ಮೀನುಗಾರಿಕೆಗೆ ತೆರಳಲು ತಯಾರಿ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತ್ಯು
ಮಲ್ಪೆ ಮೇ.21(ಉಡುಪಿ ಟೈಮ್ಸ್ ವರದಿ): ಮೀನುಗಾರಿಕೆಗೆ ತೆರಳಲು ತಯಾರಿ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.
ರಮೇಶ ನಾಗಪ್ಪ ಹರಿಕಾಂತ (41)ಮೃತಪಟ್ಟವರು.ಇವರು ಸೀವಿಂಗ್ಸ್ ಬೋಟಿನಲ್ಲಿ ಕಲಾಸಿಯಾಗಿ ಕೆಲಸಮಾಡಿಕೊಂಡಿದ್ದು,ಮೇ.19 ರಂದು ಇವರು ಇತರ ಮೀನುಗಾರರಾದ ರಾಘು, ಭಾಸ್ಕರ, ಆನಂದ ಮತ್ತು ಶೇಖರ ಎಂಬವರ ಜೊತೆಗೆ ಮೀನುಗಾರಿಕೆ ಹೊರಡುವ ಸಮಯ ಮದ್ಯಾಹ್ನ ಬೋಟಿನಲ್ಲಿ ಬಲೆಯನ್ನು ರೆಡಿ ಮಾಡುತ್ತಿದ್ದ ಸಮಯ ಆಯತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು.
ಈ ವಿಷಯವನ್ನು ಬೋಟಿನ ತಾಂಡೇಲ ವಿನಾಯಕ ಎಂಬವರು ರಮೇಶ ನಾಗಪ್ಪ ಹರಿಕಾಂತ ಅವರ ಅಣ್ಣ ಪರಮೇಶ್ವರ ಅವರಿಗೆ ಕರೆ ಮಾಡಿ ತಿಳಿಸಿದರು, ಪರಮೇಶ್ವರ ಅವರು ಮಲ್ಪೆ ಬಂದರಿಗೆ ಬಂದು ಈಜುಗಾರ ಈಶ್ವರನನ್ನು ಕರೆಸಿ ನೀರಿನಲ್ಲಿ ಹುಡುಕಾಡಿಸಿದರೂ ಪತ್ತೆಯಾಗಿರಲಿಲ್ಲ. ಬಳಿಕ ಮೇ. 20 ರಂದು ಬೆಳಿಗ್ಗೆ ಮಲ್ಪೆಯ ಸೀವಾಕ್ ಬಳಿ ಮೃತದೇಹ ತೇಲುತ್ತಿರುವುದು ಕಂಡು ಬಂದಿದ್ದು,ಈ ಬಗ್ಗೆ ಪರಮೇಶ್ವರ ಅವರು ಬಂದು ನೋಡಿದಾಗ ಅವರ ತಮ್ಮ ಮೃತಪಟ್ಟಿರುವುದು ತಿಳಿದು ಬಂದಿದೆ. ಅದರಂತೆ ರಮೇಶ ನಾಗಪ್ಪ ಹರಿಕಾಂತ ಅವರು ಬೋಟಿನಲ್ಲಿ ಬಲೆ ಎಳೆಯುವಾಗ ಆಯತಪ್ಪಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.