ವೈದ್ಯಕೀಯ ಉಪಕರಣ ಕಳುಹಿಸುವುದಾಗಿ ಉದ್ಯಮಿಗೆ ಲಕ್ಷಾಂತರ ರೂ. ವಂಚನೆ

ಮಂಗಳೂರು: ಬಿಜೈಯಲ್ಲಿ ವೈದ್ಯಕೀಯ ಉಪಕರಣಗಳ ಸರಬರಾಜು ವ್ಯವಹಾರ ನಡೆಸುತ್ತಿರುವ ಉದ್ಯಮಿಗೆ ವಂಚಿಸಲಾಗಿದೆ.

ಇಂಡಿಯಾ ಮಾರ್ಟ್ ವೆಬ್ ಸೈಟ್ ನಲ್ಲಿ ಮಂಗಳೂರಿನ ಉದ್ಯಮಿಯೋರ್ವರು ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನೋಂದಣಿ ಮಾಡಿದ್ದರು. ಮೇ 13ರಂದು ಮುಂಬೈ ಡೊಂಬಿವಿಲಿಯ ಓಂ ಸಾಯಿ ಎಂಟರ್ಪ್ರೈಸಸ್ ಸಂಸ್ಥೆಯವರಿಂದ ತಿಳಿಸಿ ಉಪಕರಣ ಸರಬರಾಜು ಮಾಡುವುದಾಗಿ 11.86 ಲಕ್ಷ ರೂ. ಖಾತೆಗೆ ವರ್ಗಾಯಿಸಿ ಉಪಕರಣ ಸರಬರಾಜು ಮಾಡದೆ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸಂಸ್ಥೆಯ ಮಾಲಕ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!