ಹೆಬ್ರಿ: ಅಕ್ರಮ ಮದ್ಯ ಮಾರಾಟ-ಓರ್ವನ ಬಂಧನ
ಹೆಬ್ರಿ ಮೇ.21(ಉಡುಪಿ ಟೈಮ್ಸ್ ವರದಿ): ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಶರತ್ ಶೆಟ್ಟಿ ಬಂಧಿತ ಆರೋಪಿ. ಮೇ.20ರಂದು, ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಹೇಶ.ಟಿ.ಎಂ ಅವರು ಇತರ ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯ ದಲ್ಲಿದ್ದಾಗ, ವರಂಗ ಗ್ರಾಮದ ಮುನಿಯಾಲು ಎಂಬಲ್ಲಿ ವ್ಯಕ್ತಿಯೊಬ್ಬ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅವರು ಕಾರ್ಯಾಚರಣೆ ನಡೆಸಿ ಸ್ಥಳಕ್ಕೆ ತೆರಳಿ ನೋಡಿದಾಗ ವ್ಯಕ್ತಿಯೊಬ್ಬ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಬಂದ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡುವುದು ಕಂಡು ಬಂದಿದೆ.
ಸ್ಥಳಕ್ಕೆ ದಾಳಿ ಮಾಡಿ ಆರೊಪಿತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ, ಪ್ಲಾಸ್ಟಿಕ್ ಚೀಲದಲ್ಲಿದಲ್ಲಿದ್ದ 1,696 ರೂ. ಮೌಲ್ಯದ ಮದ್ಯ ತುಂಬಿದ್ದ 180 ಎಂ.ಎಲ್ ನ 18 ಪ್ಯಾಕೆಟ್, ಮದ್ಯ ಮಾರಾಟದಿಂದ ಸಂಗ್ರಹವಾದ 410 ರೂ. ನಗದು ಮತ್ತು ಬಿಳಿ ಬಣ್ಣದ 1 ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.