ಬ್ರಹ್ಮಾವರ: ಬೈಕ್ ನಿಂದ ಬಿದ್ದು ಮಹಿಳೆ ಮೃತ್ಯು
ಬ್ರಹ್ಮಾವರ ಮೇ.21(ಉಡುಪಿ ಟೈಮ್ಸ್ ವರದಿ): ಬೈಕ್ ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಲಲಿತಾ (46) ಮೃತಪಟ್ಟವರು. ಈ ಬಗ್ಗೆ ಮನೋಜ್ ಕುಮಾರ್ ಟಿ. ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ, ಮೇ.20 ರಂದು ಬೆಳಿಗ್ಗೆ ಇವರು ತಮ್ಮ ಬೈಕ್ ನಲ್ಲಿ ಹೋಗುತ್ತಿರುವಾಗ ಪ್ರಸನ್ನ ಎಂಬುವವರು ಬೈಕ್ ನಲ್ಲಿ ತಮ್ಮ ತಾಯಿ ಲಲಿತಾ ಅವರನ್ನು ಸಹಸವಾರಿಣಿಯಾಗಿ ಕುಳ್ಳಿರಿಸಿಕೊಂಡು ಮಟಪಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದಿದ್ದು ಚಾಂತಾರು ಗ್ರಾಮದ ಚಂದ್ರಕಾಂತ ಎಂಬವರ ಮನೆಯ ಸಮೀಪ ಲಲಿತ ಅವರು ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಲಲಿತಾ ರವರು ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನ ಕರೆದುಕೊಂಡು ಬ್ರಹ್ಮಾವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ಪರೀಕ್ಷಿಸಿದ ವೈದ್ಯರು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದು ವೈದ್ಯರ ಸಲಹೆ ಮೇರೆಗೆ ಲಲಿತಾ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಮಧ್ಯಾಹ್ನದ ವೇಳೆಗೆ ಅವರು ತೀವ್ರ ಅಸ್ವಸ್ಥ ಗೊಂಡಿದ್ದು, ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಪರೀಕ್ಷಿಸಿದ ವೈಧ್ಯರು ಲಲಿತಾ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.