ಉಡುಪಿ: ಜಿಲ್ಲೆಯ ಓರ್ವ ರೋಗಿಯಲ್ಲಿ ಕಪ್ಪು ಶಿಲೀಂದ್ರ ಪತ್ತೆ ?

ಉಡುಪಿ ಮೇ.21(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾಗಿರುವ ಬೆನ್ನಲ್ಲೇ ರೋಗಿಯೊಬ್ಬರಲ್ಲಿ ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿರುವ ಸುದ್ದಿಯೊಂದು ವರದಿಯಾಗಿದೆ.

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಉಡುಪಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ. ಕೋವಿಡ್‌ ಪಾಸಿಟಿವ್ ಬಂದು, ಮಧುಮೇಹ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕಪ್ಪು ಶಿಲೀಂದ್ರ(ಮ್ಯೂಕರ್ ಮೈಕೋಸಿಸ್)ಸೋಂಕು ಉಡುಪಿ ಜಿಲ್ಲೆಯ ಒಬ್ಬ ರೋಗಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಅಲ್ಲದೆ ಈಗಾಗಲೇ ಹೊರಜಿಲ್ಲೆಗಳಿಂದ ಬಂದ 7 ಮಂದಿಯಲ್ಲಿ ಕಪ್ಪು ಶಿಲೀಂದ್ರ ಸೋಂಕು ಕಂಡುಬಂದಿದ್ದು, ಇವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತಿದ್ದಾರೆ. ಈ ಏಳು ಮಂದಿ ಪೈಕಿ 6 ಮಂದಿಗೆ ಶಸ್ತ್ರಚಿಕಿತ್ಸೆಯಾಗಿದ್ದು, ಎಲ್ಲರೂ ಚೇತರಿಸಿ ಕೊಳ್ಳುತಿದ್ದಾರೆ ಎಂದು ತಿಳಿದುಬಂದಿದೆ

Leave a Reply

Your email address will not be published. Required fields are marked *

error: Content is protected !!