20 ಲಕ್ಷ ಗ್ರಾಹಕರಿಗೆ ಸಂಭವನೀಯ ಸೈಬರ್‌ ದಾಳಿ: ಎಸ್‌ಬಿಐ

ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಬಹುದು ಎಂದು ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 20 ಲಕ್ಷ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ‘ಫೆಡರಲ್ ಬ್ಯಾಂಕ್’ ಸಹ ತನ್ನ ಗ್ರಾಹಕರಿಗೆ ಸೈಬರ್ ದಾಳಿ ನಡೆಯಬಹುದು, ಎಚ್ಚರದಿಂದಿರಿ’ ಎಂಬ ಎಸ್‌ಎಂಎಸ್ ಕಳಿಸಿದೆ.

‘ಎಚ್ಚರಿಕೆ ಭಾರತದ ಪ್ರಮುಖ ನಗರಗಳಲ್ಲಿ ಸೈಬರ್ ದಾಳಿ ನಡೆಯಬಹುದು ಎಂದು ನಮಗೆ ತಿಳಿದುಬಂದಿದೆ. ಇಮೇಲ್‌ಗಳನ್ನು ಚೆಕ್ ಮಾಡುವಾಗ ಹುಷಾರಾಗಿರಿ. [email protected] ಎಂಬ ಇಮೇಲ್ ವಿಳಾಸದಿಂದ ಬರುವ, Free COVID-19 Testing ಎಂಬ ಸಬ್ಜೆಕ್ಟ್ ಲೈನ್ ಇರುವ ಇಮೇಲ್‌ಗಳನ್ನು ಕ್ಲಿಕ್ ಮಾಡಬೇಡಿ’ ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ.

ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿರುವ ಬಹುತೇಕ ನಿವಾಸಿಗಳಿಗೆ “Free Covid-19 Testing” ಸಬ್ಜೆಕ್ಟ್‌ ಲೈನ್ ಇರುವ ಇಮೇಲ್‌ಗಳು ಬರಬಹುದು ಎಂದು ಎಸ್‌ಬಿಐ ಮುನ್ನೆಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!