೂ ಮೂಲಸೌಕರ್ಯಗಳನ್ನು ರಚಿಸುವಲ್ಲಿ ಮತ್ತು ಸಮಾಜಕ್ಕೆ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ . ಈ ನಿಟ್ಟಿನಲ್ಲಿ, ಈ ಸಾಂಕ್ರಾಮಿಕ ಸಮಯದಲ್ಲಿ ಸಹ ಉತ್ತಮವಾದ ಜನರಿಗೆ ಆರೈಕೆಯನ್ನು ಒದಗಿಸಲು ಮಾಹೆ ತನ್ನದೇ ಆದ ಆಮ್ಲಜನಕ ಜನರೇಟರ್ ಅನ್ನು ಸ್ಥಾಪಿಸುವಲ್ಲಿ ಮುಂದಾಗಿದೆ. ಇದು ಸಾರ್ವಜನಿಕರಿಗೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ .