ಉಡುಪಿ: ಮುಖ್ಯಮಂತ್ರಿಗಳ ಖಡಕ್ ಸೂಚನೆ, ಅನಗತ್ಯವಾಗಿ ಓಡಾಡುವ ವಾಹನ ಸೀಜ್- ಜಿಲ್ಲಾಧಿಕಾರಿ
ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯಲ್ಲಿ ಕೋವಿಡ್ ಎರಡನೆಯ ಅಲೆ ನಿಯಂತ್ರಣ ಕುರಿತಂತೆ, ಮುಖ್ಯಮಂತ್ರಿಗಳ ಸೂಚನೆಯಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
ಅನಗತ್ಯವಾಗಿ ಓಡಾಡುವ ವಾಹನಗಳನ್ನು ಸೀಜ್ ಮಾಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವು ನೋವು ಹೆಚ್ಚುತ್ತಿರುವ ಹಿನ್ನೆಲೆ ಲಾಕ್ ಡೌನ್ ಅನ್ನು ಮತ್ತೆ 14 ದಿನ ವಿಸ್ತರಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅದರಂತೆ ಮೇ 24 ರಿಂದ ಜೂನ್ 7ರ ವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಸದ್ಯ ಜಾರಿಯಲ್ಲಿರುವ ಮಾರ್ಗಸೂಚಿಯೇ ಮುಂದುವರಿಯಲಿದ್ದು ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಜನರಿಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿರಲಿದೆ. ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಕೊರೋನಾ ನಿಯಮಗಳನ್ನು ಕಟ್ಟುನಿಟ್ತಾಗಿ ಪಾಲಿಸಬೇಕೆಂದು ಮುಖ್ಯಮಂತ್ರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಲಾಕ್ ಡೌನ್ ಘೋಷಣೆಯೊಂದೇ ಪರಿಹಾರವಲ್ಲ. ಕೊರೊನಾದೊಂದಿಗೆ ಜನರ ಜೀವನದ ಆಧಾರವೂ ಅತಿ ಮುಖ್ಯ. ಜನರಿಗೆ ಯಾವುದೇ ನೆರವು ನೀಡುವ ಪರಿಸ್ಥಿತಿ ಸರಕಾರಗಳಿಗೆ ಇಲ್ಲದಿರುವಾಗ ಅವರನ್ನು ಬದುಕಿಕೊಳ್ಳಲಾದರೂ ಬಿಡುವುದು ಒಳ್ಳೇದು. ಜನ ತಮ್ಮಿಂದ ತಾನಾಗಿಯೇ ಸಾಯಲು ಬಯಸುವುದಿಲ್ಲ, ಹಾಗಂತ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ಮುಂದುವರಿಯಬೇಕು, ಅಷ್ಟೇ.