ಮಂಗಳೂರು: 6 ಮಂದಿಗೆ ಬ್ಯ್ಲಾಕ್ ಫಂಗಸ್, ಓರ್ವರ ಮೃತ್ಯು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಮಂದಿಯಲ್ಲಿ ಬ್ಯ್ಲಾಕ್ ಫಂಗಸ್ ರೋಗ ಪತ್ತೆಯಾಗಿದ್ದು, ಸೋಂಕಿತರಲ್ಲಿ ಮೂವರು ವೆನ್ಲಾಕ್ ಆಸ್ಪತ್ರೆಯಲ್ಲಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ಯ್ಲಾಕ್ ಫಂಗಸ್ ಚಿಕಿತ್ಸಾ ವಿಧಾನಕ್ಕೆ ಸಬಂಧಿಸಿದಂತೆ ಡಾ.ಎಚ್ ಎಸ್ ಸತೀಶ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಪೋರ್ಸ್ ಸಮಿತಿಯ ಶಿಫಾರಸ್ಸುಗಳನ್ನು ಅನುಸರಿಸಲು ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ. ಮಂಗಳೂರಿನ ವೆನ್ಲಾಕ್ ನಲ್ಲೂ ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ, ಈ ಕಾಯಿಲೆಯ ಚಿಕಿತ್ಸೆಗೆ ಬರುವ ರೋಗಿಗಳನ್ನು ಚಿಕಿತ್ಸಾ ಸಮರ್ಥ್ಯ ಹೊಂದಿರುವ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿ ವಾಪಾಸ್ ಕಳುಹಿಸುವಂತಿಲ್ಲ.
ಈಗಾಗಲೇ ಶಂಕಿತ ಬ್ಯ್ಲಾಕ್ ಫಂಗಸ್ ಗೆ ತುತ್ತಾದ ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.