ಟೆಲಿಆರೋಗ್ಯ ಆಪ್ ಅನಾವರಣ-ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು, ಮಾನಸಿಕ ಆರೋಗ್ಯ ಬಿಕ್ಕಟ್ಟು ಸಹಾಯವಾಣಿ

ಬೆಂಗಳೂರು : ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಹಾಗೂ ಜನಸಂದಣಿ ತಪ್ಪಿಸುವ ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸದುದ್ದೇಶ ಮತ್ತು ಮಾನಸಿಕ ಆರೋಗ್ಯ ಬಿಕ್ಕಟ್ಟಿಗೆ ಸಹಾಯವಾಣಿ ಒದಗಿಸುವ ಸಲುವಾಗಿ ಟೆಲಿಆರೋಗ್ಯ ( Telearogya ) ಎಂಬ ಮೊಬೈಲ್ app ಅನ್ನು ಹೊರತರಲಾಗಿದೆ.ರಾಜಾಜಿನಗರದ ಸ್ಪಂದನ ಆಸ್ಪತ್ರೆಯು, ಚಿರಾಯು ಟೆಕ್ ಹಾಗೂ ಆಗುಮೆಂಟ ಹೆಲ್ತ್ ನ ಸಹಯೋಗದೊಂದಿಗೆ ಆಯೋಜಿಸಿದ ವರ್ಚುವಲ್ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟೆಲಿಆರೋಗ್ಯ app ಅನ್ನು ಅನಾವರಣಗೊಳಿಸಿದರು..

ಆದಿಚುಂಚಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಮಾನಸಿಕ ಆರೋಗ್ಯ ಬಿಕ್ಕಟ್ಟು ಸಹಾಯ ವಾಣಿಯನ್ನು ಅನಾವರಣ ಗೊಳಿಸಿದರು. ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್. ಹರ್ಷ ವರ್ಚುವಲ್ ವೇದಿಕೆಯಲ್ಲಿದ್ದರು. ‘ಕರೊನಾ ಸೋಂಕು ಮಹಾಮಾರಿ ಜತೆಗಿನ ಹೋರಾಟದ ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಜನಸಂದಣಿ ಕಡಿಮೆಗೊಳಿಸಿ, ಪ್ರತಿಯೊಬ್ಬ ರೋಗಿಗೂ ವ್ಯೆದ್ಯರ ಸಂದರ್ಶನದ ನಿಖರ ಸಮಯ, ಕ್ಷಣ ಕ್ಷಣದ ಮಾಹಿತಿ ನೀಡುವ ಮೂಲಕ ನಿಜವಾದ ಸಾಮಾಜಿಕ ಅಂತರವನ್ನು ಕಾಪಾಡಿ, ವೈದ್ಯರ ಹಾಗೂ ಇತರ ರೋಗಿಗಳ ಸುರಕ್ಷತೆಯನ್ನು ಕಾಪಾಡಲಿಕ್ಕೆ ಟೆಲಿ ಆರೋಗ್ಯ app ಸಹಕಾರಿಯಾಗಲಿದೆ. ಹಾಗೂ ಮಾನಸಿಕ ಆರೋಗ್ಯ ಬಿಕ್ಕಟ್ಟಿಗೆ ಬಿಡುಗಡೆ ಮಾಡಿದ ಸಹಾಯವಾಣಿ ರೋಗಿಗಳ ಸಹಾಯಕ್ಕೆ ಲಭ್ಯವಿದ್ದು ಸಾರ್ವಜನಿಕರು ಇದೆಲ್ಲದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ಎಂದು ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕೋವಿಡ್-19 ಮೊದಲನೇ ಅಲೆ ಸಂದರ್ಭ ಬಹಳಷ್ಟು ರೋಗಿಗಳಿಗೆ ವೈದ್ಯರೊಂದಿಗೆ ವೀಡಿಯೋ ಸಂದರ್ಶನದ ಪ್ರಯೋಜನವನ್ನು ಟೆಲಿಆರೋಗ್ಯ app ದೊರಕಿಸಿಕೊಟ್ಟಿದೆ. 20ಕ್ಕೂ ಹೆಚ್ಚು ನಗರಗಳಲ್ಲಿ 400ಕ್ಕೂ ಅಧಿಕ ವೈದ್ಯರ ಸಂಪರ್ಕವನ್ನು ಈ app ಕಲ್ಪಿಸಿಕೊಡಲಿದೆ. ಹೆಚ್ಚಿನ ಮಾಹಿತಿಗಾಗಿ https://telearogya.com ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!