ರೋಗ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪರೀಕ್ಷೆಗೆ ಸೂಚಿಸಿ: ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚನೆ
ಉಡುಪಿ ಮೇ 20(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು,ಕೋವಿಡ್ ಸೋಂಕಿತರು ಕೊನೆಯಕ್ಷಣದಲ್ಲಿಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾರ್ವಜನಿಕರು ಪ್ರಾರಂಭದಲ್ಲಿ ಸ್ಥಳೀಯ ಕ್ಲಿನಿಕ್/ಡಾಕ್ಟರ್ ಹತ್ತಿರ ಹೋಗಿ ಕೋವಿಡ್ ಸೋಂಕಿನ ಲಕ್ಷಣವಾದಜ್ವರ, ಶೀತ,ಕೆಮ್ಮು, ಮುಂತಾದವುಗಳಿಗೆ ಮದ್ದನ್ನು ವೈದ್ಯರಿಂದ ಪಡೆಯುತ್ತಿದ್ದು, ನಂತರ ರೋಗ ಉಲ್ಬಣಗೊ0ಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೆ ಕೆಲವು ರೋಗಿಗಳು ತುಂಬಾ ಉಲ್ಬಣಗೊ0ಡ ನಂತರ ದಾಖಲಾಗುವುದರಿoದ ಮರಣ ಹೊಂದುತ್ತಿದ್ದಾರೆ.
ಕೋವಿಡ್ ರೋಗ ಲಕ್ಷಣವಾದ ಕೆಮ್ಮು,ಜ್ವರ,ಮೈಕೈ ನೋವು ಮುಂತಾದವುಗಳು ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿ ಕೊಳ್ಳುವುದು ಅತೀ ಅವಶ್ಯಕವಾಗಿದ್ದು, ಕೋವಿಡ್ ದೃಡ ಪಟ್ಟಲ್ಲಿಅದಕ್ಕೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವುದು ಸಾಧ್ಯ ವಾಗುತ್ತದೆ. ಆದರೆ ಪ್ರಾರಂಭದಲ್ಲಿ ಸ್ಥಳೀಯ ವೈದ್ಯರಿಂದ ತಾತ್ಕಾಲಿಕ ಉಪಶಮನ ಪಡೆಯುವುದರಿಂದ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದರೂ, ದಿನ ಕಳೆದಂತೆ ರೋಗ ಲಕ್ಷಣಗಳು ಉಲ್ಬಣಗೊಂಡು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ದಾಖಲಾದಾಗ ತುoಬಾ ತಡವಾಗಿರುತ್ತದೆ.
ರೋಗಿಗಳಲ್ಲಿ ಸೋಂಕು ಲಕ್ಷಣ ಕಂಡು ಬಂದಲ್ಲಿ ವೈದ್ಯರು ತಾತ್ಕಾಲಿಕ ಉಪಶಮನ ಚಿಕಿತ್ಸೆ ನೀಡದೆ, ನೇರವಾಗಿ ಕೊರೋನಾ ಸೋಂಕಿನ ಬಗ್ಗೆ ಪರೀಕ್ಷೆ ಮಾಡಿ ವರದಿ ಪಡೆಯಲು ಕಡ್ಡಾಯವಾಗಿ ಸೂಚನೆ ನೀಡಬೇಕು. ಕ್ಲಿನಿಕ್ ನಲ್ಲಿ ಸ್ಥಳೀಯ ಕೋರೋನಾ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಿ, ರೋಗ ಉಲ್ಬಣಗೊಂಡು ರೋಗಿಗಳು ಮೃತಪಟ್ಟ ಪ್ರಕರಣಗಳು ಕಂಡು ಬoದಲ್ಲಿ ಅಂತಹ ವೈದ್ಯರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳು 2020 ರ ಕಾಯಿದೆಯಂತೆ ಕ್ರಮಕೈಗೊಳ್ಳಲಾಗುವುದು ಅಲ್ಲದೆ ಅಂತವರ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.