ಕರಾವಳಿಗೆ ಮತ್ತೊಂದು ಗಂಡಾಂತರ: ತೌಕ್ತೇ ಬಳಿಕ ಇನ್ನು’ಯಾಸ್’ ಚಂಡಮಾರುತ ಅಬ್ಬರ
ನವದೆಹಲಿ ಮೇ.19: ತೌಕ್ತೆ ಚಂಡಮಾರುತದ ಪ್ರಭಾವದಿಂದ ತತ್ತರಿಸಿದ ದೇಶದ ಕರಾವಳಿಯ ಜನರಿಗೆ ಮತ್ತೊಂದು ಚಂಡ ಮಾರುತದ ಭೀತಿ ಎದುರಾಗಿದೆ.
ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ತೌಕ್ತೇ ಚಂಡಮಾರುತದ ಬೆನ್ನಲೇ ಇದೀಗ ಮೇ. 23 ರಂದು ‘ಯಾಸ್’ ಚಂಡಮಾರುತ ಅಪ್ಪಳಿಸಲಿದೆ ಎಂದು ತಿಳಿಸಿದೆ.
ಈ ಬಗ್ಗೆ ಹವಾಮಾನ ಇಲಾಖೆಯ ಪ್ರಭಾರ ಅಧಿಕಾರಿ ಸುನೀತಾ ದೇವಿ ಅವರು ಮಾಹಿತಿ ನೀಡಿದ್ದು, ಅದರಂತೆ ಮುಂದಿನ ವಾರದಲ್ಲಿ ಅಂದರೆ ಮೇ.23 ರಂದು ಬಂಗಾಳ ಕೊಲ್ಲಿ ಪ್ರದೇಶದಲ್ಲಿ ‘ಯಾಸ್’ ಚಂಡಮಾರುತ ಕಡಿಮೆ ಪ್ರಮಾಣದ ಒತ್ತಡದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರ ಇದು ತೀವ್ರವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಈ ಚಂಡಮಾರುತದ ಮುಂದಿನ ಬೆಳವಣಿಗೆ ನೋಡಿ ಅಧಿಕೃತವಾಗಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಹವಾಮಾನ ಇಲಾಖೆ ಪ್ರಕಾರ, ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯ ಮೇಲ್ಮೈ ಉಷ್ಣಾಂಶವು 1-2 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿದೆ. ಇದು ಚಂಡಮಾರುತದ ಬೆಳವಣಿಗೆಗೆ ಅನುಕೂಲಕರವಾಗಿದೆ ಆದರೆ ಈ ಚಂಡಮಾರುತ ಮಯನ್ಮಾರ್ ನತ್ತ ಸಾಗುವ ಸಾಧ್ಯತೆ ಇದ್ದು ಭಾರತಕ್ಕೆ ಅಪ್ಪಳಿಸುವ ಸಂಭವ ಕಡಿಮೆ ಇದೆ ಎಂದು ತಿಳಿಸಿದೆ.