ಈ ಬಾರಿಯಾದರೂ ಎಲ್ಲಾ ಟ್ಯಾಕ್ಸಿ ಚಾಲಕರಿಗೆ ಪರಿಹಾರ ಹಣ ನೀಡಿ- ರಮೇಶ್ ಕೋಟ್ಯಾನ್
ಉಡುಪಿ ಮೇ.21(ಉಡುಪಿ ಟೈಮ್ಸ್ ವರದಿ): ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿ ಕೋವಿಡ್ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಅನೇಕ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಲಾಗಿದೆ.
ಆದರೆ ವಿಪರ್ಯಾಸ ಅಂದರೆ, ಆಟೋ ಟ್ಯಾಕ್ಸಿ, ಮ್ಯಾಕ್ಸಿ ಚಾಲಕ, ಮಾಲಕರಿಗೆ ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ಕೆಲವು ಫಲಾನುಭವಿಗಳಿಗೆ ಮಾತ್ರ ಲಭಿಸಿದೆ. ಈ ಬಾರಿ ಆಟೋ ಟ್ಯಾಕ್ಸಿ, ಮ್ಯಾಕ್ಸಿ ಚಾಲಕ, ಮಾಲಕರಿಗೆ ತಲಾ 3000 ರೂ.ಗಳಂತೆ ಪರಿಹಾರಧನ ಘೋಷಿಸಲಾಗಿದೆ. ಆದರೆ ಕಳೆದ ಬಾರಿ 5,000 ರೂ. ಮೊತ್ತ ಘೋಷಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿರುವ 2,800 ಮಂದಿ ಫಲಾನುಭವಿಗಳ ಪೈಕಿ 150 ರಿಂದ 200 ಮಂದಿ (ಶೇ.30) ಮಾತ್ರ ಈ ಪ್ಯಾಕೇಜ್ ನ ಸೌಲಭ್ಯ ಪಡೆದಿದ್ದರು.
ಕಳೆದ ವರ್ಷಸೂಕ್ತ ದಾಖಲೆಗಳು ಇದ್ದರೂ ಹೆಚ್ಚಿನ ಮಂದಿಗೆ ಪ್ಯಾಕೇಜ್ ಮೊತ್ತ ಸಿಕ್ಕಿರಲಿಲ್ಲ. ಈ ಬಾರಿ ಎಲ್ಲಾ ಫಲಾನುಭವಿ ಗಳಿಗೂ ಪ್ಯಾಕೇಜ್ ಲಭಿಸಬೇಕು ಎಂದು ಜಿಲ್ಲಾ ಟ್ಯಾಕ್ಸಿಮೆನ್, ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಆಗ್ರಹಿಸಿದ್ದಾರೆ.
KRISHNANANADA NAGAR 2 ND MAIN ROAD , 114 BANGALORE BADGE NO 2165 KAR
Car driver
3000