ಉಡುಪಿ: ಕಲ್ಲು ಗಣಿಗಾರಿಕೆಗೆ ಅನುಮತಿ- ಜಿಲ್ಲಾಧಿಕಾರಿ

ಉಡುಪಿ, ಮೇ 19: ಕೋವಿಡ್-19ರ ಎರಡನೇ ಅಲೆಯ ಸಾಂಕ್ರಾಮಿಕ ರೋಗವು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಹೊರಡಿಸಲಾದ ಸರ್ಕಾರದ ಆದೇಶದಂತೆ ಈ ಕೆಳಕಂಡ ಸೇರ್ಪಡೆ ಮಾಡಿ, ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ. ಕೈಗಾರಿಕೆಗಳು / ಕೈಗಾರಿಕಾ ಸ್ಥಾಪನೆ / ಉತ್ಪಾದನಾ ಘಟಕಗಳ ಕಾರ್ಯಾಚರಣೆಗೆ ಸಂಬOಧಿಸಿ 11ನೇ ಷರತ್ತಿಗೆ ಉಪ- ಷರತ್ತುಗಳನ್ನು (ಎಫ್) ಮತ್ತು (ಜಿ) ಸೇರಿಸಲಾಗಿದೆ.

ಉಪ-ಷರತ್ತು (ಎಫ್) ಉಕ್ಕಿನ ಉದ್ಯಮದ ನಿರಂತರ ಕಾರ್ಯಾಚರಣೆಗೆ ಅಗತ್ಯವಾದ ಡೊಲೊಮೈಟ್, ಸ್ಫಟಿಕ ಶಿಲೆ ಮತ್ತು ಕಚ್ಚಾ
ವಸ್ತುಗಳ ಗಣಿಗಾರಿಕೆ ಮತ್ತು ಸಾಗಣೆಗೆ ಅನುಮತಿಸಲಾಗಿದೆ. ಉಪ-ಷರತ್ತು(ಜಿ)ರಸ್ತೆ ಕಾಮಗಾರಿ , ಮಾನ್ಸೂನ್ ಪೂರ್ವದ ಕೆಲಸಗಳು ಮತ್ತು ಕೊರೆತದಿಂದ ಉಂಟಾದ ಹಾನಿಯ ಮರುನಿರ್ಮಾಣ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣಸಾಮಗ್ರಿಗಳಿಗೆ ಸಂಬOಧಿಸಿದ ಕ್ವಾರಿಗಳ ಗಣಿಗಾರಿಕೆ ಅನುಮತಿಸಲಾಗಿದೆ. ನಿರ್ಮಾಣ ಚಟುವಟಿಕೆಗಳಿಗೆ ಸಂಬOಧಿಸಿದ 12ನೇ ಷರತ್ತುಗೆ ಈ ಕೆಳಕಂಡ ಉಪ-ಷರತ್ತುಗಳನ್ನು ಸೇರಿಸಲಾಗಿದೆ. ಉಪ-ಷರತ್ತು (ಎ) ಉಡುಪಿ ಜಿಲ್ಲೆಯಲ್ಲಿ ಚಂಡಮಾರುತದಿOದ ಹಾನಿಗೊಳಗಾದ ಪ್ರವಾಹ ಸಂರಕ್ಷಣಾ ರಚನೆಗಳು ,ಸಮುದ್ರ ಕೊರೆತದಿಂದ ಉಂಟಾದ ಹಾನಿಯ ಪುನಃಸ್ಥಾಪನೆ ಮತ್ತು ಇತರ ಮೂಲಸೌಕರ್ಯಗಳ ದುರಸ್ತಿ ಮತ್ತು ಪುನಃರ್ನಿರ್ಮಾಣ ಕಾಮಗಾರಿಗಳಿಗೆ ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ನಡೆಸಲು ಅನುಮತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!