ಲಸಿಕೆ ಒದಗಿಸಲು ಕಿಂಚಿತ್ತೂ ಶ್ರಮ ವಹಿಸಿದ ಸಂಸದೆ- ಕ್ರೈಸ್ತ ಧರ್ಮದ ಮೇಲೆ ಗೂಬೆ ಕೂರಿಸುವ ಯತ್ನ: ರಮೀಜ್ ಹುಸೇನ್
ಚರ್ಚ್ ಗಳಲ್ಲಿ ಲಸಿಕೆಯ ವಿರುದ್ಧ ಪ್ರಚಾರ ಮಾಡುತಿದ್ದಾರೆ ಎಂದ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಕ್ರೈಸ್ತ ಧರ್ಮದ ಮೇಲೆ ಗೊಬೆ ಕುರಿಸುವ ಕೆಲಸ ಮಾಡುತಿರುವುದು ಖಂಡನೀಯ. ಕೊರೂನಾ ನಿಭಾಯಿಸವಲ್ಲಿ ವಿಫಲತೆ ಹೊಂದಿರುವ ಬಿಜೆಪಿ ಸರಕಾರದ ವಿರುದ್ದ ಜನ ಅಕ್ರೋಶ ಭರಿತರಾಗಿದ್ದು. ಈ ವ್ಯೆಫಲ್ಯವನ್ನು ಮರೆಮಾಚಲು ಇಂತಹ ಬಾಲಿಶ ಹೇಳಿಕೆಯನ್ನು ನೀಡಿ ಜನರ ಆಕ್ರೋಶವನ್ನು ಬೇರೇಡೆಗೆ ತಿರುಗಿಸುವ ಪ್ರಯತ್ನವನ್ನು ಸಂಸದೆಯವರು ಮಾಡುತಿದ್ದಾರೆಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಭಾಗದಲ್ಲಿ ತೌಖ್ತೇ ಚಂಡಮಾರುತದಿಂದ ಮನೆ, ರಸ್ತೆಗಳು ಅಪಾರ ಹಾನಿಯಾಗಿ ಬಹಳಷ್ಟು ನಷ್ಟ ಸಂಭವಿಸಿದ್ದು ಮೀನುಗಾರಿಕೆ ಇಲ್ಲದೇ ಮೀನುಗಾರರ ಬದುಕು ಹತಾಶೆಗೊಂಡಿದೆ. ಕೊರೂನಾ ಲೌಕ್ ಡಾನ್ ಸಂಕಷ್ಟದಿಂದ ಬಳಲುತ್ತಿರುವ ಇಂತಹ ಸಂದರ್ಭದಲ್ಲಿ ಚಂಡಮಾರುತದ ಹೊಡಿತದಿಂದ ಅಪಾರ ನಷ್ಟ ಸಂಭವಿಸಿ ಜನತೆ ಆರ್ಥಿಕ ಸಂಕಷ್ಟದಿಂದ ಬಳಲುತಿದ್ದಾರೆ. ಇದರ ಬಗ್ಗೆ ಕೇಂದ್ರ ಸರಕಾರದಿಂದ ಪರಿಹಾರ ಒದಗಿಸುವ ಬಗ್ಗೆ ಕಿಂಚಿತ್ತೂ ಪ್ರಯತ್ನ ಪಡದ ಸಂಸದೆಯವರು ಇಂತಹ ಧರ್ಮವನ್ನು ನಿಂದಿಸುವ ಕೆಲಸ ಮಾಡುತ್ತಿರುವುದು ನಾಚಿಕೇಡು.
ಪ್ರಧಾನ ಮಂತ್ರಿಗಳು ಗುಜರಾತ್ ನಲ್ಲಿ ತೌಖ್ತೇ ಚಂಡಮಾರುತ ಹೊಡೆತದ ನಷ್ಟ ಪರಿಹಾರವಾಗಿ 1000 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಜನತೆ ಏನು ಪಾಪ ಮಾಡಿದ್ದಾರೆ. ಈ ತಾರತಮ್ಯವೇಕೆ ? ಈ ಬಗ್ಗೆ ಯಾಕೆ ಸಂಸದರು ಮಾತನಾಡುದಿಲ್ಲ..? ತಮ್ಮ ವ್ಯೆಫಲ್ಯಗಳನ್ನು ಮುಚ್ಚು ಮರೆ ಮಾಡಲು ಕಾಂಗ್ರೆಸ್ ನ ಮೇಲೆ ಟೂಲ್ ಕಿಟ್ ಪ್ರಕರಣದ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತಿದೆ ಬಿಜೆಪಿ ಸರಕಾರ. ಇಂತಹ ನೀಚ ಹೇಳಿಕೆಯನ್ನು ಕೊಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಮತ್ತು ರಾಜ್ಯದ ಅಭಿವೃದ್ದಿಯ ಬಗ್ಗೆ ಗಮನ ಹರಿಸಲಿ.
ಸಂಸದರು ತಮ್ಮ ಜವಾಬ್ದಾರಿಯನ್ನು ಅರಿತು ಕೇಂದ್ರ ಸರಕಾರದಿಂದ ಅನುದಾನ ತರಿಸಿ ತನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕಾದ ಸಂಸದೆ, ಜಾತಿ ಧರ್ಮವನ್ನು ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಶಾಂತಿ ಹಾಗು ಸಹಬಾಳ್ವೆ ಜೀವನಕ್ಕೆ ಹೆಚ್ಚಿನ ಒತ್ತು ನೀಡಿ ಜೀವನ ನಡೆಸುವ ಕ್ರಿಶ್ಚಿಯನ್ ಧರ್ಮದವರಲ್ಲಿ ಸಂಸದೆ ಕ್ಷಮೆಯಾಚಿಸಿ ಬೇಕು ಎಂದು ಕಾಪು ಬ್ಲ್ಯಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಆಗ್ರಹಿಸಿದ್ದಾರೆ.