ಉಡುಪಿ: 94 ವಾಹನ ಸೀಜ್, ರೂ.70,000 ದಂಡ ವಸೂಲಿ
ಉಡುಪಿ: (ಉಡುಪಿ ಟೈಮ್ಸ್ ವರದಿ)ಈ ದಿನ ಬೆಳಿಗ್ಗೆ ಜಿಲ್ಲೆಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಕುಂದಾಪುರ, ಎಲ್ಲಾ ತಹಶೀಲ್ದಾರರು, ಸರಕಾರದ ಆದೇಶದಂತೆ ವಿಧಿಸಲಾಗಿರುವ ನಿಭ೯೦ದನೆಗಳನ್ನು ಜಾರಿಗೊಳಿಸಿರುವ ಬಗ್ಗೆ ಪರಿಶೀಲಿಸಲು ನೇಮಿಸಲಾಗಿರುವ flying squad ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಸ್ತೆಗಿಳಿದು ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಹೀಗೆ ಸುಮಾರು ಜಿಲ್ಲೆಯಾದ್ಯಂತ 94 ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳ ಲಾಯಿತು. ನಿಯಮಬಾಹಿರವಾಗಿ ತೆರೆಯಲಾಗಿದ್ದ ಅನೇಕ ಅಂಗಡಿಗಳನ್ನು ಖಡಕ್ ಎಚ್ಚರಿಕೆ ನೀಡಿ ಮುಚ್ಚಲಾಯಿತು. ಸುಮಾರು 70,000-00 ದಂಡವನ್ನು ಮಾಸ್ಕ್ ಧರಿಸದಿರುವುದು ಮತ್ತು ಸಾಮಾಜಿಕ ಅಂತರ ಕಾಪಾಡದಿರುವ ಬಗ್ಗೆ ವಸೂಲಿ ಮಾಡಲಾಯಿತು.
ಈ ಸಂದಭ೯ದಲ್ಲಿ ಸಾವ೯ಜನಿಕರು ನಿತ್ಯಬಳಕೆಯ ವಸ್ತುಗಳನ್ನು ಖರೀದಿಸಲು ಇರುವ ಅವಕಾಶವನ್ನು ತುಂಬಾ ದೂರ ತಿರುಗಾಡಲು ದುಬ೯ಳಕೆ ಮಾಡುವುದನ್ನು ಗಮನಿಸಲಾಗಿದೆ. ದಿನಸಿ, ತರಕಾರಿ, ಮೀನು ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ತಮ್ಮ ಮನೆಯ ಹತ್ತಿರದ ಅಂಗಡಿಗಳಲ್ಲೇ ಖರೀದಿಸಬೇಕಲ್ಲದೆ ದೂರ ಅಲೆದಾಡಲು ಹೊರಗೆ ಬಂದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಅದೇ ರೀತಿ ನಿಯಮಬಾಹಿರವಾಗಿ ಮಾರ್ಗ ಸೂಚಿಯಂತೆ ಅನುಮತಿ ಇಲ್ಲದ ಯಾವುದೇ ಅಂಗಡಿಯನ್ನು ತೆರೆಯುವಂತಿಲ್ಲ. ತೆರೆದಲ್ಲಿ ಅಂತಹ ಅಂಗಡಿಗಳ ಪರವಾನಿಗೆಯನ್ನು ಕೋವಿಡ್ ಮುಗಿಯುವ ತನಕ ಅಮಾನತುಗೊಳಿಸಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ. ಸಾವ೯ಜನಿಕರು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರಸ್ತುತ ವಸ್ತುಸ್ಥಿತಿಯನ್ನು ಅಥ೯ ಮಾಡಿಕೊಂಡು ಅನಾವಶ್ಯಕವಾಗಿ ಹೊರಗಡೆ ಓಡಾಡದಂತೆ ಎಚ್ಚರಿಕೆ ವಹಿಸಲು ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕೋರಲಾಗಿದೆ.