ಚೀನಾ ಗಡಿ ಬಿಕ್ಕಟ್ಟು, ಕೋವಿಡ್ ವಿಷಮ ಸ್ಥಿತಿ ಕೇಂದ್ರದ ತಪ್ಪು ನಿರ್ಧಾರಗಳಿಗೆ ಸಾಕ್ಷಿ: ಸೋನಿಯಾ ಗಾಂಧಿ

ನವದೆಹಲಿ: ಭಾರತವು ಭೀಕರ ಆರ್ಥಿಕ ಬಿಕ್ಕಟ್ಟು, ಭೀಕರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದೆ ಮತ್ತು ಈಗ, ಚೀನಾದ ಗಡಿಯಲ್ಲಿ ಕೂಡ ಬಿಕ್ಕಟ್ಟು ಉಂಟಾಗಿದೆ. ಈ ಎಲ್ಲಾ ಬಿಕ್ಕಟ್ಟು, ವಿಷಮ ಪರಿಸ್ಥಿತಿಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ತಪ್ಪು ನಿರ್ಧಾರಗಳು, ತೀರ್ಮಾನಗಳೇ ಕಾರಣ. ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಗಳು ಕಾರಣವೆಂದು  ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಚೀನಾದ ಗಡಿಯಲ್ಲಿನ ಪರಿಸ್ಥಿತಿ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಬಗ್ಗೆ ಚರ್ಚಿಸಲು ಪಕ್ಷವು ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅವರು ಮಾತನಾಡಿದರು.

“ಈ ಪರುಸ್ಥಿತಿ ದೇಶದ ಸುರಕ್ಷತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ವ್ಯಾಪಕವಾದ ಕಂಟಕ ಹಾಗೂ ದುಃಸ್ವಪ್ನವಾಗಿದೆ” ಎಂದು ಅವರು ಹೇಳಿದರು.ಚೀನಾದೊಂದಿಗಿನ ಎಲ್‌ಎಸಿಯಲ್ಲಿ ನಮಗೆ ಬಿಕ್ಕಟ್ಟು ಇದೆ. ನಿರಾಕರಿಸಲಾಗದ ಸಾಂಗತಿ ಎಂದರೆ 2020 ರ ಏಪ್ರಿಲ್-ಮೇ ತಿಂಗಳಿನಿಂದ ಇಲ್ಲಿಯವರೆಗೆ, ಚೀನಾದ ಸೈನಿಕರು ಪಾಂಗೊಂಗ್ ತ್ಸೊ ಸರೋವರ ಪ್ರದೇಶ ಹಾಗೂ ಗಾಲ್ವಾನ್ ಕಣಿವೆಯಲ್ಲಿರುವ ನಮ್ಮ ಭೂಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಆದರೆ ಸರ್ಕಾರ ಇದನ್ನು ನಿರಾಕರಿಸುತ್ತಿದೆ.

“ಒಳನುಗ್ಗುವಿಕೆ ಖಚಿತವಾಗಿದ್ದು ಮೇ 5, 2020 ರಂದು ಅದು ವರದಿಯಾಗಿದೆ. ಆದರೆ ಶಾಂತಿಯ ನಿರ್ಣಯದ ಬದಲು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.  ಜೂನ್ 15-16 ರಂದು ಹಿಂಸಾತ್ಮಕ ಘರ್ಷಣೆಗಳು ನಡೆದವು. ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು,ರು, 85 ಮಂದಿ ಗಾಯಗೊಂಡರು ಮತ್ತು 10 ಮಂದಿ ‘ಕಾಣೆಯಾಗಿದ್ದಾರೆ’ ಲಡಾಖ್ ನಲ್ಲಿ  ಭಾರತೀಯ ಭೂಪ್ರದೇಶಕ್ಕೆ ಯಾರೂ ಅಕ್ರಮವಾಗಿ ನುಗ್ಗಿಲ್ಲ ಎಂದು ಪ್ರಧಾನಿ ಹೇಳಿದಾಗ ಅವರನ್ನು ಪ್ರಶ್ನಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯಗಳಲ್ಲಿ, ರಾಷ್ಟ್ರವು ಯಾವಾಗಲೂ ಒಟ್ಟಾಗಿ ನಿಂತಿದೆ ಮತ್ತು ಈ ಬಾರಿಯೂ ಸಹ ಹಾಗೆಯೇ ಆಗುವುದು” ಸೋನಿಯಾ ಹೇಳೀದ್ದಾರೆ.

