ಉಡುಪಿ: ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯುವ ಬಗ್ಗೆ ಮಾಹಿತಿ

ಉಡುಪಿ, ಮೇ 19: ಉಡುಪಿ ಜಿಲ್ಲೆಯಲ್ಲಿ ಮೇ 20 ರಂದು ಯಾವುದೇ ಕೋವಿಡ್ ಲಸಿಕೆ ಪ್ರಥಮ ಡೋಸ್ ನೀಡಲಾಗುವುದಿಲ್ಲ. ಉಡುಪಿ ನಗರ ಪ್ರದೇಶದಲ್ಲಿ 30.03.2021 ಅಥವಾ ಅದಕ್ಕಿಂತ ಮೊದಲು 1ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡು 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯಲ್ಲಿ (100 ಡೋಸ್), ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲದಲ್ಲಿ (100 ಡೋಸ್), ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯಲ್ಲಿ (100 ಡೋಸ್) ಹಾಗೂ ಸರಕಾರಿ (ಬಿ.ಆರ್.ಎಸ್) ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿಯಲ್ಲಿ (100 ಡೋಸ್) ಮೇ 20 ರಂದು ಅಪರಾಹ್ನ 2 ಗಂಟೆಯಿ0ದ 4 ಗಂಟೆಯವರೆಗೆ ಲಸಿಕಾ ಕೇಂದ್ರ ಏರ್ಪಡಿಸಲಾಗಿದೆ.

ಸದರಿ 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ SMS ಕಳುಹಿಸಲಾಗುವುದು. SMS ನಲ್ಲಿ ತಿಳಿಸಿರುವ ಆಸ್ಪತ್ರೆಗೆ ಬಂದು ಲಸಿಕೆಯನ್ನು ಪಡೆದುಕೊಳ್ಳುವುದು. ಜಿಲ್ಲೆಯಲ್ಲಿ ಯಾವುದೇ ಕೋವಿಶೀಲ್ಡ್ ಲಸಿಕಾ ಕೇಂದ್ರ ಇರುವುದಿಲ್ಲ ಎಂದು ಜಿಲ್ಲಾ ಆರೊಗ್ಯ ಮತ್ತು ಕು.ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!