ಸಂಸದೆ ಶೋಭಾರ ಸುಳ್ಳು ಆರೋಪದಿಂದ ನೋವಾಗಿದೆ: ರೊಯ್ ಕ್ಯಾಸ್ತೆಲಿನೊ

ಮಂಗಳೂರು: ಕೋವಿಡ್ 19 ರ ಈ ಪ್ರತಿಕೂಲ ಸಮಯದಲ್ಲಿ ಕ್ರೈಸ್ತ ಸಮುದಾಯವು ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಚರ್ಚುಗಳಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಿನ ಹಸ್ತ ನೀಡುತ್ತಾ ಬಂದಿದೆ. ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸಹಕರಿಸಲಾಗುತ್ತಿದೆ. 

ವ್ಯಾಕ್ಸಿನ್ ಪಡೆಯಲು ಸಾರ್ವಜನಿಕರಿಗೆ ಮಾಹಿತಿ ನೀಡಿ, ಆರಂಭದಲ್ಲಿ ಚರ್ಚ್ ವಠಾರಗಳಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗಿದೆ. ಧರ್ಮಾಧ್ಯಕ್ಷರುಗಳು, ಧರ್ಮಗುರುಗಳು, ಇತರ ಕ್ರೈಸ್ತ ಮುಖಂಡರುಗಳು ತಾವೇ ಮುಂದೆ ನಿಂತು ವ್ಯಾಕ್ಸಿನ್ ಪಡೆಯಲು ಪ್ರೋತ್ಸಾಹಿಸುತ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಚರ್ಚುಗಳಲ್ಲಿ, ವ್ಯಾಕ್ಸಿನ್ ಹಾಕಿಸಬಾರದು ಎಂದು ಪ್ರಚುರಪಡಿಸಲಾಗುತ್ತಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆಯವರ ಸುಳ್ಳು ಆರೋಪದಿಂದ ನೋವಾಗಿದೆ. ಇದನ್ನು ಖಂಡಿಸುತ್ತೇವೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕ್ಯಾಸ್ತೆಲಿನೊ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!