ಸರ್ಕಾರವು ಪರಿಸ್ಥಿತಿಯನ್ನು ಗಂಭೀರವಾಗಿ ನಿಭಾಯಿಸಿದೆ ಎಂಬ ಭಾವನೆ ಜನರಲ್ಲಿ ಹೆಚ್ಚುತ್ತಿದೆ ಎಂದ ಸೋನಿಯಾ ಗಾಂಧಿ  “ಭವಿಷ್ಯವು ಇನ್ನೂ ಗುಪ್ತವಾಗಿದೆ. ಆದರೆ ಪ್ರಬುದ್ಧ ರಾಜತಾಂತ್ರಿಕತೆ ಮತ್ತು ನಿರ್ಣಾಯಕ ನಾಯಕತ್ವವು ನಮ್ಮ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಸರ್ಕಾರದ ಕ್ರಮಗಳು ಉತ್ತಮವಾಗಿರಲಿದೆ ಎಂದು ನಾವು ಭಾವಿಸುತ್ತೇವೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ಮಾರ್ಗದರ್ಶನ ನೀಡುವ ಏಕೈಕ ತತ್ವವೆಂದರೆ ಶಾಂತಿಮತ್ತು ಎಲ್‌ಎಸಿಯ ಉದ್ದಕ್ಕೂ ಯಥಾಸ್ಥಿತಿ ಪುನಃಸ್ಥಾಪನೆ. ಇದಕ್ಕಾಗಿ ನಾವು  ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತೇವೆ. 

“ಸಾಂಕ್ರಾಮಿಕ ರೋಗದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ, ಮೋದಿ ಸರ್ಕಾರವು ನಮ್ಮ ಸಲಹೆಗಳನ್ನು ಕೇಳಲು ನಿರಾಕರಿಸುತ್ತದೆ ಮತ್ತು ಸಮಯದ ಅಗತ್ಯವಿದ್ದು ಹಣವೀಗ ನೇರವಾಗಿ ಬಡವರ ಕೈಯಲ್ಲಿ ಹೋಗಬೇಕಿದೆ. ಎಂಎಸ್‌ಎಂಇಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು ಮತ್ತು ಬೇಡಿಕೆಯನ್ನು ಉತ್ತೇಜಿಸುವುದು ತುರ್ತಾಗಿ ಆಗಬೇಕಿದೆ.  ಆದರೆ  ಸರ್ಕಾರವು ಜಿಡಿಪಿಯ ಅತ್ಯಂತ ಕೆಳಮಟ್ಟಕ್ಕಿಂತ ತ ಕಡಿಮೆ ಹಣಕಾಸಿನ ಘಟಕವನ್ನು ಹೊಂದಿರುವ ನಿರ್ಜೀವ  ಹಣಕಾಸು ಪ್ಯಾಕೇಜ್ ಅನ್ನು ಘೋಷಿಸಿತು ಜಾಗತಿಕ ಬೆಲೆಗಳ ಇಳಿಕೆ ಸಮಯದಲ್ಲೇ ಸತತ 17 ದಿನಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಷ್ಕರುಣೆಯಿಂದ ಹೆಚ್ಚಿಸುವ ಮೂಲಕ ಸರ್ಕಾರವು ಗಾಯಕ್ಕೆ ಉಪ್ಪು ಸವರಿದೆ. ಇದರ ಪರಿಣಾಮವೆಂದರೆ 42 ವರ್ಷಗಳಲ್ಲಿ ಮೊದಲ ಬಾರಿ ಭಾರತದ ಆರ್ಥಿಕತೆ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆ “ಎಂದು ಅವರು ಹೇಳಿದರು.

ಹೆಚ್ಚುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ಆದಾಯ ಕಡಿಮೆ ಹೂಡಿಕೆಗಳು ಆರ್ಥಿಕ ಚೇತರಿಕೆಗೆ ಬಹಳ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಸೋನಿಯಾ ಗಾಂಧಿ ಸರ್ಕಾರವು ತನ್ನ ಹಾದಿಯನ್ನು ಸರಿಪಡಿಸಿಕೊಂಡು ಉತ್ತಮ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡರೆ ಮಾತ್ರ ಇದು ಸಾಧ್ಯವಾಗಲಿದೆ ಎಂದಿದ್ದಾರೆ.

“ಫೆಬ್ರವರಿಯಲ್ಲಿ ಸಾಂಕ್ರಾಮಿಕ ರೋಗವು ಭಾರತವನ್ನು ಪ್ರವೇಶಿಸಿತ್ತು. ಆ ಸಮಯದಲ್ಲೇ ಕಾಂಗ್ರೆಸ್ ತನ್ನ ಸಂಪೂರ್ಣ ಬೆಂಬಲವನ್ನು ಸರ್ಕಾರಕ್ಕೆ ನೀಡಿತು ಮತ್ತು ಲಾಕ್‌ಡೌನ್ 1.0 ಅನ್ನು ಬೆಂಬಲಿಸಿತು. ವಾರಗಳಲ್ಲಿ, ಲಾಕ್‌ಡೌನ್‌ನ ಪರಿಣಾಮವನ್ನು ನಿರ್ವಹಿಸಲು ಸರ್ಕಾರವು ಸಂಪೂರ್ಣವಾಗಿ ಸಿದ್ಧವಾಗಿಲ್ಲ ಎಂಬುದು ಸ್ಪಷ್ಟವಾಯಿತು. ಇದರ ಫಲಿತಾಂಶ  1947-48ರ ಬಳಿಕ ಅತಿದೊಡ್ಡ  ವಲಸೆ ಬಿಕ್ಕಟ್ಟು ಸೃಷ್ಟಿಯಾಗಿತ್ತು.  ಲಕ್ಷಾಂತರ ವಲಸೆ ೯ಪ್ರವಾಸಿ) ಕಾರ್ಮಿಕರು, ದೈನಂದಿನ ಕೂಲಿ ಮಾಡುವವರು ಮತ್ತು ಸ್ವ ಉದ್ಯೋಗಿಗಳು ಅಸಹಾಯಕರಾದರು.  130 ದಶಲಕ್ಷ ಉದ್ಯೋಗಗಳು ನಷ್ಟವಾದವು. ಕೋಟಿಗಟ್ಟಲೆ ಎಂಎಸ್‌ಎಂಇಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಧಾನಿ ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಭರವಸೆ ನೀಡುತ್ತಿದ್ದಾರೆ. ಆದರೆ  ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿದೆ.

“ಆರೋಗ್ಯ ಮೂಲಸೌಕರ್ಯದಲ್ಲಿನ ಗಂಭೀರ ನ್ಯೂನತೆ ಬಹಿರಂಗವಾಗಿದೆ. ಭರವಸೆಯ “ಬೆಳಕು” ಎಲ್ಲೂ ಕಾಣುತ್ತಿಲ್ಲ.  ಕೇಂದ್ರವು ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿಯನ್ನು ರವಾನಿಸಿದೆ. ಆದರೆ ಅವರಿಗೆ ಹೆಚ್ಚುವರಿ ಹಣಕಾಸು ನೀಡದೆ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಡಲಾಗಿದೆ ಸಾಂಕ್ರಾಮಿಕ ರೋಗದ ಪರಿಸ್ಥಿತಿ ದುರಪಯೋಗವನ್ನು ನೋಡಿ ಮೋದಿ ಸರ್ಕಾರ ಅತ್ಯಂತ ವಿನಾಷಕಾರಿ ವೈಫಲ್ಯ ಕಂಡಿದೆ. . ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರಿಗೆ  ಸಹಾಯ ಮತ್ತು ಬೆಂಬಲವನ್ನು ನೀಡಲು ತಮ್ಮದೇ ಆದ ರಕ್ಷಣೆಯೊಂದಿಗೆ ಹೊರಟ ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.” ಅವರು ಹೇಳಿದ್ದಾರೆ. 

Leave a Reply

Your email address will not be published. Required fields are marked *

error: Content is protected !!